10 ರು ಚಾಕಲೇಟ್ ತಿಂದು 30K ಪಡೆದ

ಆದರೆ, ಈ ರೀತಿ ಕಬ್ಬಿಣ ಗುಂಡು ಸೂಜಿ ಕ್ಯಾಡ್ ಬರೀಸ್ ನಲ್ಲಿ ಕಾಣಿಸಿಕೊಂಡಿದ್ದು ಇವತ್ತಲ್ಲ. ಡಿ.26,2011. ಮತ್ತೆ ಇವತ್ತು ಏಕೆ ಈ ಸುದ್ದಿ ಹೊರ ಬಂದಿದೆ ಎಂದರೆ, ಕ್ಯಾಡ್ ಬರೀಸ್ ನಲ್ಲಿ ಸೂಜಿ ಕಂಡು ಹೌಹಾರಿದ್ದ ಗ್ರಾಹಕ ಕೋರ್ಟಿ ಮೆಟ್ಟಿಲೇರಿದ್ದ. ಬುಧವಾರ(ಮೇ.22) ಕ್ಯಾಡಬರೀಸ್ ಸಂಸ್ಥೆಗೆ ವಿರುದ್ಧವಾಗಿ ತೀರ್ಪು ಹೊರಬಂದಿದೆ. ನೊಂದ ಗ್ರಾಹಕನಿಗೆ 30 ಸಾವಿರ ರು ಪರಿಹಾರ ನೀಡುವಂತೆ ಕೋರ್ಟ್ ಸೂಚಿಸಿದೆ.
ಆಗಿದ್ದೇನು?: ಮೇಲ್ಕಂಡ ದಿನಾಂಕದಂದು ಗ್ರಾಹಕರೊಬ್ಬರು ತಮ್ಮ ಮೂರು ವರ್ಷದ ಮಗಳು ಹಠ ಮಾಡಿದಳು ಎಂದು ಕ್ಯಾಡಬರೀಸ್ ಚಾಕಲೇಟ್ ಕೊಂಡಿದ್ದಾರೆ.. ಚಾಕಲೇಟ್ ನಲ್ಲಿ ಕಬ್ಬಿಣ ಪಿನ್ ಇರುವುದನ್ನು ಗಮನಿಸಿದ ಗ್ರಾಹಕ ತಡ ಮಾಡದೆ ಗ್ರಾಹಕರ ಹಿತರಕ್ಷಣಾ ವೇದಿಕೆಗೆ ದೂರು ನೀಡಿದ್ದಾರೆ.
ಹಲವು ಸುತ್ತಿನ ವಿಚಾರಣೆ ನಂತರ ಪಶ್ಚಿಮ ತ್ರಿಪುರ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಕೋರ್ಟ್ ತನ್ನ ತೀರ್ಪು ನೀಡಿದ್ದು ಕ್ಯಾಡ್ ಬರಿ ಇಂಡಿಯಾ ಸಂಸ್ಥೆ ಗ್ರಾಹಕನಿಗೆ ಒಂದು ತಿಂಗಳೊಳಗೆ 30 ಸಾವಿರ ರು ದಂಡ ತೆರುವಂತೆ ಸೂಚಿಸಿದೆ.
ಇದರ ಜೊತೆಗೆ ಗ್ರಾಹಕರಲ್ಲಿ ಕ್ಷಮೆಯಾಚಿಸಿ, ದೂರು ನೀಡಿಕೆ, ಕೋರ್ಟ್ ವೆಚ್ಚ 1000 ರು ಕೂಡಾ ಭರಿಸುವಂತೆ ಕ್ಯಾಡ್ ಬರಿ ಇಂಡಿಯಾಗೆ ಕೋರ್ಟ್ ನಿರ್ದೇಶಿಸಿದೆ..
ಕ್ಯಾಡ್ ಬರಿ ಚಾಣಾಕ್ಷತನ: 2003ರಲ್ಲಿ ಮಹಾರಾಷ್ಟ್ರದಲ್ಲಿ ಕ್ಯಾಡ್ ಬರಿ ಡೈರಿ ಮಿಲ್ಕ್ ಚಾಕಲೇಟ್ ನಲ್ಲಿ ಹುಳ ಕಾಣಿಸಿಕೊಂಡ ಪ್ರಕರಣವನ್ನು ಅತ್ಯಂತ ಜಾಣತನದಿಂದ ನಿಭಾಯಿಸಿದ ಕ್ಯಾಡ್ ಬರಿ ಇಂಡಿಯಾ ಎಲ್ಲರಿಗೂ ವಿಕೋಪ ಪರಿಸ್ಥಿತಿ ನಿಭಾಯಿಸುವ ಮ್ಯಾನೇಜ್ಮೆಂಟ್ ಪಾಠ ಕಲಿಸಿತ್ತು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಭಾರತದ ಜನಪ್ರಿಯ ನಟ ಬಿಗ್ ಬಿ ಅಮಿತಾಬ್ ರನ್ನು ಮುಂದಿಟ್ಟುಕೊಂಡು ಕ್ಯಾಡ್ ಬರಿ ಚಾಕಲೋಟ್ ಅತ್ಯಂತ ಶುದ್ಧ ಹಾಗೂ ಸುರಕ್ಷಿತ ಎಂದು ಹೇಳಿಸಿತು.
ಪ್ರಮುಖ ಪತ್ರಿಕೆ, ಮಾಧ್ಯಮಗಳಲ್ಲಿ ಕ್ಯಾಡ್ ಬರಿ ಪರ ಜಾಹೀರಾತು ಕಾಣಿಸಿಕೊಂಡಿತು. ಕಳಪೆ ಪ್ಯಾಕೇಜಿಂಗ್ ಸಂಸ್ಥೆಯಿಂದಾಗಿ ನಾವು ಈ ದಿನವನ್ನು ಎದುರಿಸಬೇಕಾಯಿತು ಎಂದು ಕ್ಯಾಡ್ ಬರಿ ಸಂಸ್ಥೆ ತನ್ನ ಗುಣಮಟ್ಟವನ್ನು ಹಾಡಿ ಹೊಗಳಿತ್ತು. ಸುಮಾರು 15 ಕೋಟಿ ರು ಹೂಡಿಕೆ ಮಾಡಿ ಹೊಸ ಯಂತ್ರಗಳನ್ನು ತರಿಸಿಕೊಂಡು ಪ್ಯಾಕೇಜಿಂಗ್ ಪದ್ಧತಿಯನ್ನು ಬದಲಾಯಿಸಿತು. ಕೊನೆಗೆ ಚಾಕಲೋಟ್ ಮಾರುಕಟ್ಟೆಯಲ್ಲಿ ಶೇ70ಕ್ಕೂ ಅಧಿಕ ಪಾಲು ಹೊಂದುವ ಮೂಲಕ ಜನರ ಪ್ರೀತಿ ಮತ್ತೊಮ್ಮೆ ಗಳಿಸಿತು.












Click it and Unblock the Notifications