ಬೆಟ್ಟಿಂಗ್ ಭೂತಕ್ಕೆ ಉದ್ಯಮಿ ಮಗ ಬಲಿ

Mumbai diamond trader's son killed by cousin over IPL betting losses,
ಮುಂಬೈ, ಮೇ.15: ಐಪಿಎಲ್ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಳ್ಳುವ ಭೀತಿಯಿಂದ ತನ್ನ ಸಂಬಂಧಿಕರ ಮಗನನ್ನು ಅಪಹರಿಸಿ ಒತ್ತೆಹಣಕ್ಕೆ ಆಗ್ರಹಿಸಿ, ಅಪಹೃತ ಬಾಲಕನನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ. ಮುಂಬೈನ ವಜ್ರದ ವ್ಯಾಪಾರಿಯೊಬ್ಬರಮಗ ಆದಿತ್ಯ ರಂಕಾ(13) ಕೊಲೆಯಾಗಿರುವ ಬಾಲಕ. ಅಪಹರಣ ಕೊಲೆ ಸಂಚು ನಡೆಸಿದವರು ಎಂಬಿಎ ಪದವೀಧರರು ಹಾಗೂ ಓರ್ವ ಆರೋಪಿ ಬಾಲಕನ ಕಸಿನ್.

ಈ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿದಂತೆ 28ರ ಹರೆಯದ ವ್ಯಕ್ತಿ ಹಾಗು ಆತನ ಸ್ನೇಹಿತನನ್ನು ಬಂಧಿಸಲಾಗಿದೆ. ಅಪಹರಣ ಹಾಗೂ ಕೊಲೆಗೆ ಐಪಿಎಲ್ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡಿದ್ದೆ ಕಾರಣ ಎಂದು ಮುಂಬೈ ಪೊಲೀಸರು ಬುಧವಾರ(ಮೇ.15) ಹೇಳಿದ್ದಾರೆ.

ಪ್ರಕರಣದ ಬಗ್ಗೆ ವಿವರಣೆ ನೀಡಲು ಸುದ್ದಿಗೋಷ್ಠಿ ನಡೆಸಿದ ಮುಂಬೈ ಪೋಲಿಸ್ ಹೆಚ್ಚುವರಿ ಆಯುಕ್ತ ಕೃಷ್ಣ ಪ್ರಕಾಶ್, ದುಷ್ಕರ್ಮಿಗಳು 13ರ ಹರೆಯದ ಬಾಲಕನ ತಲೆಗೆ ಹೊಡೆದು ಸಾಯಿಸಿದ್ದಾರೆ. ಆತನನ್ನು ಕರೆದೊಯ್ದ ಕಾರನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಬಂಧಿತ ಆರೋಪಿಗಳು ಐಪಿಎಲ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಐಪಿಎಲ್ ಬೆಟ್ಟಿಂಗ್ ನಲ್ಲಿ ಸೋತು 10 ಲಕ್ಷ ರು. ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಇವರು ಆದಿತ್ಯ ನನ್ನು ಅಪಹರಿಸಿ, ಹೆಚ್ಚಿನ ಹಣಕ್ಕಾಗಿ ಆದಿತ್ಯನ ಅಪ್ಪನಿಗೆ ಕರೆ ಮಾಡಿದ್ದಾರೆ. ಆದಿತ್ಯನ ಸಂಬಂಧಿ ಹಿಮಾಂಶು ಎಂಬಾತ ಆದಿತ್ಯನಿಗೆ ಸೋಮವಾರ ಮಧ್ಯಾಹ್ನ ಕರೆ ಮಾಡಿದ್ದು, ತನ್ನ ಗೆಳೆಯ ವಿಜಯ್ ಸಾಂಗ್ವಿಯ ಹೋಂಡಾ ಸಿಟಿ ಕಾರಿನಲ್ಲಿ ಸುತ್ತಾಡಿ ಬರೋಣ ಎಂದು ಹೇಳಿದ್ದಾನೆ

ಸಾಂಗ್ವಿ ಆದಿತ್ಯನನ್ನು ಕರೆದುಕೊಂಡು ಹೋಗಿದ್ದರೆ, ಹಿಮಾಂಶು ಆದಿತ್ಯನ ಅಪ್ಪ ಜಿತೇಂದ್ರ ಅವರ ಮೇಲೆ ನಿಗಾ ಇರಿಸಿದ್ದಾನೆ. ಆದಿತ್ಯನನ್ನು ಅಪಹರಿಸಿದವರು ಜಿತೇಂದ್ರ ಅವರಿಗೆ ಕರೆ ಮಾಡಿ 30 ಲಕ್ಷ ರು. ಕೇಳಿದಾಗ ಜಿತೇಂದ್ರ ಅವರು ಹಿಮಾಂಶು ಜತೆ ವಿಪಿ ರೋಡ್ ಪೊಲೀಸ್ ಠಾಣೆಗೆ ತೆರಳಿ ಕೇಸು ದಾಖಲಿಸಿದ್ದಾರೆ. ಆದಿತ್ಯನ ಅಪಹರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹಿಮಾಂಶು ಸಾಂಗ್ವಿಗೆ ಫೋನ್ ಮೂಲಕ ತಿಳಿಸಿದ್ದಾನೆ.

ಪೊಲೀಸರು ಇನ್ನೇನು ಪತ್ತೆ ಹಚ್ಚಿ ಬಿಡುತ್ತಾರೆ ಎಂಬ ಭಯದಿಂದ ಈ ಯುವಕರು ಆದಿತ್ಯನ ಕೈ ನರವನ್ನು ಮೊದಲಿಗೆ ತುಂಡರಿಸಿದ್ದಾರೆ. ನಂತರ ಬದುಕಿಬಿಟ್ಟರೆ ಕಷ್ಟ ಎಂದು ತಿಳಿದು ತಲೆಗೆ ಬಲವಾದ ಪೆಟ್ಟು ಕೊಟ್ಟು ಸಾಯಿಸಿದ್ದಾರೆ. ಆಮೇಲೆ ಪನ್ ವೇಲ್ ನ ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿದ್ದಾರೆ.

ರಾಜಸ್ತಾನದಲ್ಲಿ ವಾಸವಾಗಿರುವ ಹಿಮಾಂಶು ಈ ಅಪಹರಣ ಹಾಗೂ ಕೊಲೆಯ ಸೂತ್ರಧಾರನಾಗಿದ್ದು, ಬೆಟ್ಟಿಂಗ್ ನಲ್ಲಿ 10 ಲಕ್ಷ ರು ನಷ್ಟವಾದುದಕ್ಕೆ ಯಾರನ್ನಾದರೂ ಅಪಹರಿಸಿ, ಅವರಿಂದ ಹಣ ಕೀಳಬಹುದು ಎಂದು ಗೆಳೆಯರಲ್ಲಿ ಹೇಳಿಕೊಂಡಿದ್ದ. ತಮ್ಮ ಸಂಬಂಧಿಕರ ಮಗನನ್ನು ಅಪಹರಿಸಿ 30 ಲಕ್ಷ ರು. ಬೇಡಿಕೆ ಇಡಲು ಮುಂದಾದರು ಎಂದು ಪ್ರಕಾಶ್ ಹೇಳಿದ್ದಾರೆ.

ಆದಿತ್ಯನ ಚಪ್ಪಲಿ ಹಿಮಾಂಶುನ ಕಾರಿನಲ್ಲಿ ಪತ್ತೆಯಾದ ಕಾರಣ ಆದಿತ್ಯನ ಅಪ್ಪನಿಗೆ ತನ್ನ ಮಗನ ಅಪಹರಣದಲ್ಲಿ ಹಿಮಾಂಶು ಕೈವಾಡವಿದೆ ಎಂದು ಗೊತ್ತಾಗಿದೆ.
ಇದೀಗ ಬಂಧಿತ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಅಪಹರಣ ಹಾಗೂ ಕೊಲೆಗೆ ನಡೆಸಿದ ಸಂಚು ಹಾಗೂ ಅದನ್ನು ಕಾರ್ಯಗತ ಮಾಡಿದ್ದರ ಬಗ್ಗೆ ವಿವರಿಸಿದ್ದಾರೆ. ಬಂಧಿತ ಆರೋಪಿಗಳು ಎಂಬಿಎ ವಿದ್ಯಾರ್ಥಿಗಳಾಗಿದ್ದು, ತ್ವರಿತವಾಗಿ ಹಣ ಗಳಿಸುವ ಚಟಕ್ಕೆ ಬಿದ್ದು ದುಷ್ಕೃತ್ಯ ಎಸಗಿದ್ದಾರೆ ಎಂದು ಪ್ರಕಾಶ್ ವಿವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+