ಪಣಜಿ : ಅಡ್ವಾಣಿ ಬರಲಿಲ್ಲ, ಭಿನ್ನಮತವಿಲ್ಲ ಎಂದ ಬಿಜೆಪಿ

ಶನಿವಾರ ಬೆಳಗ್ಗೆ ನವದೆಹಲಿಯಿಂದ ಅಡ್ವಾಣಿ ಅವರನ್ನು ಪಣಜಿಗೆ ಕರೆತರಲು ವಿಶೇಷ ವಿಮಾನ ಸಿದ್ಧವಾಗಿತ್ತು. ಆದರೆ, ಕುಟುಂಬದ ಮೂಲಗಳು ಅಡ್ವಾಣಿ ಅವರ ಆರೋಗ್ಯ ಸುಧಾರಿಸಿಲ್ಲ. ಆದ್ದರಿಂದ ಅವರು ಪ್ರಯಾಣ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದು ಪಕ್ಷದ ನಾಯಕರಿಗೆ ಮಾಹಿತಿ ನೀಡಿದ್ದಾರೆ.
ಪಕ್ಷದ ಕೆಲವು ಹಿರಿಯ ನಾಯಕರ ಪ್ರಕಾರ ಅಡ್ವಾಣಿ ಬಿಜೆಪಿ ಸಭೆಯಿಂದ ಎರಡು ದಿನಗಳ ಕಾಲ ದೂರವುಳಿದಿರುವುದು ಇದೇ ಮೊದಲು. ಅವರ ಅನಾರೋಗ್ಯಕ್ಕಿಂತ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧದ ಅಸಮಾಧಾನದಿಂದಾಗಿ ಅಡ್ವಾಣಿ ಆಗಮಿಸಿಲ್ಲ ಎಂದು ಇಂದು ಸಹ ವಿಶ್ಲೇಷಣೆ ನಡೆಸಲಾಗುತ್ತಿದೆ.
ಭಿನ್ನಮತವಿಲ್ಲ : ಕೆಲವು ನಾಯಕರು ಪಕ್ಷದ ಕಾರ್ಯಕಾರಣಿಗೆ ಗೈರು ಹಾಜರಾಗುವುದು ಸಾಮಾನ್ಯ. ಇದಕ್ಕೆ ಮಾಧ್ಯಮಗಳು ವಿಶೇಷ ಅರ್ಥ ಕಲ್ಪಿಸಿವೆ ಎಂದು ರಾಜ್ಯಸಭಾ ಸದಸ್ಯ ಪ್ರಕಾಶ್ ಜಾವೇದ್ ಕರ್ ಮಾಧ್ಯಮಗಳ ವಿರುದ್ಧವೇ ಆರೋಪ ಮಾಡುತ್ತಿದ್ದಾರೆ.
ಪಕ್ಷದ ಯಾವ ಹಿರಿಯ ನಾಯಕನ್ನು ಬಿಜೆಪಿ ಕಡೆಗಣಿಸಿಲ್ಲ. ಅವರಿಗೆ ಸೂಕ್ತ ಸ್ಥಾನಮಾನ ನೀಡಿದ್ದೇವೆ. ವೈಯಕ್ತಿಕ ಕಾರಣಗಳಿಂದಾಗಿ ಅವರು ಭಾಗವಹಿಸುತ್ತಿಲ್ಲ ಎಂದು ಜಾವೇದ್ ಕರ್ ಹೇಳಿದ್ದಾರೆ.
ಎರಡು ಸಮಿತಿ ರಚಿಸಿ : ಪಕ್ಷದ ಹಿರಿಯ ನಾಯಕ ಅಡ್ವಾಣಿ, ಮುಂಬರು ಐದು ರಾಜ್ಯಗಳ ವಿಧಾನಸಭೆ ಪ್ರಚಾರದ ನೇತೃತ್ವಕ್ಕಾಗಿ ಒಂದು ಪ್ರಚಾರ ಸಮಿತಿ. ಲೋಕಸಭೆ ಚುನಾವಣೆಯ ಪ್ರಚಾರಕ್ಕಾಗಿ ಮತ್ತೊಂದು ಸಮಿತಿ ರಚನೆ ಮಾಡುವಂತೆ ಪಕ್ಷದ ನಾಯಕರಿಗೆ ಸಲಹೆ ನೀಡಿದ್ದಾರೆ. ಈ ಕುರಿತು ಇಂದು ಕಾರ್ಯಕಾರಣಿ ಸಭೆಯಲ್ಲಿ ಚರ್ಚೆ ನಡೆಯಲಿದ್ದು, ಭಾನುವಾರ ಸಭೆಯ ಅಂತಿಮ ದಿನದಂದು ಈ ಕುರಿತು ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.












Click it and Unblock the Notifications