ಪಕ್ಷಗಳ ಚಟುವಟಿಕೆಗೆ ಆರ್ ಟಿಐ ಮೂಗುದಾರ

6 ವಾರಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಮಾಹಿತಿ ಅಧಿಕಾರಿ(CPIO)ಗಳನ್ನು ನೇಮಿಸಬೇಕು. ದೇಣಿಗೆ ಹಾಗೂ ಇತರೆ ಖರ್ಚಿನ ವಿವರಗಳನ್ನು ಬಹಿರಂಗಪಡಿಸಬೇಕು ಎಂದು ಮುಖ್ಯ ಮಾಹಿತಿ ಆಯುಕ್ತ ಸತ್ಯಾನಂದ ಮಿಶ್ರಾ, ಅನ್ನಪೂರ್ಣ ದೀಕ್ಷಿತ್ ಹಾಗೂ ಎಂಎಲ್ ಶರ್ಮ ಅವರನ್ನೊಳಗೊಂಡ ಕೇಂದ್ರೀಯ ಮಾಹಿತಿ ಆಯೋಗ(ಸಿಐಸಿ)ದ ತಂಡ ಈ ಮಹತ್ವದ ಆದೇಶ ನೀಡಿದೆ.
ಅಣ್ಣಾ ಹಜಾರೆ ತಂಡದ ಪ್ರಮುಖ ಸದಸ್ಯ, ಆರ್ ಟಿಐ ಪ್ರತಿಪಾದಕ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹಾಗೂ ಆರ್ಟಿಐ ಕಾರ್ಯಕರ್ತ ಸುಭಾಷ್ ಅಗರವಾಲ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿ, ರಾಜಕೀಯ ಪಕ್ಷಗಳನ್ನು ಆರ್ ಟಿಐ ವ್ಯಾಪ್ತಿಗೆ ತರುವಂತೆ ಕೋರಿದ್ದರು.
ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಸೇರಿಸಿದೆ. ಅಲ್ಲದೆ ಮಾಹಿತಿ ಹಕ್ಕು ಕಾಯ್ದೆಯ ಅನ್ವಯ ಸಾರ್ವಜನಿಕರಿಗೆ ಪಾತ್ರವಾಗುವ ಎಲ್ಲ ಹಕ್ಕುಗಳನ್ನು ನಾಗರೀಕರು ಈ ಹೊಸ ತಿದ್ದುಪಡಿಯಲ್ಲಿಯೂ ಚಲಾಯಿಸಬಹುದಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.
ದುಂದು ವೆಚ್ಚಕ್ಕೆ ಕಡಿವಾಣ: ಇನ್ನು ಮುಂದೆ ದೇಶದ ಎಲ್ಲ ರಾಜಕೀಯ ಪಕ್ಷಗಳ ಆರ್ಥಿಕ ವ್ಯವಹಾರ, ಖರ್ಚು, ವೆಚ್ಚ ಸೇರಿದಂತೆ ಅಭ್ಯರ್ಥಿಗಳ ಆಯ್ಕೆಯನ್ನು ನಾಗರೀಕರು ಆರ್ ಟಿಐ ಮೂಲಕ ಪ್ರಶ್ನಿಸಬಹುದಾಗಿದೆ. ಕೀಯ ನಾಯಕರ ಪ್ರವಾಸ, ಇಂಧನ ಖರ್ಚು, ಪ್ರವಾಸ ಭತ್ಯೆ, ಸಂಘ ಸಂಸ್ಥೆಗಳಿಂದ ಪಡೆದ ದೇಣಿಗೆ, ಅಲ್ಲದೆ ಬೇಕಾದ ಅಭ್ಯರ್ಥಿಗೆ ಟಿಕೆಟ್ ಹಂಚಿಕೆ ಮಾಡುವ ಪಕ್ಷಗಳನ್ನು ಕೂಡಾ ಪ್ರಶ್ನಿಸಲು ಅವಕಾಶ ಸಿಗಲಿದೆ
ಪ್ರಜೆಗಳು ಕೇಳುವ ಈ ಪ್ರಶ್ನೆಗಳಿಗೆ ಆಯಾ ಪಕ್ಷಗಳ ಸಿಬ್ಬಂದಿ, ಮಾಹಿತಿ ಅಧಿಕಾರಿ ಇಂತಿಷ್ಟು ಕಾಲದಲ್ಲಿ ಉತ್ತರಿಸಬೇಕು ಎಂಬ ನಿಯಮವೂ ಇದೆ. ಒಟ್ಟಾರೆ, ಜನತಂತ್ರ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮೂಡಿಸಲು ಆರ್ ಟಿಐ ಅಸ್ತ್ರ ಸದ್ಬಳಕೆಯಾಗಲಿದೆ.
ಕೇಂದ್ರ ಮಾಹಿತಿ ಆಯೋಗದ ನಿರ್ಣಯದಿಂದ ಕಾಂಗ್ರೆಸ್, ಬಿಜೆಪಿ, ಸಿಪಿಐ-ಎಂ, ಸಿಪಿಐ, ಎನ್ ಸಿಪಿ ಹಾಗೂ ಬಿಎಸ್ ಪಿ ಪಕ್ಷಗಳು ಆರ್ ಟಿಐ ವ್ಯಾಪ್ತಿಗೆ ಒಳಪಡಲಿವೆ. ಪಾರದರ್ಶಕ ಕಾಯ್ದೆ ಪ್ರಕಾರ ಯಾವುದೇ ಸರ್ಕಾರೇತರ ಸಂಸ್ಥೆ ಸರ್ಕಾರದಿಂದ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಿಧಿ/ದೇಣಿಗೆ ಪಡೆದರೆ ಅದು ಸಾರ್ವಜನಿಕ ಸ್ವತ್ತಿನ ಸಂಸ್ಥೆಯಾಗಿ ಪರಿಗಣಿಸಲ್ಪಡುತ್ತದೆ. ಈಗ ರಾಜಕೀಯ ಪಕ್ಷಗಳು ಪಾರ್ಟಿ ಫಂಡ್' ಹೆಸರಿನ ದೇಣಿಗೆಗಳು ಇದರಿಂದ ಹೊರತಾಗಿಲ್ಲ.












Click it and Unblock the Notifications