ಡಿಸಿಎಂ ಹುದ್ದೆ ಇಲ್ಲ, ದಿಲ್ಲಿಯಿಂದ ಸಿದ್ದು ಮೈಸೂರಿಗೆ

ವಿಶೇಷ ವಿಮಾನ ಏರುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ನೀಡಿದ್ದೇನೆ. ಸ್ಪೀಕರ್ ಸ್ಥಾನ ನೇಮಕಾತಿ ಬಗ್ಗೆ ಚರ್ಚೆ ನಡೆಸಲಾಯಿತು. ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಅನಗತ್ಯ ಎಂದು ಹೈ ಕಮಾಂಡ್ ಸ್ಪಷ್ಟಪಡಿಸಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಸಿದ್ದರಾಮಯ್ಯ ಅವರ ಆಪ್ತ ಗೆಳೆಯ ಸಿ.ಕೆ ರಾಮು ಎಂಬುವರು ನಿಧನರಾಗಿರುವ ಹಿನ್ನಲೆಯಲ್ಲಿ ದೆಹಲಿಯಿಂದ ನೇರವಾಗಿ ಮೈಸೂರಿಗೆ ತೆರಳುತ್ತಿದ್ದಾರೆ. ಸಿದ್ದರಾಮಯ್ಯ ದೆಹಲಿ ಭೇಟಿ ಚರ್ಚೆ ಹಾಗೂ ಸೋನಿಯಾ ಗಾಂಧಿ ಏನು ಹೇಳಿದರು ಎಂಬುದರ ಮುಖ್ಯಾಂಶ ಸಮಯ 11.25 ಇಲ್ಲಿದೆ:
* ಜಿ ಪರಮೇಶ್ವರ್ ಅವರಿಗೆ ಯಾವುದೇ ಹುದ್ದೆ ಭರವಸೆ ಸಿಕ್ಕಿಲ್ಲ. ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷರೇ ಮುಂದುವರಿಕೆ
* ಸಿದ್ದರಾಮಯ್ಯ ಸಂಪುಟದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಅನಗತ್ಯ
* ಸುಮಾರು 24 ಶಾಸಕರು ಶನಿವಾರದಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
* ಸಂಭಾವ್ಯ ಸಚಿವರ ಪಟ್ಟಿಯನ್ನು ಎ.ಕೆ.ಆಂಟನಿ ಮತ್ತು ಅಂಬಿಕಾ ಸೋನಿ ಅವರನ್ನು ಒಳಗೊಂಡ ಉಸ್ತುವಾರಿ ಸಮಿತಿ ಪರಿಶೀಲಿಸಿದ ನಂತರ ಸೋನಿಯಾಜಿ ಅಂಕಿತ ಹಾಕಿದ್ದಾರೆ.
* ಕಗ್ಗಂಟಾದ ಸ್ಪೀಕರ್ ಆಯ್ಕೆ: ಸ್ಪೀಕರ್ ಸ್ಥಾನ ಅಲಂಕರಿಸುವಂತೆ ಎಚ್.ಕೆ.ಪಾಟೀಲ್, ಟಿ.ಬಿ.ಜಯಚಂದ್ರ, ಆರ್.ವಿ.ದೇಶಪಾಂಡೆಗೆ ಕರೆ ನೀಡಲಾಗಿತ್ತು. ನಂತರ ರಮೇಶ್ ಕುಮಾರ್, ಶ್ರೀನಿವಾಸ್ ಪ್ರಸಾದ್ ಮತ್ತು ಕಾಗೋಡು ತಿಮ್ಮಪ್ಪ ಅವರ ಹೆಸರುಗಳನ್ನು ಪರಿಗಣಿಸಲಾಗಿತ್ತು.
* ಆದರೆ, ಸ್ಪೀಕರ್ ಸ್ಥಾನಕ್ಕೆ ಕಾಗೋಡು ತಿಮ್ಮಪ್ಪ ಅವರನ್ನು ನೇಮಿಸುವಂತೆ ಹೈ ಕಮಾಂಡ್ ಸೂಚಿಸಿದೆ. ಅವರನ್ನು ಒಪ್ಪಿಸುವ ಜವಾಬ್ದಾರಿ ಪರಮೇಶ್ವರ್ ಆವರಿಗೆ ನೀಡಲಾಗಿದೆ.












Click it and Unblock the Notifications