ಬೆಂಗಳೂರು : ಜೀವನದಲ್ಲಿ ಜಿಗುಪ್ಸೆ ವಕೀಲ ಆತ್ಮಹತ್ಯೆ

ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ನೆಹರು ರಸ್ತೆಯಲ್ಲಿ ವಾಸವಾಗಿದ್ದ ಪಾರ್ಥಸಾರಥಿ (52) ಮೃತ ದುರ್ದೈವಿ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಪಾರ್ಥಸಾರಥಿ ಇತ್ತಿಚಿನ ದಿನಗಳಲ್ಲಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಮೃತನ ಸ್ನೇಹಿತರು ಹೇಳಿದ್ದಾರೆ.
ಸ್ನೇಹಿತರ ಕೊಠಡಿಗೆ ಸೋಮವಾರ ಸಂಜೆಯ ವೇಳೆಗೆ ಆಗಮಿಸಿದ್ದ ಪಾರ್ಥಸಾರಧಿ, ಸ್ನೇಹಿತರು ಕೆಲಸದ ನಿಮಿತ್ತ ಹೊರಹೋದ ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ನೇಹಿತರು ರಾತ್ರಿ ತಡವಾಗಿ ರೂಂಗೆ ಆಗಮಿಸಿದ್ದು ಆಗ ಘಟನೆ ಬಗ್ಗೆ ಮಾಹಿತಿ ತಿಳಿದಿದೆ.
ಪಾರ್ಥಸಾರಥಿ ಮಂಡ್ಯ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕೆಲವು ದಿನಗಳಿಂದ ಅವರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ತಮ್ಮ ಬಳಿ ಇದ್ದ ವಕೀಲ ವೃತ್ತಿಗೆ ಸಂಬಂಧಿಸಿದ ಪುಸ್ತಕಗಳನ್ನು ಸ್ನೇಹಿತರಿಗೆ 1.25 ಲಕ್ಷ ರೂಗೆ ಮಾರಾಟ ಮಾಡಿದ್ದರು.
ಈ ಹಣ ಪಡೆಯಲು ಸ್ನೇಹಿತರ ರೂಂಗೆ ಆಗಮಿಸಿದ್ದರು. ಆದರೆ, ಸ್ನೇಹಿತರು ಹೊರಹೋದ ನಂತರ ಆತ್ಮಗತ್ಯೆಗೆ ಶರಣಾಗಿದ್ದಾರೆ. ಪುಸ್ತಕ ಖರೀದಿಸಿದ ಸ್ನೇಹಿತರು ತಕ್ಷಣ 25 ಸಾವಿರ ರೂ. ಹಣ ನೀಡಿದ್ದರು. ಉಳಿದ ಹಣವನ್ನು ಪಡೆಯಲು ಪಾರ್ಥಸಾರಥಿ ಆಗಮಿಸಿದ್ದರು.
ಸ್ಥಳಕ್ಕೆ ಆಗಮಿಸಿದ ಬಾಣಸವಾಡಿ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರ್ಥಿಕ ಸಂಕಷ್ಟವೆ ಆತ್ಮಹತ್ಯೆಗೆ ಕಾರಣವಿರಬಹದು ಎಂದು ಪೊಲೀಸ್ ತಿಳಿಸಿದ್ದಾರೆ.












Click it and Unblock the Notifications