ರೆಡ್ಡಿಯಂತೆ ಜಗನ್ ರಾಜಕೀಯ ನಿರ್ನಾಮ: ಕಾಂಗ್ರೆಸ್

ಮುಂದಿನ ಚುನಾವಣೆಯಲ್ಲಿ (2014) ಕಾಂಗ್ರೆಸ್ ಪಕ್ಷವೇ ಜಯ ಸಾಧಿಸಲಿದ್ದು, ಕರ್ನಾಟಕದಲ್ಲಿ ಜನಾರ್ದನ ರೆಡ್ಡಿಯ ಬಿಎಸ್ಆರ್ ಕಾಂಗ್ರೆಸ್ ಧೂಳೀಪಟವಾದಂತೆ ವೈಎಸ್‌ಆರ್ ಕಾಂಗ್ರೆಸ್ ಸಹ ನಾಮಾವಶೇಷವಾಗಲಿದೆ ಎಂದು ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೋತ್ಸಾ ಸತ್ಯನಾರಾಯಣ ಹೇಳಿದ್ದಾರೆ.
ಸಧ್ಯದಲ್ಲೇ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದೆ. ಅದರಲ್ಲೂ ಕರ್ನಾಟಕದಂತೆ ಫಲಿತಾಂಶ ಬರಲಿದೆ. ಮುಂದಿನ ಚುನಾವಣೆಯಲ್ಲಿ ವೈಎಸ್‌ಆರ್ ಕಾಂಗ್ರೆಸ್‌ನಿಂದ ಕಾಂಗ್ರೆಸ್‌ಗೆ 'ಬೆದರಿಕೆ' ಇರುವುದು ನಿಜ ಆದರೆ ಅದರ ಆಯಸ್ಸು ಕಡಿಮೆ. ಕರ್ನಾಟಕದಲ್ಲಿ ಗಾಲಿ ಜನಾರ್ದನ ರೆಡ್ಡಿ ಮೊದಮೊದಲು ಮಿಂಚಿದರು. ಆದರೆ, ಕೊನೆಗೆ ಇತ್ತೀಚಿನ ಚುನಾವಣೆಯಲ್ಲಿ ಬಿಎಸ್ಆರ್ ಕಾಂಗ್ರೆಸ್ ಹೇಳಹೆಸರಿಲ್ಲದಂತಾಗಿದೆ ಎಂದು ಬೋತ್ಸಾ ವಿಶ್ಲೇಷಿಸಿದ್ದಾರೆ.
ತೆಲಂಗಾಣ- ವೈಎಸ್‌ಆರ್ ಫ್ಯಾಕ್ಟರ್:
ತೆಲಂಗಾಣ ಮತ್ತು ವೈಎಸ್‌ಆರ್ ಕಾಂಗ್ರೆಸ್ ವಿಚಾರದಿಂದಾಗಿ ಕಳೆದರಡು ವರ್ಷಗಳಲ್ಲಿ ರಾಜ್ಯದಲ್ಲಿ ತಮ್ಮ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ಇದೇ ವೇಳೆ ಒಪ್ಪಿಕೊಂಡ ಅವರು, ಭ್ರಷ್ಟಾಚಾರ ವಿಚಾರದಲ್ಲಿ ವೈಎಸ್‌ಆರ್ ಕಾಂಗ್ರೆಸ್ ಜನರನ್ನು ದಿಕ್ಕುತಪ್ಪಿಸುತ್ತಿದೆ ಎಂದು ದೂರಿದರು.












Click it and Unblock the Notifications