ಗೋಹತ್ಯೆ ಪ್ರೇರೇಪಿದ ಫೇಸ್ ಬುಕ್ ವಿರುದ್ಧ FIR

Aao mil kar kaaten aay (ಬನ್ನಿ, ಒಟ್ಟಿಗೆ ಸೇರಿ ಹಸುವನ್ನು ತಿನ್ನೋಣ) ಎಂಬ ತಲೆಬರಹದಡಿ ವಿಷಯ ಪ್ರಸ್ತಾಪಿಸಲಾಗಿತ್ತು. ಐಪಿಸಿ ಸೆಕ್ಷನ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಕಾಯಿದೆ-2000 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿವಾದಿತ ಗೋಹತ್ಯೆ ಬಗ್ಗೆ ಮಾಹಿತಿ ಇರುವ ಪುಟವನ್ನು ಫೇಸ್ ಬುಕ್ ಗೋಡೆಗೆ ಪೋಸ್ಟ್ ಮಾಡುವ ಮುನ್ನ ಫೇಸ್ ಬುಕ್ ಕಂಪನಿ ಅದರ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಂಡಿರಲಿಲ್ಲ. ಆದಾಗ್ಯೂ, ಎಚ್ಚರಿಕೆ ನೀಡಲಾಗಿತ್ತು. ಆದರೂ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದು ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಐಪಿಎಸ್ ಅಮಿತಾಭ್ ಠಾಕೂರ್ ಅಸಮಾಧಾನ ವ್ಯಕ್ತಪಡಿಸಿದ್ದರು.
ಗೋಹತ್ಯೆ ವಿಷಯ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತದ್ದು. ಅದನ್ನು ಸಾಮಾಜಿಕ ಜಾಲ ತಾಣದಲ್ಲಿ ಉತ್ತೇಜಿಸುವುದರಿಂದ ಸಾಮಾಜಿಕ ಸಾಮರಸ್ಯಕ್ಕೆ ಭಂಗವುಂಟಾಗುತ್ತದೆ ಎಂದು ಅಮಿತಾಭ್ ಕಿಡಿಕಾರಿದ್ದರು.












Click it and Unblock the Notifications