ಗುಜರಾತ್ ಉಪ ಚುನಾವಣೆ : ಬಿಜೆಪಿ ಜಯಭೇರಿ

narendra modi
ಅಹಮದಾಬಾದ್, ಜೂ. 5 : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಮ್ಯಾಜಿಕ್ ಮಾಡಿದ್ದಾರೆ. ರಾಜ್ಯದ ಎರಡು ಲೋಕಸಭೆ ಮತ್ತು ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಜಯಗಳಿಸಿದೆ. ಆರು ಸ್ಥಾನಗಳನ್ನು ಗೆಲ್ಲುವ ಮೂಲಕ ಮೋದಿ ವಿಪಕ್ಷಗಳಿಗೆ ಭಾರೀ ಹೊಡೆತ ನೀಡಿದ್ದಾರೆ.

ಭಾನುವಾರ ಆರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿತ್ತು. ಬುಧವಾರ ಬೆಳಗ್ಗೆ ನಾಲ್ಕು ಕೇಂದ್ರಗಳಲ್ಲಿ ಮತ ಎಣಿಕೆ ನಡೆದಿದ್ದು, ಆರು ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೊಮ್ಮೆ ರಾಜ್ಯದಲ್ಲಿ ತನ್ನ ಶಕ್ತಿ ಪ್ರದರ್ಶಿಸಿದೆ. ಪೋರ್ ಬಂದರ್ ಮತ್ತು ಬನಸ್ಕಾಂತ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಉಪ ಚುನಾವಣೆ ನಡೆದ ಜೇತ್ಪುರ್, ಲಿಂಬಾಡಿ, ಧೋರ್ಜಿ ಮತ್ತು ಮೋರ್ವಾ ಹದಫ್ ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳಿ ಜಯಗಳಿಸಿದ್ದಾರೆ. ಒಂದು ಕ್ಷೇತ್ರದಲ್ಲಾದರೂ ಜಯಗಳಿಸಬೇಕು ಎಂಬ ಕಾಂಗ್ರೆಸ್ ಪಕ್ಷದ ಕನಸಿಗೆ ಮೋದಿ, ತಣ್ಣೀರು ಸುರಿದಿದ್ದಾರೆ.

ಲೋಕಸಭೆ : ಪೋರ್ ಬಂದರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿಠ್ಠಲ್ ರಡಾಡಿಯಾ ಅವರು ಕಾಂಗ್ರೆಸ್ಸಿನ ವಿನು ಅಮಿಪಾರಾ ಅವರನ್ನು ಸೋಲಿಸಿದ್ದಾರೆ. ಬನಸ್ಕಾಂತ ಕ್ಷೇತ್ರದಲ್ಲಿ ಬಿಜೆಪಿಯ ಹರಿಭಾಯಿ ಚೌಧರಿ ಅವರು, ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಾ ಗಢವಿ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ. ಬನಸ್ಕಾಂತ ಕ್ಷೇತ್ರದಲ್ಲಿ ಕೃಷ್ಣಾ ಅವರ ಪತಿ ಮುಖೇಶ್ ಗಢವಿ ಅವರು ಮರಣ ಹೊಂದಿದ ಕಾರಣ ಉಪ ಚುನಾವಣೆ ನಡೆದಿತ್ತು.

ಕಾಂಗ್ರೆಸ್ ಗೆ ಕಡೆಯ ಎಚ್ಚರಿಕೆ : ಫಲಿತಾಂಶದ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಇದು ಕಾಂಗ್ರೆಸ್ ಪಾಲಿಕೆ ಕಡೆಯ ಎಚ್ಚರಿಕೆ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+