ಭಗ್ನ ಪ್ರೇಮ ಇರಿತ ಜಾರ್ಖಂಡ್ ಯುವಕನ ಸೆರೆ

ಅಂಬಾಲಪಾಡಿಯಲ್ಲಿ ಶನಿವಾರ ಈ ಘಟನೆ ನಡೆದಿದ್ದು, 17 ವರ್ಷದ ಬಾಧಿತ ಬಾಲಕಿಯನ್ನು ಇಲ್ಲಿನ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಯನ್ನು ಜಾರ್ಖಂಡ್ ಯುವಕ ಅಬ್ದುಲ್ ಎಂದು ಗುರುತಿಸಲಾಗಿದ್ದು, ಅವನನ್ನು ಪೊಲೀಸರು ಬಂಧಿಸಿದ್ದಾರೆ.
ಪಲ್ಲವಿ ರೈಸ್ ಮಿಲ್ ಸಮೀಪ ಮೀನು ಹಿಡಿಯಲು ತನ್ನ ಸೋದರ ಮತ್ತು ಚಿಕ್ಕಪ್ಪನ ಜತೆ ತೆರಳುತ್ತಿದ್ದಾಗ ಅಬ್ದುಲ್, ಬಾಲಕಿಯೆಡೆ ತನ್ನಲ್ಲಿದ್ದ ಪ್ರೀತಿ-ಪ್ರೇಮವನ್ನು ಜಾಗೃತಗೊಳಿಸಿದ್ದಾನೆ. ಹಾಗೆಂದೇ ಅವರೆದುರು ತನ್ನ ಪ್ರೀತಿಯನ್ನು ನಿವೇದಿಸಿಕೊಂಡಿದ್ದಾನೆ. ಆದರೆ ಕಾಲೇಜು ಓದುತ್ತಿರುವ ಬಾಲಕಿ ಅದನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾಳೆ.
ಇದರಿಂದ ಕುಪಿತನಾದ ಅಬ್ದುಲ್ಲಾ ದಿಢೀರನೆ ತನ್ನ ಜೇಬಿನಿಂದ ಚಾಕು ತೆಗೆದು ಆಕೆಯ ಕುತ್ತಿಗೆಯನ್ನು ಸೀಳಿದ್ದಾನೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಡುಪಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.












Click it and Unblock the Notifications