ಮೋದಿಗೆ ಪರಮಾಧಿಕಾರ ಕೊಟ್ರೆ ಬಿಎಸ್ವೈ ಬಿಜೆಪಿಗೆ
ರಾಜ್ಯದಲ್ಲಿ ಬಿಜೆಪಿ ಗೆದ್ದಿದ್ದರೆ ನನಗೆ ಅಚ್ಚರಿಯಾಗುತ್ತಿತ್ತು ಎಂದು ಬ್ಲಾಗಿನಲ್ಲಿ ಹೇಳಿಕೊಂಡಿದ್ದ ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರ ವಿರುದ್ಧ ಕಿಡಿಕಾರಿ ಪತ್ರ ಬರೆದಿದ್ದ ವಿಧಾನಪರಿಷತ್ ಸದಸ್ಯ, ರಾಜ್ಯ ಬಿಜೆಪಿ ಖಜಾಂಚಿಯಾಗಿದ್ದ ಲೆಹರ್ ಸಿಂಗ್ ಅವರನ್ನು 17.05.2013 ರಂದು ಪಕ್ಷದಿಂದ ಉಚ್ಚಾಟಿಸಲಾಗಿತ್ತು.
ಎಲ್ ಕೆ ಅಡ್ವಾಣಿ ನಡವಳಿಕೆ ಹಾಗೂ ಮನೋಭಾವವನ್ನೇ ಪ್ರಶ್ನಿಸಿದ್ದ ಲೆಹರ್ ಸಿಂಗ್, ಈ ಹಿಂದೆ ಕೂಡಾ ಮೋದಿ ಹಾಗೂ ಯಡಿಯೂರಪ್ಪ ಪರ ಮಾತುಗಳನ್ನಾಡಿ, ಬಿಜೆಪಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದರು.
ಸದ್ಯದಲ್ಲೇ ಏಳು ರಾಜ್ಯಗಳ ರಾಜಧಾನಿಗಳಿಗೆ ಭೇಟಿ ನೀಡಿ ಅಡ್ವಾಣಿ ಅವರ ವಿರುದ್ಧ ಡಂಗುರ ಹೊಡೆಯುವ ಕಾರ್ಯಕ್ರಮ ಹಾಕಿಕೊಂಡಿದ್ದೇನೆ ಎಂದು ಲೆಹರ್ ಸಿಂಗ್ ಹೇಳಿಕೆ ಕೊಟ್ಟಿದ್ದರು. ಈ ಮಧ್ಯೆ ಔಟ್ ಲುಕ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಲೆಹರ್ ಸಿಂಗ್ ಮತ್ತೆ ಮೋದಿ ಮತ್ತು ಯಡಿಯೂರಪ್ಪ ಮೇಲೆ ಒಲವು ತೋರಿದ್ದಾರೆ. ಸಂದರ್ಶನದ ಆಯ್ದ ಭಾಗ ಸ್ಲೈಡಿನಲ್ಲಿ.....

ಲೆಹರ್ ಸಿಂಗ್ ಸಂದರ್ಶನ
ಪ್ರ: ಹಿರಿಯ ನಾಯಕ ಆಡ್ವಾಣಿ ವಿರುದ್ದ ನಿಮ್ಮ ಸಿಟ್ಟಿಗೆ ಪ್ರಮುಖ ಕಾರಣ?
ಲೆಹರ್ ಸಿಂಗ್ : ಆಡ್ವಾಣಿಜಿಯವರ ಬಳಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದೆ. ಅದಕ್ಕಾಗಿ ನನ್ನನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಇಂದಿರಾ ಗಾಂಧಿ ಮತ್ತು ಸೋನಿಯಾ ಗಾಂಧಿಯವರನ್ನು ಪ್ರಶ್ನಿಸಿದರೆ ಕಾಂಗ್ರೆಸ್ಸಿನಲ್ಲಿ ಇದೇ ಸಂಪ್ರದಾಯವಿದೆ. ಬಿಜೆಪಿ ನನ್ನನ್ನು ಉಚ್ಚಾಟಿಸಿರಬಹುದು. ಆದರೆ ಬಿಜೆಪಿಯ ತತ್ವ ಮತ್ತು ಸಿದ್ದಾಂತಕ್ಕೆ ನಾನು ಈಗಲೂ ತಲೆಬಾಗುತ್ತೇನೆ.

ಲೆಹರ್ ಸಿಂಗ್ ಸಂದರ್ಶನ
ಪ್ರ : ಆಡ್ವಾಣಿ ಮೇಲೆ ಮಾತ್ರ ನಿಮಗೆ ಕೋಪವೇ ಅಥವಾ ಪಕ್ಷದ ಇನ್ನಿತರರ ಮೇಲೆ ಇದೆಯೇ?
ಲೆಹರ್ ಸಿಂಗ್ : ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಕಾರ್ಯ ವೈಖರಿಯ ಮೇಲೆ ನನಗೆ ಬಹಳ ಅಸಮಾಧಾನವಿದೆ. ಇವರು ಸೋನಿಯಾ ಗಾಂಧಿ ಜೊತೆ ಸಂಧಾನಕ್ಕೆ ಹೋಗಿದ್ದು ಏಕೆ? ಬಳ್ಳಾರಿ ರೆಡ್ಡಿಗಳನ್ನು ಬೆಳೆಸಿದ ಪರಿ ಪಕ್ಷಕ್ಕೆ ಮುಜುಗರ ತಂದಿಲ್ಲವೇ? ರೆಡ್ಡಿಗಳು ಹಗರಣದಲ್ಲಿ ಸಿಲುಕುತ್ತಿದ್ದಂತೆಯೇ ಇವರು ಸೋನಿಯಾ ಜೊತೆ ಸಂಧಾನಕ್ಕೆ ಮುಂದಾಗಿದ್ದನ್ನು ಗಮನಿಸಿದರೆ ರೆಡ್ಡಿಗಳ ವಿಚಾರದಲ್ಲಿ ಇವರ ಪಾತ್ರವೇನು ಎನ್ನುವ ಪ್ರಶ್ನೆ ಉಧ್ಭವಿಸುವುದಿಲ್ಲವೇ?

ಲೆಹರ್ ಸಿಂಗ್ ಸಂದರ್ಶನ
ಪ್ರ: ಪಕ್ಷ ನರೇಂದ್ರ ಮೋದಿಗೆ ಮತ್ತಷ್ಟು ಶಕ್ತಿ ನೀಡಿದರೆ ನಿಮ್ಮ ಪರಮಾಪ್ತರಾದ ಕೆಜೆಪಿ ಸಂಸ್ಥಾಪಕ ಯಡಿಯೂರಪ್ಪ ಮತ್ತೆ ಬಿಜೆಪಿ ಮರಳುವರೇ?
ಲೆಹರ್ ಸಿಂಗ್ : ಕೆಲವೇ ಕೆಲವು ಗಂಟೆಯಲ್ಲಿ ಯಡಿಯೂರಪ್ಪ ಬಿಜೆಪಿಗೆ ಮರಳುತ್ತಾರೆ. ಇದರ ಬಗ್ಗೆ ಸಂಶಯವೇ ಬೇಡ. ನರೇಂದ್ರ ಮೋದಿ ಬಿಜೆಪಿಯನ್ನು ಮುನ್ನಡೆಸುವಂತಾದರೆ ಯಡಿಯೂರಪ್ಪ ಖಂಡಿತಾ ತನ್ನ ಮಾತೃ ಪಕ್ಷಕ್ಕೆ ಮರಳುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗಿರುವ ದೌರ್ಬಲ್ಯವೇನೆಂದರೆ ದೆಹಲಿಯಲ್ಲಿರುವ ಪಕ್ಷದ ಯಾವುದೇ ಮುಖಂಡರು ಮಾಸ್ ನಾಯಕರಲ್ಲ.

ಲೆಹರ್ ಸಿಂಗ್ ಸಂದರ್ಶನ
ಪ್ರ: ನೀವು ಆಡ್ವಾಣಿಗೆ ಬರದ ಪತ್ರದಲ್ಲಿ ಭ್ರಷ್ಟಾಚಾರದ ಬಗ್ಗೆ ಜಾಣ ಕುರುಡುತನ ತೋರಿದ್ದೀರಿ ಎಂದು ಹೇಳಿದ್ದೀರಿ. ಈ ಹೇಳಿಕೆಯನ್ನು ಹೇಗೆ ಸಮರ್ಧಿಸಿಕೊಳ್ಳುತ್ತೀರಾ?
ಲೆಹರ್ ಸಿಂಗ್: ಭ್ರಷ್ಟಾಚಾರದ ವಿಚಾರಕ್ಕೆ ಬಂದಾಗ ಬಿಜೆಪಿ ಬೇರೆ ಪಕ್ಷಕ್ಕೆ ಹೊರತಾಗಿಲ್ಲ ಎನ್ನುವುದು ನೋವಿನ ವಿಚಾರ. ನಮ್ಮ ರಾಜ್ಯದ ಕೆಲವು ನಾಯಕರನ್ನು ದೆಹಲಿ ಮಟ್ಟದಲ್ಲಿ ಅತ್ಯಂತ ಕೀಳಾಗಿ ನೋಡಿಕೊಳ್ಳಲಾಯಿತು. ಮಾಧ್ಯಮದವರು ಅವರನ್ನು ಎಷ್ಟೇ ಅವಮಾನಿಸಿದರೂ ಪಕ್ಷದ ಹಿರಿಯರು ತಲೆಕೆಡಿಸಿಕೊಂಡಿಲ್ಲ. ಅವರಿಗೆ ಬೇಕಾದ ವ್ಯಕ್ತಿಗಳು ಎಷ್ಟೇ ಭ್ರಷ್ಟಾಚಾರದಲ್ಲಿ ತೊಡಗಿದ್ದರೂ ಅವರನ್ನು ಬೆಳೆಸುವ ಕೆಲಸವನ್ನು ಪಕ್ಷ ಮಾಡಿತು.

ಲೆಹರ್ ಸಿಂಗ್ ಸಂದರ್ಶನ
ಪ್ರ: ನಿಮ್ಮ ಟಾರ್ಗೆಟ್ ಆಡ್ವಾಣಿ ಮೇಲೆ ಮಾತ್ರವೇಕೆ? ರಾಜನಾಥ್ ಸಿಂಗ್, RSS ಬಗ್ಗೆ ನೀವು ಚಕಾರವೆತ್ತುತ್ತಿಲ್ಲ?
ಲೆಹರ್ ಸಿಂಗ್: ರಾಜನಾಥ್ ಸಿಂಗ್, ಜೇಟ್ಲಿ, RSS ಬಗ್ಗೆ ಮಾತಾಡಿ ಏನೂ ಪ್ರಯೋಜನವಿಲ್ಲ. ಈಗಾಗಲೇ ನಾನು ಹೇಳಿದಂತೆ ದೆಹಲಿಯ ನಾಯಕರಿಗೆ ಮಾಸ್ ಟಚ್ ಇಲ್ಲ. ಅರುಣ್ ಜೇಟ್ಲಿಗೆ ಜನಸಂಪರ್ಕವೆನ್ನುವುದೇ ಇಲ್ಲ. ನರೇಂದ್ರ ಮೋದಿ, ವಸುಂಧರಾ ರಾಜೆ, ಶಿವರಾಜ್ ಸಿಂಗ್, ರಮಣ್ ಸಿಂಗ್ ಮುಂತಾದವರು ಆಯಾಯ ರಾಜ್ಯದಲ್ಲಿ ಮಾಸ್ ಲೀಡರ್ ಗಳು. ನಿಜವಾದ ನಾಯಕರು ಇರುವುದು ರಾಜ್ಯದಲ್ಲಿ. ಮೋದಿಗೆ ರಾಷ್ಟ್ರ ಮಟ್ಟದಲ್ಲಿ ಜನಪ್ರಿಯತೆ ಇದೆ ಎನ್ನುವುದುನ್ನು ಪಕ್ಷ ಅರಿತುಕೊಳ್ಳಬೇಕು, ಕ್ಷುಲ್ಲಕ ಜಗಳದಲ್ಲಿ ಸಮಯ ವ್ಯರ್ಥ ಮಾಡಿಕೊಳ್ಳುವುದು ಬೇಡ.
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral












Click it and Unblock the Notifications