ವೃತ್ತಿ ಶಿಕ್ಷಣ ಈ ವರ್ಷ ದುಬಾರಿ ಆಗಲ್ಲ

ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಂಜೆ ನಡೆಸ ಸಭೆಯ ಬಳಿಕ, ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ಹೆಚ್ಚಿಸುವ ಪ್ರಸ್ತಾವನೆಯನ್ನು ಕೈ ಬಿಟ್ಟಿವೆ. ಮುಂದಿನ ವರ್ಷದಿಂದ ಶುಲ್ಕ ಹೆಚ್ಚಳ ಮಾಡುವುದಾಗಿ ಸಂಸ್ಥೆಗಳು ಹೇಳಿವೆ.
ಏಕರೂಪ ಶುಲ್ಕ ಹಾಗೂ ಮೇಲ್ವಿಚಾರಣೆ ಸಮಿತಿ ರಚನೆಗೆ ಅವಕಾಶ ಕಲ್ಪಿಸಿದ್ದ 2006ರ ಸಿಇಟಿ ಕಾಯ್ದೆಯನ್ನು ತಾಂತ್ರಿಕ ಕಾರಣಗಳಿಂದಾಗಿ ಈ ಬಾರಿ ಜಾರಿಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಈ ವರ್ಷ ಶುಲ್ಕ ಮತ್ತು ಸೀಟು ಹಂಚಿಕೆ ಕಳೆದ ಬಾರಿಯ ಮಾದರಿಯಲ್ಲೇ ಮುಂದುವರೆಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ, ಕಾಯಿದೆ ಅನುಷ್ಠಾನಗೊಳಿಸಿ ವಿದ್ಯಾರ್ಥಿಗಳಿಗೆ ನೆರವಾಗಲು ಸರ್ಕಾರ ಸಿದ್ಧವಿದೆ. ಆದರೆ, ಈ ಬಾರಿ ಸಮಿತಿ ರಚನೆಯ ಗಡುವು ಮುಗಿದಿರುವುದರಿಂದ ಮುಂದಿನ ವರ್ಷ ಕಾಯ್ದೆ ಜಾರಿಗೊಳಿಸಲಾಗುವುದು ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್, ಕಾನೂನು ಸಚಿವ ಟಿ.ಬಿ.ಜಯಚಂದ್ರ ಮತ್ತು ಖಾಸಗೀ ಶಿಕ್ಷಣ ಸಂಸ್ಥೆಯ ಮಾಲೀಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಮೇ 28ಕ್ಕೆ ಫಲಿತಾಂಶ : ಮೇ 28ರ ಸಂಜೆ ಸಿಇಟಿ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಕೌನ್ಸೆಲಿಂಗ್
* ಮೇ 29 ಬದಲು ಜೂ.3ರಿಂದ 23ರ ವರೆಗೆ ಮೂಲ ದಾಖಲೆ ಪರಿಶೀಲನೆ
* ಜೂ.3 ವಿಕಲಚೇತನ ಮತ್ತು ಎಸ್ ಸಿಸಿ (ಬೆಂಗಳೂರಿನ ಸಿಇಟಿ ಕೇಂದ್ರ)
* ಜೂ.4 ಕ್ರೀಡಾ ಕೋಟಾದ ಅಭ್ಯ್ಥರ್ಥಿಗಳಿಗೆ (ಬೆಂಗಳೂರಿನ ಸಿಇಟಿ ಕೇಂದ್ರ)
* ಜೂ.5ರಿಂದ 23-ರಾಜ್ಯದ 1 ಸಿಇಟಿ ಕೇಂದ್ರಗಳಲ್ಲಿ
ಸೀಟು ಮತ್ತು ಶುಲ್ಕ ವಿವರಗಳು
* ಇಂಜಿನಿಯರಿಂಗ್ ಸೀಟು
ಸೀಟು : 45:55 ( ಅಲ್ಪ ಸಂಖ್ಯಾತ 40:60)
ಶುಲ್ಕ : 18,090 (ಸರ್ಕಾರಿ)
36,090-41,590(ಖಾಸಗಿ)
* ಮೆಡಿಕಲ್
40:60
(ಅಲ್ಪ ಸಂಖ್ಯಾತ 25:75)
ಶುಲ್ಕ : 16,700(ಸರ್ಕಾರಿ)
46,00(ಖಾಸಗಿ)
* ದಂತವೈದ್ಯ
35:65 (ಅಲ್ಪ ಸಂಖ್ಯಾತ 25:75)
14,400 (ಸರ್ಕಾರಿ)
35,500 (ಖಾಸಗಿ)












Click it and Unblock the Notifications