ಭೀಕರ ಬಸ್ ಅಪಘಾತ: 8 ವಿದ್ಯಾರ್ಥಿಗಳ ಸಾವು

ಟಾಟಾ ಏಸ್ ಮತ್ತು ಖಾಸಗಿ ಸಾರಿಗೆ ಬಸ್ ಮಧ್ಯೆ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ 10 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ.
ಏನಾಯಿತು?: ಶಾಲೆಗೆ ತೆರಳಲು ವಿದ್ಯಾರ್ಥಿಗಳು ಬಸ್ಸಿಗೆ ಕಾಯುತ್ತಿದ್ದರು. ಆದರೆ ಬಸ್ ತಡವಾದ ಕಾರಣ 10 ಮಂದಿ ವಿದ್ಯಾರ್ಥಿಗಳು ಟಾಟಾ ಏಸ್ ವಾಹನವೇರಿದರು. ಆ ಸಂದರ್ಭದಲ್ಲಿ ಎದುರಿನಿಂದ ಬಂದ ಖಾಸಗಿ ಬಸ್ಸೊಂದು ಢಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಅಪಘಾತದ ತೀವ್ರತೆಗೆ ಟಾಟಾ ಏಸ್ ಸಂಪೂರ್ಣ ನಜ್ಜುಗುಜ್ಜಾಗಿದೆ. 8 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿರುವ ಇತರ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂತ್ರಾಲಯ ಬಸ್ ಸೇತುವೆಗೆ ಡಿಕ್ಕಿ:
ಮಂತ್ರಾಲಯಕ್ಕೆ ಹೊರಟಿದ್ದ ಸರಕಾರಿ ಬಸ್ ಇಂದು ಬೆಳಗ್ಗೆ ಧಾರವಾಡದ ಶಿವಣ್ಣಿ ಗ್ರಾಮದ ಬಳಿ ಸೇತುವೆಗೆ ಡಿಕ್ಕಿ ಹೊಡೆದು 20 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications