ಬೆಂಗಳೂರಿನ ಐಐಎಂಗೆ ಬಾಂಬ್ ಬೆದರಿಕೆ

ಐಐಎಂ ಬಿ ಸ್ವಾಗತ ಕಚೇರಿಗೆ ಗುರುವಾರ ಮಧ್ಯಾಹ್ನ 1.30 ರಿಂದ 2 ಗಂಟೆ ಅವಧಿಯಲ್ಲಿ ಐಐಎಂ ಬಿ ಕಟ್ಟಡವನ್ನು ಧ್ವಂಸಗೊಳಿಸಲಾಗುತ್ತದೆ ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾನೆ ಎಂದು ತಿಳಿದು ಬಂದಿದೆ.
ಐಐಎಂಬಿ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳದಿಂದ ಐಐಎಂಬಿ ಕಟ್ಟಡದ ಎಲ್ಲಾ ಭಾಗಗಳಲ್ಲಿ ಪರೀಕ್ಷೆ ನಡೆಸಿದ ಮೇಲೆ ಇದೊಂದು ಹುಸಿ ಬೆದರಿಕೆ ಕರೆ ಎಂದು ಗೊತ್ತಾಗಿದೆ.
ಇದು ಹುಸಿ ಬೆದರಿಕೆ ಕರೆ ಇರಬಹುದಾದರೂ ಐಐಎಂಬಿ ವಿದ್ಯಾರ್ಥಿಗಳು ಸಿಬ್ಬಂದಿಗಳು ಆತಂಕಗೊಂಡಿದ್ದಾರೆ. ಕರೆ ಬಂದ ಕೂಡಲೇ ಎಲ್ಲರನ್ನು ಕಟ್ಟಡದಿಂದ ಹೊರಕ್ಕೆ ಬರುವಂತೆ ಸೂಚಿಸಲಾಗಿತ್ತು ಎಂದು ಐಐಎಂಬಿ ಸ್ವಾಗತ ಕಚೇರಿ ಮುಖ್ಯಸ್ಥರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಈ ಹಿಂದೆ ಕೂಡಾ ಈ ರೀತಿ ಹುಸಿ ಬೆದರಿಕೆ ಕರೆಗಳು ಸಾಕಷ್ಟು ಬಾರಿ ಬಂದಿವೆ. ಕಾಲೇಜು, ಶಾಲೆ ಕಟ್ಟಡ ಸ್ಫೋಟ ಹಾಗೂ ವಿಧಾನಸೌಧ, ಕೆಪಿಸಿಸಿ ಕಚೇರಿ ಧ್ವಂಸಗೊಳಿಸುವ ಬಗ್ಗೆ ವರದಿಗಳನ್ನು ಮೆಲುಕು ಹಾಕಬಹುದು.
Right wingnut speak :) -> RT @db_delalpha: Bomb scare at IIMB.'--this Govt is capable of introducing quota for Muslims using this as excuse
— Shantanu (@shantanub) May 23, 2013
Apparently prank call. But threat taken seriously. IIMB campus access restricted twitter.com/surnell/status…
— Suresh En (@surnell) May 23, 2013
Bomb threat at IIMB wp.me/p1cKzB-4cI
— Vicky Nanjappa » (@vickynanjappa) May 23, 2013
@theunrealtimes this means no ambani studded convocation for next year graduates at IIMB #bombhoax
— rishigesh (@rishi0812) May 23, 2013
■ A telephone call about a bomb being planted in the Indian Institute of Management Bangalore (IIMB) on Thursday... fb.me/zsylYusU
— Bengal Newz (India) (@BengalNewzIndia) May 23, 2013












Click it and Unblock the Notifications