ಚಿತ್ರ ಸುದ್ದಿ: ಪಾಕಿಸ್ತಾನ, ಕ್ರಿಕೆಟ್, ಫುಟ್ಬಾಲ್ ಸಂಭ್ರಮ
ಮುಂಬೈ, ಮೇ.13: ಅಕ್ಷಯ ತದಿಗೆ ಅಂಗವಾಗಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಸೋಮವಾರ ಚಿನ್ನದ ನಾಣ್ಯಗಳನ್ನು ಬಿಡುಗಡೆಗೊಳಿಸಿದರು. ಸಚಿನ್ ಅವರ ಚಿತ್ರದ ಅಚ್ಚು ಹೊಂದಿರುವ ಈ ನಾಣ್ಯಗಳು ಸೀಮಿತ ಸಂಖ್ಯೆಯಲ್ಲಿ ಮಾತ್ರ ಲಭ್ಯವಿದೆ
ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಯಲ್ಲಿ ಪಾಕಿಸ್ತಾನ್ ಮುಸ್ಲಿಂ ಲೀಗ್ (ಪಿಎಂಎಲ್-ಎನ್) ಪಕ್ಷವು ಭರ್ಜರಿ ಜಯ ದಾಖಲಿಸಿದೆ. ಪಿಎಂಎಲ್ ನಾಯಕ ನವಾಜ್ ಶರೀಫ್ ಅವರು ಮೂರನೇ ಬಾರಿಗೆ ಪಾಕಿಸ್ತಾನದ ಪ್ರಧಾನಿ ಹುದ್ದೆಗೇರಲು ಸಿದ್ಧತೆ ನಡೆಸುತ್ತಿದ್ದಾರೆ.
ಪಾಕ್ ಸೇನೆಯಿಂದ ಬಂಧಿತರಾಗಿ, ಪ್ರಧಾನಿ ಪಟ್ಟ ಕಳೆದುಕೊಂಡು ಗಡಿಪಾರಾಗಿದ್ದ ಷರೀಫ್ ಅವರು ದೇಶದಲ್ಲಿ ಮತ್ತೆ ತಮ್ಮ ಹವಾ ಸೃಷ್ಟಿಸಿದ್ದಾರೆ. ಪಾಕಿಸ್ತಾನದಲ್ಲಿ ಬದಲಾವಣೆಯ ಗಾಳಿ ಬೀಸಿದ್ದು ನವಾಜ್ ಶರೀಫ್ ಅವರ ಅಭಿಮಾನಿಗಳ ಸಂಭ್ರಮಾಚರಣೆ ಚಿತ್ರ ಇಲ್ಲಿದೆ.
ಉಳಿದಂತೆ, ಕ್ರೀಡಾ ಚಿತ್ರಗಳಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಹುಲ್ ದ್ರಾವಿಡ್ ನೇತೃತ್ವದ ರಾಜಸ್ಥಾನ್ ರಾಯಲ್ಸ್ ತಂಡ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ಸೋಲಿಸಿ ಪ್ಲೇ ಆಫ್ ಸ್ಥಾನ ದೃಢಪಡಿಸಿಕೊಂಡಿದೆ.
ಇಂಗ್ಲೀಷ್ ಪ್ರಿಮಿಯರ್ ಲೀಗ್ ನಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮದಲ್ಲಿದೆ. ಮ್ಯಾಡ್ರಿಡ್ ನಲ್ಲಿ ಕಪ್ ಎತ್ತಿದ ಆವೆ ಮಣ್ಣಿನ ರಾಜ ರಾಫೆಲ್ ನಡಾಲ್ ಸಂಭ್ರಮ ನೋಡಬಹುದು. ಉಳಿದಂತೆ ಬಿಜೆಪಿಯಿಂದ ಪ್ರತಿಭಟನೆ, ಭೂ ಕುಸಿತ, ಕಾಶ್ಮೀರದ ಸುಂದರ ದೃಶ್ತ್ಯ ಇನ್ನಷ್ಟು ಚಿತ್ರಗಳು ಇಂದಿನ ಚಿತ್ರಾವಳಿಯಲ್ಲಿದೆ.

ಚಿತ್ರಗಳು ಇತ್ತೀಚಿನ ಸುದ್ದಿಗಳು
ಕರಾಚಿ: ಪಾಕಿಸ್ತಾನದ ಸಂಭಾವ್ಯ ಪ್ರಧಾನಮಂತ್ರಿ ನವಾಜ್ ಶರೀಫ್ ಅಭಿಮಾನಿಗಳು ಬೀದಿಗಿಳಿದು ಸಂಭ್ರಮದಿಂದ ನರ್ತಿಸಿದ್ದು ಹೀಗೆ

ಚಿತ್ರಗಳು ಇತ್ತೀಚಿನ ಸುದ್ದಿಗಳು
ಮ್ಯಾಡ್ರಿಡ್: ಮ್ಯಾಡ್ರಿಡ್ ಓಪನ್ ಗೆದ್ದ ಅಮೆರಿಕದ ಸೆರೆನಾ ವಿಲಯಮ್ಸ್ ಹಾಗೂ ರನ್ನರ್ ಅಪ್ ರಷ್ಯಾದ ಮರಿಯಾ ಶರಪೋವಾ ಟ್ರೋಫಿಯೊಂದಿಗೆ

ಚಿತ್ರಗಳು ಇತ್ತೀಚಿನ ಸುದ್ದಿಗಳು
ಲಕ್ನೋ: ಪರುಶುರಾಮ್ ಜಯಂತಿ ಸಮಾರೋಪದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್

ಚಿತ್ರಗಳು ಇತ್ತೀಚಿನ ಸುದ್ದಿಗಳು
ಇಂಗ್ಲೀಷ್ ಪ್ರಿಮಿಯರ್ ಲೀಗ್ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ತಂಡ

ಚಿತ್ರಗಳು ಇತ್ತೀಚಿನ ಸುದ್ದಿಗಳು
ಪಾಟ್ನ: ಸಂಜಯ್ ಗಾಂಧಿ ಮೃಗಾಲಯದಲ್ಲಿ ಖಡ್ಗಮೃಗವೊಂದು ಈಗಷ್ಟೆ ಹೆತ್ತ ಮಗುವಿನೊಂದಿಗೆ

ಚಿತ್ರಗಳು ಇತ್ತೀಚಿನ ಸುದ್ದಿಗಳು
ಮ್ಯಾಡ್ರಿಡ್: ಮ್ಯಾಡ್ರಿಡ್ ಓಪನ್ ಗೆದ್ದ ಸಂಭ್ರಮದಲ್ಲಿ ಸ್ಪೇನ್ ಆಟಗಾರ ರಫೆಲ್ ನಡಾಲ್

ಚಿತ್ರಗಳು ಇತ್ತೀಚಿನ ಸುದ್ದಿಗಳು
ಶ್ರೀನಗರ: ದಾಲ್ ಸರೋವರದಲ್ಲಿ ಮಳೆ ನಡುವೆಯೂ ಯಾತ್ರಿಗಳ ವಿಹಾರ

ಚಿತ್ರಗಳು ಇತ್ತೀಚಿನ ಸುದ್ದಿಗಳು
ನವದೆಹಲಿ: ಪ್ರಧಾನಿ ಮನ ಮೋಹನ್ ಸಿಂಗ್ ರಾಜೀನಾಮೆಗೆ ಆಗ್ರಹಿಸಿ ಭಾರತೀಯ ಜನತಾ ಯುವ ಮೋರ್ಚ ಸದಸ್ಯರು ಪ್ರಧಾನಿ ನಿವಾಸದ ಎದುರು ಪ್ರತಿಭಟನೆ ನಡೆಸಿದರು.

ಚಿತ್ರಗಳು ಇತ್ತೀಚಿನ ಸುದ್ದಿಗಳು
ಮದರ್ಸ್ ಡೇ ದಿನದಂದು ಸಿಲಗುರಿಯಲ್ಲಿ ಕೆಲಸಕ್ಕೆ ಹೊರಟ ತಾಯಿ ಜೊತೆ ಮಗು

ಚಿತ್ರಗಳು ಇತ್ತೀಚಿನ ಸುದ್ದಿಗಳು
ಐಜ್ವಾಲ್: ಮಿಜೋರಾಂನಲ್ಲಿ ಭೂ ಕುಸಿತದಿಂದಾಗಿ 8 ಜನ ಸಾವನ್ನಪ್ಪಿದ್ದು 11 ಜನರಿಗೆ ಗಾಯಗಳಾಗಿದೆ.

ಚಿತ್ರಗಳು ಇತ್ತೀಚಿನ ಸುದ್ದಿಗಳು
ಚೆನ್ನೈ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ರಾಜಸ್ಥಾನ ತಂಡದ ಶೇನ್ ವ್ಯಾಟ್ಸನ್

ಚಿತ್ರಗಳು ಇತ್ತೀಚಿನ ಸುದ್ದಿಗಳು
ರಾಜಸ್ಥಾನ ರಾಯಲ್ಸ್ ತಂಡದ ಒಡತಿ ಶಿಲ್ಪಾ ಶೆಟ್ಟಿ ಜೊತೆ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಎಂಎಸ್ ಧೋನಿ ಪತ್ನಿ ಸಾಕ್ಷಿ ಪಿಸು ಮಾತು

ಚಿತ್ರಗಳು ಇತ್ತೀಚಿನ ಸುದ್ದಿಗಳು
ಮುಂಬೈ: ಅಕ್ಷಯ ತದಿಗೆ ಅಂಗವಾಗಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಚಿನ್ನದ ನಾಣ್ಯಗಳನ್ನು ಬಿಡುಗಡೆಗೊಳಿಸಿದರು. PTI Photo by Shirish Shete












Click it and Unblock the Notifications