ಚಿತ್ರಗಳಲ್ಲಿ : ನಕ್ಸಲರ ದಾಳಿಗೆ ಮಾಜಿ ಸಚಿವ ಶುಕ್ಲಾ ಬಲಿ
ಮುಂಬೈ, ಜೂ.11: ಮಾವೋವಾದಿ ನಕ್ಸಲರು ಕಾಂಗ್ರೆಸ್ ಪರಿವರ್ತನ್ ಸಮಾರಂಭದಿಂದ ವಾಪಸಾಗುತ್ತಿದ್ದ ಮುಖಂಡರ ಮೇಲೆ ದಾಳಿ ನಡೆಸಿ 27ಕ್ಕೂ ಹೆಚ್ಚು ಮಂದಿಯನ್ನು ಹತ್ಯೆಗೈದ ಘಟನೆ ಎಲ್ಲರನ್ನು ಬೆಚ್ಚಿಬೀಳಿಸಿತ್ತು. ಈ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೇಂದ್ರದ ಮಾಜಿ ಸಚಿವ ವಿ.ಸಿ.ಶುಕ್ಲ ಅವರು ಮಂಗಳವಾರ ಕೊನೆಯುಸಿರೆಳೆದಿದ್ದಾರೆ.
ಏಷ್ಯಾದಲ್ಲಿ ಸಿಂಹಗಳ ಸಂರಕ್ಷಣೆ ತಾಣವಾಗಿರುವ ಜುನಾಗಢದ ಗಿರ್ ಅರಣ್ಯ ಪ್ರದೇಶದಲ್ಲಿ ಸಿಂಹ ಹಾಗೂ ಸಿಂಹಿಣಿಗಳ ಸರಸ ಅಪರೂಪದ ದೃಶ್ಯ ಸಿಕ್ಕಿದೆ.
ಶ್ರೀನಗರದಲ್ಲಿ ಪ್ರತಿಭಟನಾ ನಿರತ ಸರ್ಕಾರಿ ಸಿಬ್ಬಂದಿಗಳ ಮೇಲೆ ಪೊಲೀಸರು ಬಣ್ಣ ಬಣ್ಣದ ಅಶ್ರುವಾಯು ಸಿಡಿಸುವ ದೃಶ್ಯ ಜಹಾಂಗೀರ್ ಚೌಕದಿಂದ ನೇರವಾಗಿ ನಿಮ್ಮ ಪರದೆ ಮೇಲೆ ಅಪ್ಪಳಿಸಲಿದೆ.
ಈಗ ಭಾರತದಲ್ಲಿ ಕಾಫಿ ರಫ್ತು ಪ್ರಮಾಣ ಎಷ್ಟಿದೆ, ನಟಿ ಸನಾ ಬೆಕ್ಕಿನ ನಡಿಗೆ ಹೇಗಿದೆ? ಬಿಜೆಪಿಯ ಪ್ರಮುಖ ಹುದ್ದೆಗಳಿಗೆ ರಾಜೀನಾಮೆ ನೀಡಿದ ಬಳಿಕ ಸಂಸತ್ತಿಗೆ ಆಗಮಿಸಿದ ಹಿರಿಯ ನಾಯಕ ಎಲ್ ಕೆ ಅಡ್ವಾಣಿಗೆ ಸಿಕ್ಕ ಸ್ವಾಗತ ಹೇಗಿದೆ ಇವೆ ಮುಂತಾದ ಚಿತ್ರಗಳು ಇಂದಿನ ಪ್ಯಾಕೇಜಿನಲ್ಲಿದೆ

ಛತ್ತೀಸ್ ಗಢದಲ್ಲಿ ಹರಿದ ನೆತ್ತರು
ಕೇಂದ್ರದ ಮಾಜಿ ಸಚಿವ ಅವರ ದೇಹಕ್ಕೆ ಮೂರು ಗುಂಡುಗಳು ಹೊಕ್ಕಿದ್ದು ಗಂಭೀರವಾಗಿ ಗಾಯಗೊಂಡಿದ್ದರು.

ಮಾವೋವಾದಿ ದಾಳಿಗೆ ಶುಕ್ಲಾ ಬಲಿ
ಕಾಂಗ್ರೆಸ್ ಅಧ್ಯಕ್ಷ ನಂದಕುಮಾರ್ ಪಾಟೇಲ್ ಹಾಗೂ ಅವರ ಪುತ್ರ ದಿನೇಶ್ ಪಾಟೇಲ್ ಸೇರಿ ಹಲವರ ಶವಗಳು ಪತ್ತೆಯಾಗಿತ್ತು. ಶುಕ್ಲಾ ಅವರಿಗೆ ಗುರ್ ಗಾಂವ್ ನ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿತ್ತು.

ನಕ್ಸಲರ ಅಟ್ಟಹಾಸ
ಈ ದುರ್ಘಟನೆಯಲ್ಲಿ ಪ್ರಮುಖ ಮಹಿಳಾ ಆದಿವಾಸಿ ನಾಯಕಿ ಬಸ್ತಾರ್ ನ ಫುಲೊ ದೇವಿ ನೇತಮ್ ಕೂಡಾ ದಾಳಿಯಲ್ಲಿ ಗಾಯಗೊಂಡಿದ್ದರು

ಜುನಾಗಢದ ಸಿಂಹ-ಸಿಂಹಿಣಿ
ಮಧ್ಯಪ್ರದೇಶ: ಗೀರ್ ಅರಣ್ಯದಲ್ಲಿ ಕಂಡು ಬಂದ ಸಿಂಹ-ಸಿಂಹಿಣಿ

ಜುನಾಗಢದಲ್ಲಿ ಸಿಂಹಿಣಿ
ಸಿಂಹದೊಡನೆ ಕಾದಾಡಿ ಸುಸ್ತಾದ ಸಿಂಹಿಣಿ ನೀರು ಕುಡಿಯಲು ಬಂದಿದೆ

ಇದು ಬಣ್ಣದೋಕುಳಿಯಲ್ಲ
ಶ್ರೀನಗರ : ಸರ್ಕಾರಿ ಸಿಬ್ಬಂದಿಯನ್ನು ಚದುರಿಸಲು ಪೊಲೀಸರು ಆಶ್ರುವಾಯು ಪ್ರಯೋಗಿಸಿದಾಗ.... ಪಿಟಿಐ ಚಿತ್ರ: ಇರ್ಫಾನ್

ಕಾಫಿ ರಫ್ತು ಪ್ರಮಾಣ
ವಿವಿಧ ದೇಶಗಳ ಕಾಫಿ ರಫ್ತು ಪ್ರಮಾಣ

ಸಂಸತ್ತಿನಲ್ಲಿ ಅಡ್ವಾಣಿ
ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಜೊತೆ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ. ಮಾಜಿ ಸ್ಪೀಕರ್ ಕೆಎಸ್ ಹೆಗಡೆ ಅವರ 103ನೇ ಜನ್ಮ ದಿನೋತ್ಸವ ಸಮಾರಂಭ












Click it and Unblock the Notifications