ಆಡ್ವಾಣಿ Vs ಮೋದಿ: ಬಿಜೆಪಿ ನಾಯಕರ ಬೆಂಬಲ ಯಾರಿಗೆ?

ಬಿಜೆಪಿಯ ಭೀಷ್ಮ, ಉಕ್ಕಿನ ಮನುಷ್ಯ ಬಿರುದಾಂಕಿತ ಎಲ್ ಕೆ ಆಡ್ವಾಣಿ ರಾಜೀನಾಮೆಯ ನಂತರ ಪಕ್ಷದ ಆತಂರಿಕ ಭಿನ್ನಮತ ಬಟಾಬಯಲಾಗಿದೆ. ಗೋವಾದಲ್ಲಿ ನಡೆದ ಪಕ್ಷದ ರಾಷ್ಟೀಯ ಕಾರ್ಯಕಾರಿಣಿಯಲ್ಲಿ ನರೇಂದ್ರ ಮೋದಿಗೆ ಮಣೆ ಹಾಕಿದ ಮರುದಿನವೇ ಆಡ್ವಾಣಿ ರಾಜೀನಾಮೆ ವಗಾಯಿಸಿದ್ದಾರೆ.

ಪಕ್ಷದ ಹಿರಿಯ ತಲೆಗಳ ಯಾವುದೇ ಒತ್ತಡಕ್ಕೆ ಸದ್ಯ ಆಡ್ವಾಣಿ ಜಪ್ಪಯ್ಯ ಅನ್ನುತ್ತಿಲ್ಲ. ಕಾರ್ಯಕಾರಿಣಿಯ ಮೊದಲ ದಿನದಿಂದಲೂ ಆಡ್ವಾಣಿ ಸಹಿತ, ಅವರ ಕ್ಯಾಂಪಿನಲ್ಲಿ ಗುರುತಿಸಿಕೊಂಡಿರುವ ನಾಯಕರು ಅನಾರೋಗ್ಯ ಮತ್ತು ಇತರ ಕಾರಣಗಳನ್ನು ಮುಂದೊಡ್ಡಿ ಕಾರ್ಯಕಾರಿಣಿಗೆ ಚಕ್ಕರ್ ಹೊಡೆದಿದ್ದಾರೆ (ಬಹಿಷ್ಕರಿಸಿದ್ದಾರೆ ಎಂದರೂ ತಪ್ಪಾಗಲಾರದು).

ಗುರು ಶಿಷ್ಯರಂತಿದ್ದ ಆಡ್ವಾಣಿ ಮತ್ತು ಮೋದಿ ನಡುವೆ ಈಗ ಸಂಬಂಧ ಹಳಸಿಹೋಗಿದೆ. ತಮ್ಮಮ್ಮ ವೈಯಕ್ತಿಕ ಹಿತಾಸಕ್ತಿಗೆ ಇವರಿಬ್ಬರ ನಡುವೆ ಹುಳಿಹಿಂಡುವ ಕೆಲಸವನ್ನೂ ಎರಡೂ ಕ್ಯಾಂಪಿನಲ್ಲಿರುವ ನಾಯಕರು ಮಾಡುತ್ತಿರುವುದು ಶಿಸ್ತಿನ ಪಕ್ಷಕಾಗುತ್ತಿರುವ ಹಿನ್ನಡೆ.

ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನ ಐದು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಬಿಜೆಪಿಯಲ್ಲಿ ಎದ್ದಿರುವ ಈ ಬಿರುಗಾಳಿಯನ್ನು ನರೇಂದ್ರ ಮೋದಿ ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದು ಕಾದು ನೋಡಬೇಕಾಗಿದೆ.

ಆಡ್ವಾಣಿ ಮತ್ತು ಮೋದಿ ಕ್ಯಾಂಪಿನಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ನಾಯಕರಾರು? ಸ್ಲೈಡಿನಲ್ಲಿ...

ರಾಜನಾಥ್ ಸಿಂಗ್

ರಾಜನಾಥ್ ಸಿಂಗ್

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿರುವ ರಾಜನಾಥ್ ಸಿಂಗ್ ಮತ್ತು ಆಡ್ವಾಣಿ ನಡುವೆ ಸಂಬಂಧ ಅಷ್ಟಕಷ್ಟೆ ಎನ್ನಲಾಗುತ್ತಿದೆ. ಆಡ್ವಾಣಿ ಉಪಸ್ಥಿತಿಯಲ್ಲಿ ಮೋದಿಗೆ ಮಣೆ ಹಾಕಿದ ರಾಜನಾಥ್ ಸಿಂಗ್, ನರೇಂದ್ರ ಮೋದಿ ಕ್ಯಾಂಪಿನಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ.

ಸುಷ್ಮಾ ಸ್ವರಾಜ್

ಸುಷ್ಮಾ ಸ್ವರಾಜ್

ಪಕ್ಷದ ಹಿರಿಯ ಮುಖಂಡ ಆಡ್ವಾಣಿ ಗುಂಪಿನಲ್ಲಿರುವ ಸುಷ್ಮಾ, ಮೋದಿಗೆ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನ ವಿರೋಧಿಸಿದವರಲ್ಲಿ ಒಬ್ಬರು.

ನಿತಿನ್ ಗಡ್ಕರಿ

ನಿತಿನ್ ಗಡ್ಕರಿ

ಯಾವುದೇ ಬಣದಲ್ಲಿ ಪ್ರತ್ಯಕ್ಷವಾಗಿ ಕಾಣಿಸಿಕೊಳ್ಳದ ಬಿಜೆಪಿಯ ಮಾಜಿ ಅಧ್ಯಕ್ಷ ನಿತಿನ್ ಗಡ್ಕರಿ. RSS ಹೇಳಿದಂತೆ ಚಾಚೂ ತಪ್ಪದೇ ನಡೆಯುವ ಗಡ್ಕರಿ ಮೋದಿ ಪರವಾಗಿದ್ದಾರೆ ಎನ್ನಬಹುದು. ಕಾರಣ.. RSS ಬೆಂಬಲ ಮೋದಿಗೆ ಇರುವುದರಿಂದ.

ಅನಂತ್ ಕುಮಾರ್

ಅನಂತ್ ಕುಮಾರ್

ಯಾವ ಬಣದ ಜೊತೆಗೂ ಗುರುತಿಸಿಕೊಳ್ಳದ ಚಾಣಾಕ್ಷ ರಾಜಕಾರಿಣಿ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೀಡಿದ ಬಿರುದಿನ ಪ್ರಕಾರ ಅನಂತ್ ಕುಮಾರ್ ಆಡ್ವಾಣಿಯವರ ಮಾನಸ ಪುತ್ರ.

ಅರುಣ್ ಜೇಟ್ಲೆ

ಅರುಣ್ ಜೇಟ್ಲೆ

ಪಕ್ಷದ ಟ್ರಬಲ್ ಶೂಟರ್ ಎಂದೇ ಹೆಸರುವಾಸಿಯಾಗಿರುವ ಜೇಟ್ಲೆ ಮೋದಿ ಜೊತೆಗಿದ್ದಾರೆ.

ಉಮಾ ಭಾರತಿ

ಉಮಾ ಭಾರತಿ

ಉಮಾ ಭಾರತಿ ಬಿಜೆಪಿ ತೊರೆಯಲು ಮತ್ತು ಪಕ್ಷಕ್ಕೆ ಮತ್ತೆ ಸೇರಲು ಆಡ್ವಾಣಿಯವರೇ ಕಾರಣ. ಇವರ ನಿಷ್ಠೆ ಆಡ್ವಾಣಿ ಮೇಲೆ.

ಜಸ್ವಂತ್ ಸಿಂಗ್

ಜಸ್ವಂತ್ ಸಿಂಗ್

ಪಕ್ಷದ ಯಾವುದೇ ಭಿನ್ನಮತದಲ್ಲಿ ಕಾಣಿಸಿಕೊಳ್ಳದ decent politician ಜಸ್ವಂತ್ ಸಿಂಗ್. ಆದರೂ ಇವರು ಆಡ್ವಾಣಿ ಪರವಾಗಿದ್ದಾರೆ ಎನ್ನುವುದು ಸುದ್ದಿ.

ಯಶವಂತ್ ಸಿನ್ಹಾ

ಯಶವಂತ್ ಸಿನ್ಹಾ

ಪಕ್ಷದ ಮತ್ತೊಬ್ಬ ಹಿರಿಯ ಮುಖಂಡ. ಕಾರ್ಯಕಾರಿಣಿಗೆ ಹಾಜರಾಗದ ಯಶವಂತ್ ಸಿನ್ಹಾ, ಆಡ್ವಾಣಿ ಗುಂಪಿನಲ್ಲಿ ಗುರುತಿಸಿಕೊಂಡಿದ್ದರೂ, ಮೋದಿಗೆ ಉನ್ನತ ಹುದ್ದೆ ಸಿಗಬೇಕೆಂದು ಬಯಸಿದ್ದವರಲ್ಲಿ ನಾನೂ ಒಬ್ಬ ಎಂದು ಉಲ್ಟಾ ಹೊಡೆದಿದ್ದರು.

ಮುರಳಿ ಮನೋಹರ್ ಜೋಷಿ

ಮುರಳಿ ಮನೋಹರ್ ಜೋಷಿ

ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ ಮುರಳಿ ಮನೋಹರ್ ಜೋಷಿ ಪಕ್ಕಾ RSS ಹಿಂಬಾಲಕರು. ಹಾಗಾಗಿ ಜೋಷಿ, ನರೇಂದ್ರ ಮೋದಿ ಬಣದಲ್ಲಿದ್ದಾರೆ.

ಮನೋಹರ್ ಪಾರಿಕ್ಕರ್

ಮನೋಹರ್ ಪಾರಿಕ್ಕರ್

ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಮೋದಿ ಆಪ್ತ ಬಣದಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಮ್ರುತಿ ಇರಾನಿ

ಸ್ಮ್ರುತಿ ಇರಾನಿ

ಪಕ್ಷದ ರಾಷ್ಟೀಯ ಕಾರ್ಯದರ್ಶಿಗಳಲ್ಲಿ ಒಬ್ಬರಾದ ಇರಾನಿ, ಮೋದಿ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.

ಕಲ್ಯಾಣ್ ಸಿಂಗ್

ಕಲ್ಯಾಣ್ ಸಿಂಗ್

ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿಯಾಗಿದ್ದ ಕಲ್ಯಾಣ್ ಸಿಂಗ್, ಮೋದಿ ಅಥವಾ ಆಡ್ವಾಣಿ ಬಣ ಎನ್ನುವುದಕ್ಕಿಂತ ರಾಜನಾಥ್ ಸಿಂಗ್ ವಿರೋಧಿ. ಹೀಗಾಗಿ ಆಡ್ವಾಣಿ ಗುಂಪಿನಲ್ಲಿ ಕಾಣಿಸಿಕೊಂಡಿದ್ದಾರೆ.

ವರುಣ್ ಗಾಂಧಿ

ವರುಣ್ ಗಾಂಧಿ

ಪಕ್ಷದ ಫೈರ್ ಬ್ರಾಂಡ್ ವರುಣ್ ಗಾಂಧಿ ಆಡ್ವಾಣಿ ಬಣದಲ್ಲಿದ್ದಾರೆ.

ಅರ್ಜುನ್ ಮುಂಡಾ

ಅರ್ಜುನ್ ಮುಂಡಾ

ಜಾರ್ಖಂಡ್ ಮಾಜಿ ಮುಖ್ಯಮಂತ್ರಿಯಾಗಿರುವ ಅರ್ಜುನ್ ಮುಂಡಾ, ಮೋದಿ ಬಣದ ಜೊತೆಗೆ ಗುರುತಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+