ಸಂಪುಟಕ್ಕೆ 8 ಜನ, ಖರ್ಗೆಗೆ ರೈಲ್ವೆ ಸಚಿವ ಸ್ಥಾನ

ನವದೆಹಲಿ, ಜೂ.17: ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಿದೆ. ಎಂಟು ಹೊಸ ಮುಖಗಳು ಸಂಪುಟಕ್ಕೆ ಸೇರ್ಪಡೆಯಾಗಿದ್ದು ಯಾವುದೇ ಅಚ್ಚರಿ ಬದಲಾವಣೆ ಕಂಡು ಬಂದಿಲ್ಲ. 4 ಜನ ಕ್ಯಾಬಿನೇಟ್ ದರ್ಜೆಗೆ 4 ಜನ ರಾಜ್ಯ ಸಚಿವ ಹುದ್ದೆಗೇರಿದ್ದಾರೆ.

ಮನಮೋಹನ್ ಸಿಂಗ್ ಅವರ ಯುಪಿಎ 2 ಸಂಪುಟ ಸೇರಿದ ಸಚಿವರು :

4 ರಾಜ್ಯ ಸಚಿವರು:
* ಮಾಣಿಕ್ ರಾವ್ ಗಾವಿತ್ -ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ
* ಸಂತೋಷ್ ಚೌಧರಿ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
* ಜೆಡಿ ಸೀಲಂ- ವಿತ್ತ ಸಚಿವಾಲಯ
* ಇಎನ್ ಎಸ್ ನಾಚಿಯಪ್ಪನ್- ವಾಣಿಜ್ಯ ಮತ್ತು ಕೈಗಾರಿಕೆ

4 ಕ್ಯಾಬಿನೆಟ್ ದರ್ಜೆ ಸಚಿವರು

* ಆಸ್ಕರ್ ಫರ್ನಾಂಡೀಸ್(75 ವರ್ಷ) -ರಸ್ತೆ ಮತ್ತು ಭೂ ಸಾರಿಗೆ ಹೆದ್ದಾರಿ
* ಗಿರಿಜಾ ವ್ಯಾಸ್ (67 ವರ್ಷ) - ವಸತಿ, ನಗರಾಭಿವೃದ್ಧಿ
* ಸಿಸ್ ರಾಮ್ ಓಲಾ- ಕಾರ್ಮಿಕ ಖಾತೆ
* ಕೆಎಸ್ ರಾವ್- ಜವಳಿ ಖಾತೆ

Manmohan Singh Cabinet Expansion

67 ವರ್ಷದ ಗಿರಿಜಾ ವ್ಯಾಸ್ ಅವರು ಇಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವರಲ್ಲಿ ಅತ್ಯಂತ ಕಿರಿಯ ವಯಸ್ಸಿನವರಾಗಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರ ಸರಾಸರಿ ವಯಸ್ಸಿನ ಮಿತಿ 52 ವರ್ಷ. ಇಂದು ಪ್ರಮಾಣ ವಚನ ಸ್ವೀಕರಿಸಿದವರ ವಯಸ್ಸಿನ ಸರಾಸರಿ 70 ವರ್ಷ ದಾಟುತ್ತದೆ.

ಖರ್ಗೆ ಗೆ ಬಡ್ತಿ: ಕಾರ್ಮಿಕ ಖಾತೆ ಸಚಿವರಾಗಿದ್ದ ಕರ್ನಾಟಕದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬಡ್ತಿ ನೀಡಲಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಕೇಂದ್ರ ರೈಲ್ವೆ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಈ ಹಿಂದೆ ಪಿ.ವಿ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ (1991-1995) ಕರ್ನಾಟಕದ ಜಾಫರ್ ಷರೀಫ್ ಅವರು ರೈಲ್ವೆ ಸಚಿವರಾಗಿದ್ದರು. ತೀರಾ ಇತ್ತೀಚಿಗೆ ಕೆಎಚ್ ಮುನಿಯಪ್ಪ ಅವರು ರೈಲ್ವೆ ಖಾತೆ ರಾಜ್ಯ ಸ‌ಚಿವರಾಗಿದ್ದರು.

ಮನಮೋಹನ್ ಸಿಂಗ್ ಅವರ ಸಂಪುಟ ಸಚಿವರ ಸಂಖ್ಯೆ ಈಅಗ್ 77ಕ್ಕೇರಿದೆ. ಯುಪಿಎ 1 ರಲ್ಲಿ ಸಚಿವರಾಗಿದ್ದ ಆಸ್ಕರ್ ಫರ್ನಾಂಡೀಸ್ ಅವರು ಕ್ಯಾಬಿನೇಟ್ ದರ್ಜೆಗೇರುವಲ್ಲಿ ವಿಫಲರಾಗಿದ್ದರು. ಡಿಎಂಕೆ ಸಚಿವರು, ಪವನ್ ಕುಮಾರ್ ಬನ್ಸಾಲ್, ಅಶ್ಚನಿ ಕುಮಾರ್, ಅಜಯ್ ಮಾಕೇನ್ ಹಾಗೂ ಸಿಪಿ ಜೋಶಿ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಹೊಸ ಸಚಿವರನ್ನು ತುಂಬಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+