'ನೋಡ್ತಿರಿ ಅವ್ರು ಕಾಂಗ್ರೆಸ್ ಬೆನ್ನಿಗೂ ಚೂರಿ ಹಾಕ್ತಾರೆ'

ಹಾಗೆ ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕುವ ವ್ಯಕ್ತಿ ಈ ಹಿಂದೆ ತಾವಿದ್ದ ಪಕ್ಷಗಳಿಗೂ ಟೋಪಿ ಹಾಕಿದ್ದರು ಎಂದು ಹೇಳುತ್ತಿದ್ದಂತೆ ನಿಸ್ಸಂಶಯವಾಗಿ ಅದು ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಹಿಂದಿನ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿರುವ ಮಾತು ಎಂಬುದು ಯಾರಿಗೇ ಆಗಲಿ ವೇದ್ಯವಾಗುತ್ತದೆ.
ಹೌದು, ಬಿಜೆಪಿ-ಜೆಡಿಎಸ್ ಪಾರ್ಟಿ ಫಾರ್ಟಿ-ಫಾರ್ಟಿ ಆಗುತ್ತಿದ್ದಂತೆ, ಬಿಜೆಪಿ ಅಭ್ಯರ್ಥಿಯ ಅಕಾಲಿಕ ಸಾವು ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದ ಚುನಾವಣೆಗೆ (ಮೇ 28ರಂದು) ಎಲ್ಲಿಲ್ಲದ ಮಹತ್ವವನ್ನು ತಂದಿತ್ತಿದೆ. ಆದರೆ ಪಿರಿಯಾಪಟ್ಟಣ ಚುನಾವಣೆಯನ್ನು ಗೆದ್ದುಕೊಂಡು ಸಿದ್ದರಾಮಯ್ಯ ಅವರನ್ನು ನೇರಾನೇರ ಹಣಿಯಲು ಹವಣಿಸುತ್ತಿರುವ ಕುಮಾರಸ್ವಾಮಿ ಅವರು ಸಿಎಂ ಸಿದ್ದು ಅವರ ಚರಿತ್ರೆಯನ್ನು ಪಟ್ಟಣದ ಮತದಾರರ ಮುಂದೆ ಬಿಚ್ಚಿಟ್ಟಿದ್ದಾರೆ.
'ಅವಯ್ಯ ಗೊತ್ತಲ್ಲ. ಈ ಹಿಂದೆ ತನ್ನ ಪೋಷಿಸಿ, ಪೊರೆದ ಪಕ್ಷಗಳಿಗೇ ಪಂಗನಾಮ ಹಾಕಿರುವವನು. ಅಂತಹುದರಲ್ಲಿ ಈಗ ಕಾಂಗ್ರೆಸ್ ಪಕ್ಷದ ವತಿಯಿಂದ ಮುಖ್ಯಮಂತ್ರಿಯೇ ಆಗಿಬಿಟ್ಟಿದ್ದಾರೆ. ಆದರೆ, ಅವರು ಕೈ ಪಕ್ಷದ ಬೆನ್ನಿಗೆ ಚೂರಿ ಹಾಕುವ ಖಾತರಿ ನನಗಿದೆ. ನೀವು ಕಾದು ನೋಡಿ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರೆತ್ತದೆ ಕುಮಾರಸ್ವಾಮಿ ತಮ್ಮ ಹೃದಯದಲ್ಲಿ ಮಡುಗಟ್ಟಿದ್ದ ದುಃಖವನ್ನು ಹೊರಹಾಕಿದ್ದಾರೆ.
ಆದರೆ, ಯಾರ ವಿರುದ್ಧವೇ ಆಗಲಿ ತೊಡೆತಟ್ಟುವುದರಲ್ಲಿ ಸಿದ್ಧಹಸ್ತರಾದ ಸಿದ್ದು ಮೇ 28ರಂದು ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ ವೆಂಕಟೇಶ್ ಪರ ಮತಯಾಚಿಸಲು ಇಂದು ಪಿರಿಯಾಪಟ್ಟಣಕ್ಕೆ ಭೇಟಿ ನೀಡುತ್ತಿದ್ದಾರೆ. ಆಗ ಮತದಾರರ ಸಮ್ಮುಖದಲ್ಲಿ ಕುಮಾರಸ್ವಾಮಿಗೆ ಹೇಗೆ ತಿರುಗೇಟು ನೀಡುತ್ತಾರೋ ಕಾದುನೋಡಬಹುದು.
ಖರ್ಗೆ ಸಿಎಂ ಆಗದೇ ಇದ್ದುದಕ್ಕೆ ತಮ್ಮದೇ ಶೈಲಿಯಲ್ಲಿ ಕುಟುಕಿದ ಕುಮಾರಸ್ವಾಮಿ, ಕಾಂಗ್ರೆಸ್ಸಿನಲ್ಲಿ ಹಿರಿಯ, ನಿಷ್ಟಾವಂತ ದಲಿತ ನಾಯಕನನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದನ್ನು ಆ ಪಕ್ಷದ ಮುಖಂಡರೇ ವ್ಯವಸ್ಥಿತವಾಗಿ ತಡೆದರು. ಆದರೆ ಕಾಂಗ್ರೆಸ್ಸಿಗೆ ಅವರೇ ಅಂತಿಮ ಚರಣ ಹಾಡಲಿದ್ದಾರೆ ಎಂದು ಎಚ್ಚರಿಸಿದರು.
ತಮ್ಮ ಪಕ್ಷದ ಅಭ್ಯರ್ಥಿ ಕೆ ಮಹದೇವ್ ಪರ ಚುನಾವಣಾ ಪ್ರಚಾರ ನಡೆಸಿದ ಕುಮಾರಸ್ವಾಮಿ, ಮದ್ಯದ ದೊರೆಗಳು ಚುನಾವಣಾ ವೆಚ್ಚಕ್ಕೆ ಹಣದ ಹೊಳೆ ಹರಿಸಿದ್ದರಿಂದ ಅಗ್ಗದ ದರದಲ್ಲಿ ಮದ್ಯ ಮಾರಾಟ ಮಾಡಲು ಸರಕಾರ ಮುಂದಾಗಿದೆ. ಇದು ಸರಕಾರದ ಜನವಿರೋಧಿ ನೀತಿಯನ್ನು ಎತ್ತಿತೋರಿಸುತ್ತದೆ ಎಂದು ಆರೋಪಿಸಿದರು.
ಜೆಡಿಎಸ್‌ನ ಐದು ವಾಹನಗಳ ವಶ: ಈ ಮಧ್ಯೆ, ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅನುಮತಿ ಪಡೆಯದೆ ಉಪಯೋಗಿಸುತ್ತಿದ್ದ ಐದು ವಾಹನಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ಬಸವರಾಜ್ ತಿಳಿಸಿದ್ದಾರೆ. ಪೋರ್ಡ್ ಐಕಾನ್, ಟಾಟಾ ಇಂಡಿಕಾ, ಮಾರುತಿ ಸುಝುಕಿ, ಶೆವರ್ಲೆ, ಟೊಯೋಟಾ ಕ್ವಾಲಿಸ್ ವಾಹನಗಳನ್ನು ವಶಪಡಿಸಿಕೊಂಡು ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಬಸವರಾಜ್ ತಿಳಿಸಿದರು.
-
Krunal Pandya: ವಿರಾಟ್ ಕೊಹ್ಲಿ - 2026ರ ಆರ್ಸಿಬಿ ತಂಡದ ಬಗ್ಗೆ ಸ್ಟಾರ್ ಆಟಗಾರ ಕೃನಾಲ್ ಪಾಂಡ್ಯರಿಂದ ಮಹತ್ವ ವಿಷಯ ರಿವೀಲ್ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ












Click it and Unblock the Notifications