ರಾಜೀನಾಮೆ ಬೇಕಾ, ಬೇಡಿಕೆ ಈಡೇರಿಸಿ : ಶ್ರೀನಿವಾಸನ್
ಮುಂಬೈ, ಜೂ.1: ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸ್ ಅವರ ಪದಚ್ಯುತಿಗೆ ಮಾಧ್ಯಮಗಳು ಕಾಯುತ್ತಿರುವ ಹೊತ್ತಿನಲ್ಲೇ ಬಿಸಿಸಿಐನ ಇಬ್ಬರು ಪ್ರಮುಖ ಅಧಿಕಾರಿಗಳು ಶ್ರೀನಿವಾಸನ್ ಅವರ ಕಾರ್ಯವೈಖರಿಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಈ ನಡುವೆ ಬಿಸಿಸಿಐ ತುರ್ತು ಸಭೆ ಭಾನುವಾರ(ಜೂ.2) ನಯಲಿದೆ. ಎನ್.ಶ್ರೀನಿವಾಸನ್ ಹೊಸದಾಗಿ ಬೇಡಿಕೆ ಇಟ್ಟಿದ್ದಾರಂತೆ..ಏನದು ಮುಂದೆ ಓದಿ...
ಬಿಸಿಸಿಐ ಕಾರ್ಯದರ್ಶಿ ಸಂಜಯ್ ಜಗದಾಳೆ ಹಾಗೂ ಖಜಾಂಚಿ ಅಜಯ್ ಟಿರ್ಕೆ ಅವರು ಶುಕ್ರವಾರ ತಮ್ಮ ಸ್ಥಾನಗಳಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಬಿಸಿಸಿಐ ಕಾರ್ಯಕಾರಿಣಿ ಸಮಿತಿಯ ತುರ್ತು ಸಭೆ ಜೂ. 8ರಂದು ನಡೆಯಲು ನಿಗದಿಯಾಗಿತ್ತು. ಆದರೆ, ಇಬ್ಬರು ಹಿರಿಯ ಅಧಿಕಾರಿಗಳ ರಾಜೀನಾಮೆ ಹಿನ್ನೆಲೆಯಲ್ಲಿ ತುರ್ತು ಸಭೆ ಮುಂಚಿತವಾಗಿನಡೆಸುವ ಸಾಧ್ಯತೆ ಇದೆ ಎಂದು ಬಿಸಿಸಿಐನ ಸಹ ಕಾರ್ಯದರ್ಶಿ ಅನುರಾಗ್ ಠಾಕೂರ್ ಹೇಳಿದ್ದಾರೆ.
ಬಿಸಿಸಿಐ ಕಾರ್ಯಕಾರಿಣಿ ಸಮಿತಿಯ ತುರ್ತು ಸಭೆ ಕರೆಯದಿದ್ದರೆ ರಾಜೀನಾಮೆ ನೀಡುವುದಾಗಿ ಕಾರ್ಯದರ್ಶಿ ಸಂಜಯ್ ಜಗದಾಳೆ ಹಾಗೂ ಖಜಾಂಚಿ ಶಿರ್ಕೆ ಹಾಗೂ ಸಹ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಶ್ರೀನಿವಾಸನ್ ಬೆದರಿಕೆ ಒಡ್ಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನಷ್ಟು ಅಪ್ಡೇಡ್ ಗಳು ಕಾಲಕಾಲಕ್ಕೆ ಸಿಗಲಿದೆ ಓದುತ್ತಿರಿ
ಸಮಯ 2.50: ಟಿವಿ ಮಾಧ್ಯಮಗಳ ವರದಿ ಪ್ರಕಾರ ಬಿಸಿಸಿಐ ಸದಸ್ಯರ ಒತ್ತಡಕ್ಕೆ ಮಣಿದಿರುವ ಶ್ರೀನಿವಾಸನ್ ಅವರು ರಾಜೀನಾಮೆ ನೀಡುತ್ತೇನೆ ಆದರೆ ನನ್ನ ಮೂರು ಬೇಡಿಕೆ ಈಡೇರಿಸಿ ಎಂದಿದ್ದಾರಂತೆ.
* ಐಸಿಸಿ ಸಮಿತಿಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ
* ಹುದ್ದೆಯಿಂದ ಕೆಳಗಿಳಿಯುವ ಮುನ್ನ ತಾನು ಸೂಚಿಸಿದವರೇ ಖಜಾಂಚಿ ಹಾಗೂ ಕಾರ್ಯದರ್ಶಿ ಆಗಬೇಕು
* ಬೋರ್ಡ್ ಸದಸ್ಯರಲ್ಲದವರು ಬಿಸಿಸಿಐ ಅಧ್ಯಕ್ಷರಾಗಲೇ ಬಾರದು
ಸಮಯ 1.15: ಬಿಸಿಸಿಐ ಬಿಗ್ ಬಾಸ್ ಹುದ್ದೆಗೆ ಶಶಾಂಕ್ ಮನೋಹರ್ ಕೇಳಿ ಬರುತ್ತಿದ್ದು, ಸಿಎನ್ ಎನ್ ಐಬಿಎನ್ ವಾಹಿನಿ ವರದಿ ಪ್ರಕಾರ ಸ್ಪಾಟ್ ಫಿಕ್ಸಿಂಗ್ ತನಿಖೆ ಮುಗಿಯುವವರೆಗೂ ಶ್ರೀನಿವಾಸನ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ನಂತರ ಮತ್ತೆ ಅಧಿಕಾರ ವಹಿಸಿಕೊಳ್ಳುತ್ತಾರಂತೆ.
ಸಮಯ 12.30: ಟೈಮ್ಸ್ ನೌ ಪ್ರಕಾರ ಬಿಸಿಸಿಸಿ ತುರ್ತು ಸಭೆಯನ್ನು ಚೆನ್ನೈನಲ್ಲಿ ಭಾನುವಾರ (ಜೂ.2) ಮಧ್ಯಾಹ್ನ 11 ಗಂಟೆಗೆ ನಡೆಸಲು ಉದ್ದೇಶಿಸಲಾಗಿದೆ ಎಂದು ದಕ್ಷಿಣ ವಲಯ ಶಿವಲಾಲ್ ಯಾದವ್ ಅವರು ಹೇಳಿದ್ದಾರೆ. ಇದು ಶ್ರೀನಿವಾಸನ್ ಅವರನ್ನು ಹೊರದಬ್ಬಲು ನಡೆಸಲಿರುವ ಕೊನೆ ಪ್ರಯತ್ನ ಎನ್ನಲಾಗಿದೆ. ಆದರೆ, 31 ಜನ ಸದಸ್ಯರಲ್ಲಿ ಶ್ರೀನಿವಾಸನ್ ಔಟ್ ಮಾಡಲು ಬಹುಮತ ಇನ್ನೂ ಸಿಕ್ಕಿಲ್ಲ.
ಸಮಯ 12.15: ಬುಕ್ಕಿಗಳ ಸಂಪರ್ಕ ಹೊಂದಿರುವ ಸಿಎಸ್ ಕೆ ಬಾಸ್ ಗುರುನಾಥ್ ಮೇಯಪ್ಪನ್ ಅವರಿಗೆ ಐಸಿಸಿ ಅಧಿಕಾರಿ ಟೆರಿ ಎಂಬುವರು ಏಪ್ರಿಲ್ ನಲ್ಲಿ ಕರೆ ಮಾಡಿ ಎಚ್ಚರಿಕೆ ನೀಡಿದ್ದರು ಎಂಬ ಮಾಹಿತಿಯನ್ನು ಮುಂಬೈ ಪೊಲೀಸರು ಹೊರ ಹಾಕಿದ್ದಾರೆ.
ಸಮಯ 10.45 : ಬಿಸಿಸಿಐ ಉಪಾಧ್ಯಕ್ಷರಾದ ಅರುಣ್ ಜೇಟ್ಲಿ, ಶಿವಲಾಲ್ ಯಾದವ್, ಚಿತ್ರಾಕ್ ಮಿತ್ರ, ನಿರಂಜನ್ ಶಾ ಹಾಗೂ ಸುಧೀರ್ ದಬಿರ್ ಅವರು ಶ್ರೀನಿವಾಸನ್ ಬಿಸಿಸಿಐ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಬೇಕು ಅಥವಾ ನಮ್ಮ ರಾಜೀನಾಮೆ ಸ್ವೀಕರಿಸಬೇಕು ಎಂದು ಎಚ್ಚರಿಸಿದ್ದಾರೆ.
Srinivasan cornered further, may quit soon www.oneindia.com/2013/06/01/sri… #NSrinivasan
— Oneindia.in (@Oneindia) June 1, 2013
Srini to call #BCCI Working Committee tomorrow in Chennai to discuss his future? Polarisation for and against Srini begins? #IPL
— Prabhu Chawla (@PrabhuChawla) June 1, 2013
Entire world wanted BCCI Chief Srinivasan to resign. But @infosys Chairman KV Kamath resigned. Chalo #theekhai #spotfixing
— karnataka.com (@karnatakacom) June 1, 2013
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications