ರಾಜಧಾನಿ, ಶತಾಬ್ದಿ ರೈಲುಗಳಲ್ಲಿ ಆಹಾರ ತುಟ್ಟಿ?

ಪವನ್ ಕುಮಾರ್ ಬನ್ಸಾಲ್ ರೈಲ್ವೆ ಸಚಿವರಾಗಿದ್ದಾಗ, ರೈಲುಗಳಲ್ಲಿ ಆಹಾರದ ಗುಣಮಟ್ಟ ನಿರ್ಧರಿಸಲು ಸಮಿತಿಯೊಂದನ್ನು ರಚಿಸಿದ್ದರು. ಈ ಸಮಿತಿ ಸದ್ಯ ತನ್ನ ವರದಿ ನೀಡಿದ್ದು. ರೈಲುಗಳಲ್ಲಿ ನೀಡಲಾಗುವ ಆಹಾರದ ದರವನ್ನು ಹೆಚ್ಚಿಸುವ ಬಗ್ಗೆ ಶಿಫಾರಸು ಮಾಡಿದೆ.
ಸಮಿತಿಯ ಶಿಫಾರಸುಗಳು ರೇಲ್ವೆ ಇಲಾಖೆಯೂ ಸಮ್ಮತಿ ಸೂಚಿಸಿದೆ. ಆದ್ದರಿಂದ ಶೀಘ್ರವೇ ರಾಜಧಾನಿ, ಶತಾಬ್ದಿ ಮತ್ತು ದುರಂತೋ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ದರ ಹೆಚ್ಚಳದ ಬಿಸಿ ತಟ್ಟಲಿದೆ.
ಯಾವ ರೈಲುಗಳಲ್ಲಿ ಎಷ್ಟು ದರ : ಸಮಿತಿಯು ತನ್ನ ವರದಿಯಲ್ಲಿ ಎ.ಸಿ.2 ಮತ್ತು 3ನೇ ದರ್ಜೆ ಮತ್ತು ಚೇರ್ ಕಾರ್ ವಿಭಾಗಗಳಲ್ಲಿ ನೀಡಲಾಗುವ ಆಹಾರದ ದರವನ್ನು 88 ರಿಂದ 125ಕ್ಕೆ ಹೆಚ್ಚಿಸಬಹುದು ಎಂದು ಸಲಹೆ ನೀಡಿದೆ.
ಎ.ಸಿ.ಮೊದಲ ದರ್ಜೆ, ಎಕ್ಸಿಕ್ಯೂಟಿವ್ ಕ್ಲಾಸ್‌ನಲ್ಲಿ ರೈಲುಗಳಲ್ಲಿ ಆಹಾರ ದರವನ್ನು ಶೇ 13ರಷ್ಟು ಹೆಚ್ಚಿಸುವಂತೆ ಶಿಫಾರಸು ಮಾಡಿದೆ. ಸಮಿತಿಯ ಶಿಫಾರಸು ಮಾಡಿದಷ್ಟು ಹೆಚ್ಚಿಸದಿದ್ದರೂ ಆಹಾರದರವಂತೂ ಹೆಚ್ಚಳವಾಗಲಿದೆ. ಎಷ್ಟು ಹೆಚ್ಚಾಗಲಿದೆ ಎಂದು ಕೆಲವೇ ದಿನಗಳಲ್ಲಿ ತಿಳಿಯಲಿದೆ.
ದರ ಹೆಚ್ಚಳದ ಪ್ರಸ್ತಾಪ : ಸಮಿತಿ ಕೇವಲ ಆಹಾರದ ದರ ಹೆಚ್ಚಿಸಲು ಸಲಹೆ ನೀಡಿಲ್ಲ. ರೈಲುಗಳ ಪ್ರಯಾಣದರ ದರದಲ್ಲಿ ಹೆಚ್ಚಳ ಮಾಡಿ, ಗುಣಮಟ್ಟದ ಆಹಾರ ನೀಡುವ ಕುರಿತು ಶಿಫಾರಸು ಮಾಡಿದೆ.
ಆದರೆ, ರಾಜಧಾನಿ, ಶತಾಬ್ದಿ ಮತ್ತು ದುರಂತೋ ಎಕ್ಸ್‌ಪ್ರೆಸ್ ರೈಲು ಪ್ರಯಾಣದರವನ್ನು ಹೆಚ್ಚಿಸುವ ಬಗ್ಗೆ ರೈಲ್ವೆ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆಹಾರದ ದರ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆಸಿದೆ.
ಸಮಿತಿಯ ಶಿಫಾರಸುಗಳು ಜಾರಿಗೆ ಬಂದರೆ, ಶೀಘ್ರವೇ ಶತಾಬ್ದಿ, ರಾಜಧಾನಿ ಹಾಗೂ ದುರಂತೋ ಎಕ್ಸ್ ಪ್ರೆಸ್ ಗಳಲ್ಲಿ ಆಹಾರದ ದರ ಹೆಚ್ಚಾಗಲಿದೆ. ಪ್ರಯಾಣದರವೂ ಹೆಚ್ಚಳವಾಗಲಿದೆಯೇ?












Click it and Unblock the Notifications