ಬಸ್ ಪರಿಚಾರಕಿ ಕೆನ್ನೆಗೆ ರಪ್ಪನೆ ಬಾರಿಸಿದ ಶಾಸಕಿ

Punjab PML-N legislator Nighat Sheikh slaps bus hostess Iqra Nawaz
ಪಂಜಾಬ್, ಜೂನ್ 18: ಕೇಳಿದ ತಕ್ಷಣ ನೀರು ನೀಡಲಿಲ್ಲವೆಂದು ಸಿಟ್ಟಿಗೆದ್ದ ಶಾಸಕಿ ಲಕ್ಷುರಿ ಬಸ್ಸೊಂದರ ಪರಿಚಾರಕಿಯ ಕೆನ್ನೆಗೆ ರಪ್ಪನೆ ಬಾರಿಸಿದ ಘಟನೆ ಭಾನುವಾರ ನಡೆದಿದೆ.

ಇದು ನಡೆದಿರುವುದು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ. ಪಂಜಾಬ್ ಪ್ರಾಂತ್ಯದ ಆಡಳಿತಾರೂಢ PML-N ಪಕ್ಷದ ಶಾಸಕಿ ನಿಘತ್ ಷೇಕ್ ಅವರು ತಮ್ಮ ಪರಿವಾರದ ಸಮೇತ ಐಷಾರಾಮಿ ಬಸ್ಸಿನಲ್ಲಿ ಸಂಚರಿಸುತ್ತಿದ್ದರು. ಆ ವೇಳೆ, ಬಸ್ ಪರಿಚಾರಕಿಯು ತಾನು ಕೇಳಿದ ತಕ್ಷಣ ಬಿಸಿ ನೀರು ಒದಗಿಸಲಿಲ್ಲವೆಂದು ಶಾಸಕಿ ನಿಘತ್ ಆಕೆಯ ಕೆನ್ನೆಗೆ ಬಾರಿಸಿ ಅವಮಾನ ಮಾಡಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಷಹಬಾಜ್ ಷರೀಫ್ ಅವರು ಘಟನೆಯ ಬಗ್ಗೆ ಪೊಲೀಸ್ ತನಿಖೆಗೆ ಆದೇಶಿಸಿದಿದ್ದಾರೆ. ಬಸ್ಸು ಮುರ್ರೆಯಿಂದ ಲಾಹೋರಿಗೆ ತೆರಳುತ್ತಿತ್ತು. ಕೇಳಿದ ತಕ್ಷಣ ನೀರು ಒದಗಿಸಲಿಲ್ಲವೆಂದು ಶಾಸಕಿ ನಿಘತ್ ಬಸ್ ಪರಿಚಾರಕಿ ಇಖ್ರಾ ನವಾಜ್ ಕೆನ್ನೆಗೆ ರಪ್ಪನೆ ಬಾರಿಸಿದ ಶಾಸಕಿ, ನಂತರ ಆಕೆಯ ಮೇಲೆ ದೈಹಿಕ ಹಲ್ಲೆಯನ್ನೂ ನಡೆಸಿದ್ದಾರೆ ಎನ್ನಲಾಗಿದೆ.

ಆದರೆ 'ಬಸ್ ಪರಿಚಾರಕಿ ತನಗೆ ಜೀವ ಬೆದರಿಕೆಯೊಡ್ಡಿದಳು' ಎಂದು ಆಕೆಯ ವಿರುದ್ಧವೇ ಶಾಸಕಿ ನಿಘತ್ ದೂರು ನೀಡಿದ್ದಾರೆ. ಇದರಿಂದ ಪೊಲೀಸರು ಪರಿಚಾರಕಿ ಇಖ್ರಾರನ್ನು ತಕ್ಷಣ ಬಂಧಿಸಿದ್ದಾರೆ. ಈ ಮಧ್ಯೆ, ಕೇಳಿದ ತಕ್ಷಣ ನೀರು ಒದಗಿಸಲಿಲ್ಲ ಎಂಬ ಏಕೈಕ ಕಾರಣಕ್ಕೆ ಶಾಸಕಿ ನಿಘತ್ ಪರಿಚಾರಕಿ ಇಖ್ರಾ ಮೇಲೆ ದೈಹಿಕ ಹಲ್ಲೆ ನಡೆಸಿದರು ಎಂದು ಸಹ ಪ್ರಯಾಣಿಕರೊಬ್ಬರು ಸಾಕ್ಷ್ಯ ನುಡಿದಿದ್ದಾರೆ.

ಪಾಕಿಸ್ತಾನದ ನೂತನ ಪ್ರಧಾನಿ ನವಾಜ್ ಷರೀಫ್ ಅವರ ಸೋದರರೂ ಆಗಿರುವ ಮುಖ್ಯಮಂತ್ರಿ ಷಹಬಾಜ್ ಷರೀಫ್ ಅವರು ಘಟನೆಯ ಬಗ್ಗೆ ತನಿಖೆಗೆ ಆದೇಶಿದ್ದು ಮೊದಲು ಪರಿಚಾರಕಿ ಇಖ್ರಾ ಅವರನ್ನು ಬಿಡುಗಡೆ ಮಾಡುವಂತೆ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+