ಐಗೇಟ್ ನಿಂದ ಹೊರಬಿದ್ದಿದ್ದು ಫಣೀಶ್ ಗೆ ವರದಾನ?

ಕ್ಯಾಲಿಫೋರ್ನಿಯಾ, ಮೇ.22: ಐಗೇಟ್ ಕಂಪನಿಯ ಸಿಇಒ ಫಣೀಶ್ ಮೂರ್ತಿ ಅವರನ್ನು ಮತ್ತೆ ಕೆಲಸದಿಂದ ತೆಗೆದುಹಾಕಲಾಗಿದೆ. ಲೈಂಗಿಕ ಕಿರುಕುಳ ಆರೋಪ ಹೊತ್ತಿರುವ ಫಣೀಶ್ ಮೂರ್ತಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ತನ್ನದು ತಪ್ಪಾಯ್ತು ಎಂದು ವರದಿಗಾರರ ಮುಂದೆ ಒಪ್ಪಿಕೊಂಡಿದಾರೆ. ಆದರೆ, ಐಗೇಟ್ ನಿಂದ ಹೊರ ಬಿದ್ದಿದ್ದು ಫಣೀಶ್ ಜೇಬು ಭರ್ಜರಿಯಾಗಿ ತುಂಬಿಸಿದೆ ಎಂಬ ಸುದ್ದಿಯೂ ಇದೆ.

2002ರಲ್ಲಿ ಇನ್ಫೋಸಿಸ್ ಉದ್ಯೋಗಿಯಾಗಿದ್ದಾಗ Reka Maximovitch ಎಂಬುವರು ಫಣೀಶ್ ಮೂರ್ತಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರೆಸಿದ್ದರು. ಈ ಕಾನೂನು ತೊಡಕು ಪರಿಹರಿಸಿಕೊಳ್ಳಲು ಇನ್ಫೋಸಿಸ್ ಗೆ 3 ಮಿಲಿಯನ್ ಡಾಲರ್ ಖರ್ಚಾಗಿತ್ತು. ಫಣೀಶ್ ಗೆ ಇನ್ಫೋಸಿಸ್ ಕೆಲಸ ಹೋಯಿತು.

ಆದರೆ,ಈ ಬಾರಿ ಫಣೀಶ್ ಅವರು ಮುಂದಾಲೋಚನೆ ಮಾಡಿ ಐಗೇಟ್ ಸಂಸ್ಥೆಯಲ್ಲಿದ್ದ ತಮ್ಮ 1,50,000 ಷೇರುಗಳನ್ನು ಮಾರಾಟಮಾಡಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.

Did iGate ouster actually help Phaneesh Murthy mint millions?

ನಾಸ್ಡಾಕ್ ವರದಿಯನ್ನು ಉಲ್ಲೇಖಿಸಿ ಟೈಮ್ ಆಫ್ ಇಂಡಿಯಾ ನೀಡಿರುವ ವರದಿ ಪ್ರಕಾರ ಮೂರ್ತಿ ಅವರು ಮಾರ್ಚ್ 6 ರಂದು 104,459 ಷೇರುಗಳನ್ನು $18.88 ದರದಂತೆ ಮಾರಾಟ ಮಾಡಿ 1.97 ಮಿಲಿಯನ್ ಡಾಲರ್ ಜೇಬಿಗಿಳಿಸಿಕೊಂಡಿದ್ದಾರೆ. ಒಂದು ತಿಂಗಳ ನಂತರ ಏಪ್ರಿಲ್ 19 ರಂದು ಮೂರ್ತಿ ಮತ್ತೊಮ್ಮೆ 40,000 ಷೇರುಗಳನ್ನು 17.1 ಡಾಲರ್ ದರದಂತೆ ಮಾರುವ ಮೂಲಕ 684,000 ಡಾಲರ್ ಗಳಿಸಿದ್ದಾರೆ.

ಐಗೇಟ್ ಸಂಸ್ಥೆ ಜೀವ ತುಂಬಿದ ಫಣೀಶ್ ಮೂರ್ತಿ ಅವರು ಪಟ್ನಿ ಕಂಪ್ಯೂಟರ್ಸ್ ಖರೀದಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ಫೋಸಿಸ್ ನ ಭಾರಿ ತಲೆಗಳ ನಡುವೆ ಫಣೀಶ್ ಮೂರ್ತಿ ಅತ್ಯಂತ ಚಾಣಾಕ್ಷ ಎಂದು ಇಂದಿಗೂ ಸಮಕಾಲೀನರು ಹೇಳುತ್ತಾರೆ. ಅದರಂತೆ, ಐಗೇಟ್ ನಲ್ಲಿ ಏನೋ ಸಂಭವಿಸುವ ಸೂಚನೆ ಸಿಕ್ಕಿದ್ದರಿಂದಲೆ ಕಳೆದ ಎರಡು ತಿಂಗಳಲ್ಲಿ ಫಣೀಶ್ ಅವರು ಷೇರುಗಳನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

ನ್ಯಾಸಾಕಾಂ ಸ್ವಾಗತ: ಐಗೇಟ್ ನಿಂದ ಫಣೀಶ್ ಅವರಿಗೆ ಗೇಟ್ ಪಾಸ್ ನೀಡಿರುವುದನ್ನು ನ್ಯಾಸ್ ಕಾಂ ಚೇರ್ಮನ್ ಕೃಷ್ಣಕುಮಾರ್ ನಟರಾಜನ್ ಸ್ವಾಗತಿಸಿದ್ದಾರೆ. ಭಾರತದ ಐಟಿ ಜಗತ್ತಿನ ಮೇಲೆ ಇದು ನೇರವಾಗಿ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.

ಈ ನಡುವೆ ಇನ್ಫೋಸಿಸ್ ನ ಮಾಜಿ ಸಹದ್ಯೋಗಿ ಮೋಹನ್ ದಾಸ್ ಪೈ ಅವರು ಪ್ರತಿಕ್ರಿಯಿಸಿ, ಫಣೀಶ್ ಅವರು ಈ ಮುಂಚಿನ ಪ್ರಕರಣದಿಂದ ಪಾಠ ಕಲಿಯಬೇಕಾಗಿತ್ತು. ಆದರೆ, ಅವರು ಮತ್ತೆ ಅದೇ ತಪ್ಪು ಎಸಗಿದ್ದಾರೆ. ಶಿಕ್ಷೆ ಸ್ವಾಗತಾರ್ಹ ಇದು ಬೇರೆ ಐಟಿ ಉದ್ಯಮಿಗಳಿಗೆ ಪಾಠವಾಗಲಿದೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+