ಮಕ್ಕಳನ್ನು ಅಮಾನುಷವಾಗಿ ಕೊಂದು ಸತ್ತ ಅಮ್ಮ
ನವದೆಹಲಿ, ಜೂ.6: ತನ್ನ ಮಕ್ಕಳನ್ನು ಅಮಾನುಷವಾಗಿ ಕೊಂದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡಾವಲಿ ಪ್ರದೇಶದಲ್ಲಿ ವರದಿಯಾಗಿದೆ.
30 ವರ್ಷದ ಗೃಹಿಣಿ ತನ್ನ ಚಿಕ್ಕಮಕ್ಕಳನ್ನು ಬರ್ಬರವಾಗಿ ಸಾಯಿಸಿದ್ದಾಳೆ. ಗಂಡನ ಮೇಲಿನ ಕೋಪಕ್ಕೆ ಮಕ್ಕಳು ಬಲಿ ಹಾಕಿದ ಘಟನೆ ಪೂರ್ವ ದೆಹಲಿಯ ಮಂಡಾವಾಲಿ ಪ್ರದೇಶದಲ್ಲಿ ನಡೆದಿದೆ.
ನಿನ್ನೆ ರಾತ್ರಿ ಗಂಡ ಮನೆಯಲ್ಲಿ ಗಂಡ ಇಲ್ಲದ ವೇಳೆಯಲ್ಲಿ 6 ವರ್ಷದ ಮಗಳನ್ನು ವಾಷಿಂಗ್ ಮೆಷಿನ್ ನಲ್ಲಿ ತುರುಕಿಸಿ ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ನಂತರ 6 ವರ್ಷದ ಮಗನನ್ನು ಬಕೆಟ್ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದಾಳೆ.
ಮಕ್ಕಳನ್ನು ಕೊಂದ ಮೇಲೆ ಗ್ರೀಲ್ ಗೆ ನೇಣು ಬಿಗಿದು ಕೊಂಡು ಸಾವನ್ನಪ್ಪಿದ್ದಾಳೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಸಾವನ್ನಪ್ಪಿದವರನ್ನು 30 ವರ್ಷದ ಸರಿತಾ, 5 ವರ್ಷ ವಯಸ್ಸಿನ ಪರಿ, 11 ತಿಂಗಳ ಕೂಸು ರುದ್ರ ಎಂದು ಗುರುತಿಸಲಾಗಿದೆ.

ಜವಳಿ ವಿನ್ಯಾಸಗಾರನಾಗಿರುವ ದೇವೇಂದ್ರ ಅವರನ್ನು 2005ರಲ್ಲಿ ಸರಿತಾ ಮದುವೆಯಾಗಿದ್ದಳು. ಮಂಡಾವಲಿಯ ಮೂರು ಅಂತಸ್ತಿನ ಮನೆಯಲ್ಲಿ ವಾಸವಾಗಿದ್ದರು. ಘಟನೆ ನಡೆದಾಗ ದೇವೇಂದ್ರ ಪತ್ರಪರ್ ಗಂಜ್ ಕೈಗಾರಿಕಾ ಪ್ರದೇಶದ ತನ್ನ ಕಚೇರಿಯಲ್ಲಿದ್ದ ಎನ್ನಲಾಗಿದೆ. ಸುಮಾರು 2.15ಕ್ಕೆ ಗಂಡನಿಗೆ ಸರಿತಾ ಕರೆ ಮಾಡಿದ್ದಾಳೆ. ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾಳೆ.
ತಕ್ಷಣವೇ ದೇವೇಂದ್ರ ಮನೆ ಕಡೆ ಧಾವಿಸಿದ್ದಾನೆ. ಮನೆಯ ಮುಂಭಾಗ ಬಾಗಿಲು ಒಳಗಿನಿಂದ ಬೀಗ ಹಾಕಿಕೊಳ್ಳಲಾಗಿತ್ತು.ನೆರೆಮನೆಯವರ ನೆರವಿನಿಂದ ಬಾಗಿಲು ಮುರಿದು ಒಳ ಹೊಕ್ಕು ನೋಡಿದರೆ ಮಕ್ಕಳ ಜೊತೆ ಸರಿತಾ ಸಾವನ್ನಪ್ಪಿರುವುದು ಕಂಡು ಬಂದಿದೆ.
ಸರಿತಾ ಹಾಗೂ ದೇವೇಂದ್ರ ದಿನ ನಿತ್ಯ ಜಗಳವಾಡುತ್ತಿದ್ದರು ಎಂದು ನೆರೆಮನೆಯವರು ಹೇಳಿಕೆ ನೀಡಿದ್ದಾರೆ. ಮಂಗಳವಾರ ದಂಪತಿ ನಡುವೆ ಜೋರು ಜಗಳ ನಡೆದಿದೆ. ಕೈ ಕೈ ಮಿಲಾಯಿಸಿ ಮಾರಾಮಾರಿ ಜೋರು ಗದ್ದಲವಾಗಿದೆ.
ಎರಡು ವರ್ಷಗಳ ಹಿಂದೆ ಇವರಿಬ್ಬರ ದಾಂಪತ್ಯ ಕದನ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಮೊದಲ ಹಿಯರಿಂಗ್ ನಲ್ಲೇ ಸಮಸ್ಯೆ ಪರಿಹಾರ ವಾಗಿತ್ತು.
ದೇವೇಂದ್ರ ಅವರ ತಮ್ಮ ವೀರೇಂದ್ರ ಹಾಗೂ ತಾಯಿ ಕೆಳ ಅಂತಸ್ತಿನಲ್ಲಿ ವಾಸಿಸುತ್ತಿದರೆ, ದೇವೇಂದ್ರ ಅವರ ಅಕ್ಕ ಎರಡನೇ ಅಂತಸ್ತಿನಲ್ಲಿ ವಾಸ ಇದ್ದಾರೆ. ದೇವೇಂದ್ರ ಅವರ ಮಕ್ಕಳಿಬ್ಬರು ಮಾನಸಿಕವಾಗಿ ದುರ್ಬಲರಾಗಿದ್ದರು. ಇಬ್ಬರಿಗೂ ಪ್ರೀತ್ ವಿಹಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿಳಿದು ಬಂದಿದೆ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications