ಮೋದಿ +ಯಡಿಯೂರಪ್ಪ ವಿಷ್ಯ: ಎಲ್ಲರ ಚಿತ್ತ ಗೋವಾದತ್ತ

ಬೆಂಗಳೂರು, ಜೂನ್ 5: ಕರ್ನಾಟಕದ ಮಟ್ಟಿಗೆ ಮಾಜಿ ಬಿಜೆಪಿ, ಹಾಲಿ ಕೆಜೆಪಿ ಯಡಿಯೂರಪ್ಪ ಮತ್ತು ರಾಷ್ಟ್ರಮಟ್ಟದಲ್ಲಿ ನರೇಂದ್ರ ಮೋದಿಗೆ ಪ್ರಧಾನಿ ಮಣೆ ಹಾಕುವ ವಿಷಯದಲ್ಲಿ ಶಿಸ್ತಿನ ಪಕ್ಷ ಬಿಜೆಪಿ ಹೈರಾಣಗೊಂಡಿದೆ.

ಇದನ್ನೇ ಪ್ರಧಾನ ವಿಷಯವನ್ನಾಗಿಟ್ಟುಕೊಂಡು ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ರಾಜ್ಯ ಬಿಜೆಪಿ ಮೋದಿಗೆ ಮಣೆ ಹಾಕಲು ಯುದ್ಧೋತ್ಸಾಹದಲ್ಲಿದ್ದರೆ ಯಡಿಯೂರಪ್ಪ ವಾಪಸಾತಿಗೆ ರಾಜ್ಯದಲ್ಲಿ ಪಕ್ಷದೊಳಗಿನ ಒಂದು ನಿರ್ದಿಷ್ಟ ಬಣ ಸಮರ ಸಾರಿದೆ.

BS Yeddyurappa's return to BJP Narendra Modi PM candidate muscles flexed in Bangalore

ಆದರೆ ಈ ರಂಪಾಟ ಬೀದಿಗೆ ಬಿದ್ದರುವುದು ಬೆಂಗಳೂರಿನಲ್ಲಿ ಪ್ರಮುಖ ರಸ್ತೆಗಳಲ್ಲಿ ಕಣ್ಣಿಗೆ ಬಿದ್ದಿದೆ. ಏನಪಾ ಅಂದರೆ ನಿನ್ನೆ ರಾತ್ರಿಯಿಂದಲೇ ರಾಜಧಾನಿಯ ಪ್ರಮುಖ ರಸ್ತೆಗಳು/ಟ್ರಾಫಿಕ್ ಜಂಕ್ಷನ್ ಗಳಲ್ಲಿ ಬ್ಯಾನರ್ ಒಂದು ಢಾಳಾಗಿ ರಾರಾಜಿಸುತ್ತಿದೆ.

ಇಂತಹ ಬ್ಯಾನರ್ ಹಾಕುವುದರ ಹಿಂದಿನ ಉದ್ದೇಶವಾದರೂ ಏನು? ಯಾರ ಪರ/ ವಿರೋಧ ಈ ಬ್ಯಾನರ್ ಹಾಕಲಾಗಿದೆ? ಇದರ ಅಪ್ಪ-ಅಮ್ಮ ಅಂದರೆ ಸೃಷ್ಟಿಕರ್ತರು ಅಂದರೆ ಬ್ಯಾನರ್ ಸಿದ್ಧಪಡಿಸಿ ಹಾಕಿಸಿದವರು ಯಾರು? ಯಾರನ್ನು ಗುರಿಯಾಗಿಸಿಕೊಂಡು ಈ ಬ್ಯಾನರ್ ನೇತು ಹಾಕಲಾಗಿದೆ? ಎಂದು ಬಿಜೆಪಿಯ ನೈಜ ಕಾರ್ಯಕರ್ತರು ಬೀದಿ ಬದಿ ನಿಂತು ತಲೆಕೆರೆದುಕೊಳ್ಳುತ್ತಾ ಕೇಳುತ್ತಿದ್ದಾರೆ.

ವಿಚಿತ್ರ ಅಂದರೆ ಬ್ಯಾನರಿನಲ್ಲಿಯೂ ಪ್ರಶ್ನೆಗಳೇ ಇವೆ. ಬ್ಯಾನರ್ ಹಾಕಿದವರಿಗೇ ಅವರು ಎತ್ತಿರುವ ಪ್ರಶ್ನೆಗಳಿಗೆ ತಕ್ಷಣ ಉತ್ತರ ಬೇಕಾಗಿದೆ. ಒಟ್ಟಿನಲ್ಲಿ Flexನಲ್ಲಿರುವ ಅರ್ಜೆನ್ಸಿ ನೋಡಿದರೆ ಯಡಿಯೂರಪ್ಪ ಮತ್ತು ಮೋದಿ ವಿಷ್ಯ ತುರ್ತಾಗಿ ಇತ್ಯರ್ಥವಾಗಬೇಕಿದೆ.

ಸೋಜಿಗವೆಂದರೆ ಇದ್ಯಾವುದಕ್ಕೂ ಪಕ್ಷದ ವತಿಯಿಂದಾಗಲಿ ಅಥವಾ ಮತ್ಯಾವುದೋ ದಿಕ್ಕಿನಿಂದಾಗಲಿ ಉತ್ತರ ಗೋಚರವಾಗಿಲ್ಲ. ಒಟ್ಟಿನಲ್ಲಿ ಗೋವಾದಲ್ಲಿ ನಾಳಿದ್ದು ಶುಕ್ರವಾರ ನಡೆಯಲಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯನ್ನು ಗುರಿಯಾಗಿಸಿಕೊಂಡು ಈ ಬ್ಯಾನರ್ ನೇತುಹಾಕಲಾಗಿದೆ. ಹಾಗಾಗಿ ಎಲ್ಲರ ಚಿತ್ತ ಗೋವಾದತ್ತ ನೆಟ್ಟಿದೆ.
Goa is hosting the two-day national executive meeting of BJP, beginning June 8 while the national office-bearers' meeting is scheduled a day before. The party workers' convention will be held on June 9.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+