ಜಿಲ್ಲಾ ಉಸ್ತುವಾರಿ ಸಚಿವರ ಸಮಗ್ರ ಪಟ್ಟಿ

ಮುಂದಿನ ಸ್ವಾತಂತ್ರೋತ್ಸವದಂದು ಅಯಾ ಜಿಲ್ಲೆಗಳಲ್ಲಿ ರಾಷ್ಟ್ರಧ್ವಜ ಹಾರಿಸಲು ಅಧಿಕೃತ ನಾಯಕರ ಪಟ್ಟಿ ಹೊರ ಬಿದ್ದಿದೆ. ತಮಗೆ ಸಿಕ್ಕಿರುವ ಜಿಲ್ಲೆಗಳ ಬಗ್ಗೆ ಯಾವುದೇ ಕ್ಯಾಬಿನೆಟ್ ಸಚಿವರು ಖ್ಯಾತೆ ತೆಗೆದಿರುವ ಸುದ್ದಿ ಬಂದಿಲ್ಲ.
ಸಿದ್ದರಾಮಯ್ಯ ಸಚಿವ ಸಂಪುಟದ 29 ಸಚಿವರುಗಳಿಗೆ ರಾಜ್ಯದ 30 ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಲಾಗಿದೆ. ಮೈಸೂರಿನ ಟಿ.ನರಸೀಪುರದಿಂದ ಅಸೆಂಬ್ಲಿಗೆ ಆಯ್ಕೆಯಾಗಿರುವ ಡಾ. ಎಚ್ ಸಿ ಮಹದೇವಪ್ಪ ಅವರಿಗೆ ಹಾಸನ ಮತ್ತು ಕೊಡಗು ಜಿಲ್ಲೆ ಉಸ್ತುವಾರಿಯನ್ನು ನೀಡಲಾಗಿದೆ.
ಚಿಕ್ಕಮಗಳೂರು ಉಸ್ತುವಾರಿಯನ್ನು ಅಭಯಚಂದ್ರ ಜೈನ್ ಹಾಗೂ ದಕ್ಷಿಣ ಕನ್ನಡ ಜಿಲ್ಲೆ ಉಸ್ತುವಾರಿಯನ್ನು ಅರಣ್ಯ ಸಚಿವ ರಮಾನಾಥ ರೈ ಅವರಿಗೆ ನೀಡಲಾಗಿದೆ. ಯಾರಿಗೂ ಬೇಡವಾದ ಶಾಪಗ್ರಸ್ತ ಚಾಮರಾಜನಗರ ಜಿಲ್ಲೆ ಉಸ್ತುವಾರಿಯನ್ನು ಎಚ್.ಎಸ್ ಮಹಾದೇವಪ್ರಸಾದ್ ವಹಿಸಿಕೊಂಡಿದ್ದಾರೆ.
ಜಿಲ್ಲಾವಾರು ಉಸ್ತುವಾರಿ ಸಚಿವರ ಸಮಗ್ರ ಪಟ್ಟಿ ಇಂತಿದೆ:
| ಜಿಲ್ಲೆ | ಉಸ್ತುವಾರಿ ಸಚಿವರು |
| ಧಾರವಾಡ | ಸಂತೋಷ್ ಲಾಡ್ |
| ಬಾಗಲಕೋಟೆ | ಎಸ್.ಆರ್ ಪಾಟೀಲ್ |
| ಬಿಜಾಪುರ | ಎಂ.ಬಿ. ಪಾಟೀಲ್ |
| ಕೊಪ್ಪಳ | ಶಿವರಾಜ್ ತಂಗಡಗಿ |
| ಬೆಳಗಾವಿ | ಸತೀಶ್ ಜಾರಕಿಹೊಳಿ |
| ಗದಗ | ಎಚ್.ಕೆ ಪಾಟೀಲ್ |
| ಶಿವಮೊಗ್ಗ | ಕಿಮ್ಮನೆ ರತ್ನಾಕರ್ |
| ಹಾವೇರಿ | ಪ್ರಕಾಶ್ ಹುಕ್ಕೇರಿ |
| ದಾವಣಗೆರೆ | ಶಾಮನೂರು ಶಿವಶಂಕರಪ್ಪ |
| ಯಾದಗಿರಿ | ಬಾಬುರಾವ್ ಚಿಂಚನಸೂರ್ |
| ಚಿಕ್ಕಮಗಳೂರು | ಅಭಯಚಂದ್ರ ಜೈನ್ |
| ಉತ್ತರ ಕನ್ನಡ | ಆರ್.ವಿ ದೇಶಪಾಂಡೆ |
| ಉಡುಪಿ | ವಿನಯ್ ಕುಮಾರ್ ಸೊರಕೆ |
| ದಕ್ಷಿಣ ಕನ್ನಡ | ರಮಾನಾಥ ರೈ |
| ತುಮಕೂರು | ಟಿ.ಬಿ ಜಯಚಂದ್ರ |
| ಹಾಸನ | ಡಾ. ಎಚ್ ಸಿ ಮಹದೇವಪ್ಪ |
| ಚಾಮರಾಜನಗರ | ಎಚ್.ಎಸ್.ಮಹಾದೇವಪ್ರಸಾದ್ |
| ಮೈಸೂರು | ವಿ. ಶ್ರೀನಿವಾಸಪ್ರಸಾದ್ |
| ಮಂಡ್ಯ | ಅಂಬರೀಷ್ |
| ಬೆಂಗಳೂರು ನಗರ | ರಾಮಲಿಂಗಾ ರೆಡ್ಡಿ |
| ಚಿಕ್ಕಬಳ್ಳಾಪುರ | ದಿನೇಶ್ ಗುಂಡೂರಾವ್ |
| ಕೋಲಾರ | ಯು.ಟಿ ಖಾದರ್ |
| ರಾಯಚೂರು | ಉಮಾಶ್ರೀ |
| ಬಳ್ಳಾರಿ | ಪರಮೇಶ್ವರ್ ನಾಯಕ್ |
| ಚಿತ್ರದುರ್ಗ | ಆಂಜನೇಯ |
| ರಾಮನಗರ | ಕೃಷ್ಣಭೈರೇಗೌಡ |
| ಕೊಡಗು | ಡಾ. ಎಚ್ ಸಿ ಮಹದೇವಪ್ಪ |
| ಬೀದರ್ | ಶರಣ ಪ್ರಕಾಶ್ ಪಾಟೀಲ್ |
| ಬೆಂಗಳೂರು ಗ್ರಾಮಾಂತರ | ಕೆಜೆ ಜಾರ್ಜ್ |
| ಗುಲ್ಬರ್ಗಾ | ಖಮರುಲ್ ಇಸ್ಲಾಂ |












Click it and Unblock the Notifications