ಲಗ್ನಪತ್ರಿಕೆಯೇ ಹೀಗೆ, ಇನ್ನು ಮದುವೆ ಹ್ಯಾಗೋ?
ಇಂದು ಬಂಗಾರದ ಬೆಲೆ ಕೇಳಿದರೆ ಕನ್ಯಾಪಿತೃಗಳ ಕಣ್ಣು ನೆತ್ತಿಯ ಮೇಲೆ ಬರುತ್ತದೆ. ಚಿನ್ನದ ಮೇಲೆ ಸಾಲ ಮಾಡಿ ದುಡ್ಡು ಸುರಿದರೂ ಚಿಂತೆಯಿಲ್ಲ ಮದುವೆ ಸುಸೂತ್ರವಾಗಿ, ನಿರ್ವಿಘ್ನವಾಗಿ ನಡೆದರೆ ಸಾಕು ಎಂದು ವಧುವಿನ ತಂದೆತಾಯಿತರು ಆಶಿಸಿರುತ್ತಾರೆ. ಅಂಥದರಲ್ಲಿ ಮದುವೆ ಆಮಂತ್ರಣ ಪತ್ರಿಕೆಯನ್ನೇ ಚಿನ್ನದ ಎಳೆಗಳಿಂದ ಅಲಂಕರಿಸುವುದನ್ನು ತಂದೆತಾಯಂದಿರು ಕನಸುಮನಸಿನಲ್ಲಿಯೂ ಎಣಿಸಿರುವುದಿಲ್ಲ.
ಆದರೆ, ಬಳ್ಳಾರಿಯ ಮಾಜಿ ಸಚಿವ, ಜೆಡಿಎಸ್ ನಾಯಕ, ಖ್ಯಾತ ಗ್ರಾನೈಟ್ ಉದ್ಯಮಿ ನರ ಸೂರ್ಯನಾರಾಯಣ ರೆಡ್ಡಿ ದಂಪತಿಗಳು ಇಂಥದೊಂದು ಕನಸನ್ನು ಸಾಕಾರಗೊಳಿಸಿದ್ದಾರೆ. ತಮ್ಮ ಹಿರಿಯ ಮಗ ಶರತ್ ರೆಡ್ಡಿಯ ಮದುವೆಗೆ, ಚಿನ್ನದಿಂದ ಅದ್ಭುತವಾಗಿ ರೂಪಿಸಲಾಗಿರುವ ಕರೆಯೋಲೆಗೆ 15 ಸಾವಿರ ರು. ವೆಚ್ಚ ಮಾಡಿ ದಾಖಲೆ ನಿರ್ಮಿಸಿದ್ದಾರೆ. ಹಿಂದೆ ಮಂಗಳೂರು ಮೂಲದ ಬೆಡಗಿ ಶಿಲ್ಪಾ ಶೆಟ್ಟಿ ಅವರ ಮದುವೆಯ ಆಮಂತ್ರಣ ಪತ್ರಕ್ಕೆ 12 ಸಾವಿರ ರು. ಖರ್ಚು ಮಾಡಿದ್ದು ದಾಖಲೆಯಾಗಿತ್ತು.
ಸುವರ್ಣ ಮತ್ತು ಸೂರ್ಯನಾರಾಯಣ ರೆಡ್ಡಿ ಅವರ ಮಗ ಶರತ್ ರೆಡ್ಡಿ ಅವರ ರಾಯಲ್ ವೆಡ್ಡಿಂಗ್ ಅನ್ನು ರಾಧಿಕಾ ಮತ್ತು ಶಾಮ್ ಪ್ರಸಾದ್ ರೆಡ್ಡಿ ಅವರ ಮಗಳಾದ ಅತ್ಮಿಕಾ ಎಂಬ ಕನ್ಯೆಯೊಂದಿಗೆ ಚೆನ್ನೈನ ಎಂಆರ್‌ಸಿ ನಗರದಲ್ಲಿರುವ ಲೀಲಾ ಪ್ಯಾಲೇಸಿನಲ್ಲಿ ಮೇ 29ರಂದು ವೈಭವೋಪೇತವಾಗಿ ಮಾಡಿಕೊಡಲಾಗುತ್ತಿದೆ. ಆಮಂತ್ರಣ ಪತ್ರವೇ ಹೀಗಿರಬೇಕಾದರೆ ಇನ್ನು ಮದುವೆ, ಮದುಮಕ್ಕಳಿಗೆ, ಬಂಧುಗಳಿಗೆ ಕೊಡುತ್ತಿರುವ ಉಡುಗೊರೆಗಳು ಹೇಗಿರಬಹುದೆಂದು ಬಳ್ಳಾರಿ ವಾಸಿಗಳು ಕಾತುರದಿಂದ ನೋಡುತ್ತಿದ್ದಾರೆ.
ಮುಂಬೈನ ರಾವೀಶ್ ಕಪೂರ್ ರೂಪಿಸಿರುವ ಈ ಐಷಾರಾಮಿ ಕರೆಯೋಲೆಯ ವಿಶೇಷತೆ ಏನು? ಮುಂದೆ ತಿಳಿದುಕೊಳ್ಳಿ.

ಆಮಂತ್ರಣ ಪತ್ರವೇ ಹೀಗೆ, ಇನ್ನು ಮದುವೆ ಹ್ಯಾಗೆ?
14 ಪುಟಗಳ ಲಗ್ನಪತ್ರಿಕೆಯನ್ನು ನೆಕ್ಲೇಸ್ ಬಾಕ್ಸಿನಂತಿರುವ ಬಾಕ್ಸಿನಲ್ಲಿ ಅಚ್ಚುಕಟ್ಟಾಗಿಡಲಾಗಿದೆ. ಕಂದು ಬಣ್ಣದ ಕವರ್ ಮೇಲೆ ಮದುವೆಯ ಮಮತೆಯ ಕರೆಯೋಲೆ ಎಂಬ ಆಂಗ್ಲ ಅಕ್ಷರಗಳನ್ನು ಬಂಗಾರದ ಬಣ್ಣದಲ್ಲಿ ಮುದ್ದಾಗಿ ಬರೆಯಲಾಗಿದೆ. ಲಗ್ನಪತ್ರಿಕೆ ತೆರೆಯುವುದಕ್ಕೂ ಮೊದಲು ವಧು ಅತ್ಮಿಕಾ ಮತ್ತು ವರ ಶರತ್ ಹೆಸರನ್ನು ಬರೆಯಲಾಗಿದೆ.

ಆಮಂತ್ರಣ ಪತ್ರವೇ ಹೀಗೆ, ಇನ್ನು ಮದುವೆ ಹ್ಯಾಗೆ?
ಮೊದಲ ಪುಟ ತೆರೆಯುತ್ತಲೇ ಮೊದಲ ಇಡೀ ಪುಟದಲ್ಲಿ ಮೊದಲ ಪೂಜೆಗೆ ಅರ್ಹನಾದ ಸುಂದರವಾದ ಗಣೇಶನ ಚಿತ್ರವನ್ನು ಚಿನ್ನದ ಕುಸುರಿಯಿಂದ ಸುಂದರವಾಗಿ ಅಲಂಕರಿಸಲಾಗಿದೆ. ಕವರಿನ ಎರಡೂ ಬದಿಯಲ್ಲಿ ಬಾಕ್ಸ್ ಗಳಲ್ಲಿ ಡ್ರೈಫ್ರೂಟ್ಸ್ ಮತ್ತು ಚಾಕೋಲೇಟ್ ಇಡಲಾಗಿದೆ. ಇದರ ನಡುವೆ ಆಮಂತ್ರಣ ಪತ್ರವನ್ನು ಹುದುಗಿಸಿ ಇಡಲಾಗಿದೆ.

ಆಮಂತ್ರಣ ಪತ್ರವೇ ಹೀಗೆ, ಇನ್ನು ಮದುವೆ ಹ್ಯಾಗೆ?
ಮುಂದಿನ ಪುಟಗಳಲ್ಲಿ ರೆಡ್ಡಿ ಜನಾಂಗದ ಸಂಪ್ರದಾಯದಂತೆ ಮದುವೆ ಮೂಹೂರ್ತಕ್ಕೂ ಮುಂಚೆ ಆಚರಿಸುವ ನಲುಗು ಕಾರ್ಯಕ್ರಮ, ಮದುವೆ ಮುಹೂರ್ತ, ಆರತಕ್ಷತೆ, ವಧುವರರಿಗೆ ಬೆಸ್ಟ್ ಕಾಂಪ್ಲಿಮೆಂಟ್ಸ್, ವಿವಿಐಪಿ ಪಾಸ್‌ಗಳು ಹೀಗೆ ಮದುವೆಯ ಮೂರು ದಿನದ ಇಡೀ ಕಾರ್ಯಕ್ರಮಗಳ ವಿವರಗಳನ್ನು ಗೋಲ್ಡ್ ಕೋಟೇಡ್ ಲೆಟರ್‌ಗಳಲ್ಲಿ ಅದ್ಬುತವಾಗಿ ವಿನ್ಯಾಸ ಮಾಡಲಾಗಿದೆ. ಅಲ್ಲದೆ ಪ್ರತಿ ಪುಟದಲ್ಲು ಒಂದೊಂದು ವಿಶೇಷ ಚಿತ್ರವನ್ನು ಮುದ್ರಿಸಲಾಗಿದ್ದು, ಗಣೇಶ, ಕೈಮೇಲೆ ಕೈಯಿಟ್ಟಿರುವ ವಧುವರರು, ರತ್ನ ಖಚಿತ ಕಿರೀಟ, ಹೂಗುಚ್ಛದ ಚಿತ್ರಗಳು ಮನಸೆಳೆಯುತ್ತವೆ.

ಆಮಂತ್ರಣ ಪತ್ರವೇ ಹೀಗೆ, ಇನ್ನು ಮದುವೆ ಹ್ಯಾಗೆ?
ಲಗ್ನಪತ್ರಿಕೆಯ ಹೊರ ವಿನ್ಯಾಸದ ಬಗ್ಗೆ ಹೇಳುವುದಾದರೆ ಕಂದು ಬಣ್ಣದ ಪತ್ರಿಕೆ ಮೇಲೆ ಬಂಗಾರದ ವರ್ಣದಲ್ಲಿ ಕ್ಯಾಲಿಯೋಗ್ರಫಿ ಆರ್ಟ್ ಮಾಡಲಾಗಿದೆ. ಪತ್ರಿಕೆಯ ಅಂಚುಗಳಿಗೂ ಬಂಗಾರದ ವರ್ಣದ ಸೂಕ್ಷ್ಮ ಕುಸುರಿ ತರಹದ ಡಿಜೈನ್‌ಗಳನ್ನ ಮಾಡಲಾಗಿದೆ.

ಆಮಂತ್ರಣ ಪತ್ರವೇ ಹೀಗೆ, ಇನ್ನು ಮದುವೆ ಹ್ಯಾಗೆ?
ಇಲ್ಲಿ ಒಬ್ಬರಿಗೆ ಮಾಡಿಕೊಟ್ಟ ಡಿಜೈನ್‌ನನ್ನು ಮತ್ತೊಮ್ಮೆ ನಿರ್ಮಾಣ ಮಾಡುವುದಿಲ್ಲ ಹಾಗೂ ಬೇರೆಯಾರಿಗೂ ಅಂತಹ ಡಿಜೈನ್ ನೀಡುವುದಿಲ್ಲ. ಈ ಷರತ್ತಿನ ಮೇಲೆ ಇಲ್ಲಿ ಕಾರ್ಡ್‌ಗಳನ್ನು ಮಾಡಿಸಲಾಗುತ್ತದೆ. ಎರಡು ವರ್ಷಗಳ ಹಿಂದೆ ಇದೇ ಸಂಸ್ಥೆ ಬಾಲಿವುಡ್‌ನ ಖ್ಯಾತ ಅಭಿನೇತ್ರಿ ಶಿಲ್ಪಾಶೆಟ್ಟಿ ವಿವಾಹಕ್ಕಾಗಿ 12 ಸಾವಿರ ವೆಚ್ಚದಲ್ಲಿ ಲಗ್ನಪತ್ರಿಕೆ ತಯಾರು ಮಾಡುವ ಮೂಲಕ ಹೆಸರು ಮಾಡಿತ್ತು.

ಆಮಂತ್ರಣ ಪತ್ರವೇ ಹೀಗೆ, ಇನ್ನು ಮದುವೆ ಹ್ಯಾಗೆ?
ಲಗ್ನಪತ್ರಿಕೆ ಡಿಜೈನ್‌ಗಾಗಿ ಕಳೆದ ನಾಲ್ಕು ತಿಂಗಳುಗಳಿಂದಲೂ ಸತತವಾಗಿ ತಲೆ ಕೆಡಿಸಿಕೊಂಡ ಸೂರ್ಯನಾರಾಯಣರೆಡ್ಡಿ ಅನಂತರದಲ್ಲಿ ರಾವೀಶ್ ಕಪೂರ್ ಸಂಸ್ಥೆಯ ಈಗ ಅಚ್ಚು ಹಾಕಿಸಲಾಗಿರುವ ಮಾದರಿಯನ್ನು ಒಪ್ಪಿಕೊಂಡಿದ್ದರು. ತಾವು ಮಾಡಿದ್ದನ್ನು ಯಾರು ಅನುಕರಿಸಬಾರದು ಎಂಬ ಕಾರಣಕ್ಕೆ ರೆಡ್ಡಿ ಅವರು ಮುಂದೆ ಯಾರಿಗೂ ಇದೇ ರೀತಿಯ ಲಗ್ನಪತ್ರಿಕೆ ಮಾಡಿಕೊಡದಂತೆ ಸಂಸ್ಥೆ ಜೊತೆ ಕರಾರು ಮಾಡಿಕೊಂಡಿದ್ದಾರೆ. ಇಂಥ ಸಾವಿರ ಪ್ರತಿಗಳನ್ನು ಸೂರ್ಯನಾರಾಯಣ ರೆಡ್ಡಿ ಮುದ್ರಿಸಿದ್ದಾರೆ. ವಿಐಪಿ, ವಿವಿಐಪಿಗಳಿಗೆ ಮಾತ್ರ ಮದುವೆಯ ಮಮತೆಯ ಕರೆಯೋಲೆ ಮೀಸಲು.












Click it and Unblock the Notifications