ಚಿತ್ರಸುದ್ದಿ : ಮಳೆ, ಪೊಲೀಸರ ರೆಸ್ಟ್, ಕೊಹ್ಲಿ ಹೊಡೆತ

ಬೆಂಗಳೂರು, ಜೂ. 2: ಮುಂಗಾರು ಮಾರುತಗಳು ಕೇರಳಕ್ಕೆ ಪ್ರವೇಶಿಸಿದ್ದು, ದೇಶದ ವಿವಿಧ ರಾಜ್ಯಗಳಲ್ಲಿ ಮಳೆಯ ಸಿಂಚನವಾಗಿದೆ. ಕೇರಳ, ಕರ್ನಾಟಕ, ತಮಿಳುನಾಡು ಮುಂತಾದ ರಾಜ್ಯಗಳಲ್ಲಿ ವರುಣ ದೇವ ಕೃಪೆ ತೋರಿದ್ದಾನೆ. ವಿವಿಧ ರಾಜ್ಯಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ಮಳೆಯಾಗುತ್ತಿದೆ.

ಕೊಚ್ಚಿ ನಗರದಲ್ಲಿಯೂ ಮಳೆಯ ಸಿಂಚನವಾಗಿದ್ದು, ಮಹಿಳೆಯೊಬ್ಬಳು ಛತ್ರಿ ಹಿಡಿದು ಒಬ್ಬಂಟಿಯಾಗಿ ತೆರಳುತ್ತಿದ್ದಾಳೆ. ಮುತ್ತಿನ ನಗರ ಹೈದರಾಬಾದ್ ನಲ್ಲಿ ಮಳೆಯ ಸಿಂಚನವಾಗಿಲ್ಲ. ಪೊಲೀಸರು ಬಿಸಿಲಿನಿಂದ ರಕ್ಷಿಸಿಕೊಳ್ಳಲು ಬೃಹದಾಕಾರದ ಪೈಪ್ ಕೆಳಗೆ ಆಶ್ರಯ ಪಡೆದಿದ್ದಾರೆ.

ಬೌದ್ಧ ಗುರು ದಲೈಲಾಮಾ ಧರ್ಮಶಾಲಾದಲ್ಲಿ ಉಪನ್ಯಾಸ ನೀಡಿದರು. ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ಇನ್ನಷ್ಟು ಚಿತ್ರಸುದ್ದಿಗಳು ನಿಮ್ಮ ಮುಂದೆ.

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ

ಮುಂಗಾರು ಕೇರಳ ಪ್ರವೇಶಿಸಿದ್ದು ಕೇರಳದಲ್ಲಿ ಮಳೆಯ ಸಿಂಚನವಾಗಿದೆ. ಕೊಚ್ಚಿಯಲ್ಲಿ ಸುರಿಯುವ ಮಳೆಯನ್ನೂ ಲೆಕ್ಕಿಸದೆ, ಮಹಿಳೆಯೊಬ್ಬಳು ಏಕಾಂಗಿ ಯಾನ ಕೈಗೊಂಡಿದ್ದಾಳೆ.

ಬಿಸಿಲಿನಿಂದ ಕಂಗೆಟ್ಟ ಪೊಲೀಸರು

ಬಿಸಿಲಿನಿಂದ ಕಂಗೆಟ್ಟ ಪೊಲೀಸರು

ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಮಳೆ ಆರಂಭವಾಗಿದ್ದರೂ, ಮುತ್ತಿನ ನಗರಿ ಹೈದರಾಬಾದ್ ಬಿಸಿಲಿನಿಂದ ಬೆಂಡಾಗಿದೆ. ಕರ್ತವ್ಯ ನಿರತರಾಗಿದ್ದ ಪೊಲೀಸರು, ಸೂರ್ಯನ ಮುಂದೆ ಸೋತು ಬೃಹತ್ ಪೈಪ್ ಕೆಳಗೆ ಆಶ್ರಯ ಪಡೆದರು.

ಚೀನಾ : ಕಾರ್ಖನೆ ವಿರುದ್ದ ಪ್ರತಿಭಟನೆ

ಚೀನಾ : ಕಾರ್ಖನೆ ವಿರುದ್ದ ಪ್ರತಿಭಟನೆ

ಚೀನಾದ ದಕ್ಷಿಣ ಪ್ರಾಂತ್ಯದಲ್ಲಿ ಕಾರ್ಖನೆ ತಾಜ್ಯದಿಂದ ಕ್ಯಾನ್ಸರ್ ಉಂಟಾಗುತ್ತಿದೆ. ಆದ್ದರಿಂದ ಕಾರ್ಖನೆ ಮುಚ್ಚಬೇಕು ಎಂದು ಆಗ್ರಹಿಸಿ ಜನರು ಪ್ರತಿಭಟನೆ ನಡೆಸಿದ ಬಗೆ ಇದು.

ಶಿಲ್ಪಾ ಶೆಟ್ಟಿ ನಗುವಿನ ಮೋಡಿ

ಶಿಲ್ಪಾ ಶೆಟ್ಟಿ ನಗುವಿನ ಮೋಡಿ

ನವದೆಹಲಿಯಲ್ಲಿ ಕಂಪನಿಯೊಂದರ ನೀರು ಶುದ್ಧಿಕರಣ ಉಪಕರಣ ಬಿಡುಗಡೆ ಮಾಡಿ, ಮೋಹಕ ನಗು ಚೆಲ್ಲಿದ ನಟಿ ಶಿಲ್ಪಾ ಶೆಟ್ಟಿ.

ಚಿತಾಭಸ್ಮ ಗಂಗೆಯ ಒಡಲಿಗೆ

ಚಿತಾಭಸ್ಮ ಗಂಗೆಯ ಒಡಲಿಗೆ

ಛತ್ತೀಸ್ ಗಢ್ ನಲ್ಲಿ ಇತ್ತೀಚೆಗೆ ನಕ್ಸಲೀಯರ ದಾಳಿಯಿಂದ ಮೃತಪಟ್ಟ, ಮಹೇಂದ್ರ ಕರ್ಮ ಅವರ ಚಿತಾಭಸ್ಮವನ್ನು ಅವರ ಕುಟುಂಬ ಸದಸ್ಯರು ಅಲಹಾಬಾದ್ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಿದರು.

ಶಾಂತಿ ದೂತನ ಪ್ರವಚನ

ಶಾಂತಿ ದೂತನ ಪ್ರವಚನ

ಬೌದ್ಧ ಧರ್ಮಗುರು ದಲೈಲಾಮಾ ಧರ್ಮಶಾಲಾದಲ್ಲಿ ಸಾವಿರಾರು ಬೌದ್ಧ ಭಿಕ್ಷುಗಳನ್ನು ಉದ್ದೇಶಿಸಿ ಪ್ರವಚನ ನೀಡಿದರು.

ಕೊಹ್ಲಿ ಶತಕದ ಸಂಭ್ರಮ

ಕೊಹ್ಲಿ ಶತಕದ ಸಂಭ್ರಮ

ಶ್ರೀಲಂಕಾ ವಿರುದ್ಧ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಆಕರ್ಷಕ ಶತಕ ಸಿಡಿಸಿದರು. ಶ್ರೀಲಂಕಾ ನೀಡಿದ 334 ರನ್ ಗಳನ್ನು ಬೆನ್ನಟ್ಟಿದ ಭಾರತ, ಕೊಹ್ಲಿ ಅವರ 144 ರನ್ ಗಳ ಶತಕದ ನೆರವಿನಿಂದ 49 ಓವರ್ ಗಳಲ್ಲೇ ಗುರಿ ಮಟ್ಟಿ, ವಿಜಯ ಸಾಧಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+