ಪೈ, ಶಾ ವಿರುದ್ಧ ತಿರುಗಿಬಿದ್ದ ಎಸ್ಸಾರ್ ಪಾಟೀಲ್

65 ವರ್ಷ ವಯಸ್ಸಿನ ಮಂತ್ರಿಯನ್ನು ಐಟಿ ಬಿಟಿ ಸಚಿವರಾಗಿ ಪಡೆದು ನಾವು ಏನು ಪ್ರಗತಿ ಸಾಧಿಸಲು ಸಾಧ್ಯ ಎಂದು ಈ ಇಬ್ಬರು ಗಣ್ಯರು ಪ್ರಶ್ನೆ ಎತ್ತಿದ್ದರು. ಇದಕ್ಕೆ ಎಸ್ ಆರ್ ಪಾಟೀಲ್ ಅವರು ಖಡಕ್ ಉತ್ತರ ನೀಡಿದ್ದಾರೆ.
ಎಸ್ಸೆಂ ಕೃಷ್ಣ ಅವರು 75 ವರ್ಷದ ಇಳಿ ವಯಸ್ಸಿನಲ್ಲಿ ಬೆಂಗಳೂರನ್ನು ಐಟಿ ರಾಜಧಾನಿ ದರ್ಜೆಗೆ ಏರಿಸ ಬಹುದಾದರೆ ನಾನು 65 ವರ್ಷ ವಯಸ್ಸಿನವ ನಾನು ಏಕೆ ಐಟಿ ಕ್ಷೇತ್ರ ಉದ್ಧಾರ ಮಾಡಲು ಸಾಧ್ಯವಿಲ್ಲ. ವಯಸ್ಸಿಗೂ ಹುದ್ದೆಗೂ ತಾಳೆ ಹಾಕಿ ತೂಗುವ ಪ್ರವೃತ್ತಿ ಬಿಡಿ ನನಗೂ ಐಟಿ ಕ್ಷೇತ್ರದ ಪರಿಚಯವಿದೆ ಎಂದು ಐಟಿ ಬಿಟಿ ಸಚಿವ ಎಸ್ ಆರ್ ಪಾಟೀಲ್ ಅವರು ತರಾಟೆ ತೆಗೆದುಕೊಂಡಿದ್ದಾರೆ.
ಈ ಮುಂಚೆ ಬಿಜೆಪಿ ಸರ್ಕಾರದಲ್ಲಿದ್ದ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಐಟಿ ಸಚಿವರಾಗಿದ್ದಾಗ ಈ ಪ್ರಶ್ನೆ ಏಕೆ ಎತ್ತಲಿಲ್ಲ. ಕೈಗಾರಿಕೆ, ಸಕ್ಕರೆ ಉದ್ಯಮ, ಕಾರ್ಪೋರೇಟ್ ಬ್ಯಾಂಕ್ ಅಲ್ಲದೆ ಸರ್ಕಾರಿ ಕಾಲೇಜು, ಶಾಲೆಗಳಿಗೆ ಸಹಾಯ ಹಸ್ತ ಚಾಚಿ ನೆರವಾಗಿದ್ದೇನೆ. ಬೇಕಾದರೆ ಪರಿಶೀಲಿಸಬಹುದು.
ಚಾಲೆಂಜ್ : 2020ರೊಳಗೆ ರಾಜ್ಯದ ಸಾಫ್ಟ್ ವೇರ್ ರಫ್ತು ಪ್ರಮಾಣವನ್ನು 4,00,000 ಕೋಟಿ ರು ಗೆ ಏರಿಸುವ ಗುರಿ ಹೊಂದಿದ್ದೇನೆ. ಸಿದ್ದರಾಮಯ್ಯ ಅವರು ನನ್ನ ಮೇಲೆ ನಂಬಿಕೆ ಇಟ್ಟು ಈ ಖಾತೆ ನೀಡಿದ್ದಾರೆ. ನನ್ನ ಉತ್ಸಾಹಕ್ಕೆ ಭಂಗ ತರಬೇಡಿ ಎಂದು ಪಾಟೀಲ್ ಹೇಳಿದ್ದಾರೆ. ಸದ್ಯಕ್ಕೆ ರಾಜ್ಯದ ಸಾಫ್ಟ್ ವೇರ್ ರಫ್ತು ಪ್ರಮಾಣ 1,35,000 ಕೋಟಿ ರು ನಷ್ಟಿದೆ.
ಬ್ರ್ಯಾಂಡ್ ಬೆಂಗಳೂರು: ಬೆಂಗಳೂರು ಕೇಂದ್ರಿಕೃತ ಐಟಿ -ಬಿಟಿ ಉದ್ಯಮವನ್ನು ಎರಡನೇ ಹಾಗೂ ಮೂರನೇ ಸ್ತರದ ನಗರಗಳಿಗೆ ಕೊಂಡೊಯ್ಯುವುದು ನನ್ನ ಗುರಿ. ಸಾಮಾನ್ಯ ಜನರ ಜೊತೆ ಐಟಿ ಸಂಪರ್ಕ ಸಾಧಿಸಲು ಯತ್ನಿಸುತ್ತೇನೆ.
ಸಾಮಾಜಿಕ ಜಾಲ ತಾಣಗಳಲ್ಲಿ ಎಸ್ ಆರ್ ಪಾಟೀಲ್ vs ಪೈ, ಶಾ ವಾರ್ ಬಗ್ಗೆ ಚರ್ಚೆ ನಡೆದಿದೆ. ಜೊತೆಗೆ ಬಿಪ್ಯಾಕ್ ಎಂಬ ಸಂಘಟನೆ ಮುಖಂಡರಾದ ಪೈ ಹಾಗೂ ಶಾ ಅವರು ಬೆಂಬಲಿಸಿದ ಕೃಷ್ಣಭೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ಅವರು ಐಟಿ ಬಿಟಿ ಸಚಿವರಾಗಬೇಕಿತ್ತೆ? ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನಿಸಲಾಗಿದೆ.
The 3 should meet over a cup of coffee. After all a lot can happen over a cup of coffee j.mp/1aDh7tR @kiranshaw @mdpai05 @oneindia
— BG Mahesh (@bgmahesh) May 30, 2013
Pai or Kiran Majumdar have no business to question credentials of SR Patil citing his age. They forgot they were propped up by 71 yr Old SMK
— Suresh En (@surnell) May 30, 2013
"Let them comment if I under perform. How can these two,claiming 2 have all the knowledge, reach a conclusion within a day?" #SRPatil #Ktaka
— Sudheendra Budya (@HiSudheendra) May 30, 2013












Click it and Unblock the Notifications