ಐಟಿ: ಬೆಂಗಳೂರಿಗೆ ಅಪ್ಪಳಿಸಲಿದೆ ಮತ್ತೊಂದು ಧೂಮಕೇತು

ಹೀಗಿರುವಾಗ ಧೂಮಕೇತುವಿನಂತೆ ಬೆಂಗಳೂರು ಸಮೀಪ ಮತ್ತೊಂದು ಐಟಿ ಯೋಜನೆ ತಲೆಯೆತ್ತುತ್ತಿದೆ. ಕೇಂದ್ರ ಸರಕಾರವೇ ಇದಕ್ಕೆ ಶ್ರೀಕಾರ ಹಾಕಿದೆ. ಬೆಂಗಳೂರಿಗೆ ಅನತಿ ದೂರದಲ್ಲೇ ಬೃಹತ್ ಪ್ರಮಾಣದ ಭಾರಿ ಐಟಿ ವಿಸ್ತರಣೆ ಯೋಜನೆಯನ್ನು ( Information Technology Investment Region -ITIR) ಕಾರ್ಯಗತಗೊಳಿಸಲು ಕೇಂದ್ರ ಸರಕಾರ ಅಸ್ತು ಅಂದಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರವನ್ನು ವಿಸ್ತರಿಸುವ ಜರೂರತ್ತನ್ನು ಮನಗಂಡು ರಾಜ್ಯ ಸರಕಾರವೇ ಈ ಪ್ರಸ್ತಾಪವನ್ನು ಕೇಂದ್ರದ ಮುಂದಿಟ್ಟಿತ್ತು. ಇದೀಗ ಪ್ರಧಾನಿ ಸಿಂಗ್ ನೇತೃತ್ವದ ಸಚಿವ ಸಂಪುಟವು ಮಂಗಳವಾರ ಪ್ರಸ್ತಾವನೆಗೆ ಒಪ್ಪಿಗೆಯ ಮುದ್ರೆಯೊತ್ತಿದೆ. ಇದು ಹೊಸೂರು ಅಥವಾ ದೇವನಹಳ್ಳಿ ಕಡೆ 2082 ಎಕರೆ ಪ್ರದೇಶದಲ್ಲಿ ತಲೆಯೆತ್ತಲಿದೆ.
ಈ ಯೋಜನೆಗೆ 2013ರಿಂದ 2032ರ ವರೆಗೂ ಒಟ್ಟು 2 ಲಕ್ಷ ಕೋಟಿ ರೂ. ಹಣ ಹೂಡಿಕೆಯಾಗುವ ಅಂದಾಜಿದೆ. ತತ್ಫಲವಾಗಿ 12 ಲಕ್ಷ ನೇರ ಉದ್ಯೋಗ ಮತ್ತು 28 ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಕೇಂದ್ರ ಹೇಳಿದೆ. ಆದರೆ ಬೆಂಗಳೂರು... ನಿಮ್ಮ ಅನಿಸಿಕೆಯೇನು?












Click it and Unblock the Notifications