ಖರ್ಗೆಗೆ ಸಿಗಲಿಲ್ಲ ರೈಲ್ವೆ ಖಾತೆ; ಸಿದ್ದುಗೆ ಕಷ್ಟಕಷ್ಟ

no-railway-for-mallikarjun-kharge-joshi-gets-rail
ನವದೆಹಲಿ, ಮೇ 11- ಕರ್ನಾಟಕದ ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿರಾಶೆ/ಆತಂಕದ ಸುದ್ದಿಯೊಂದು ಕೇಂದ್ರ ಸರಕಾರ ನೀಡಿದೆ. ಏನಪ್ಪಾ ಅಂದರೆ

ಸಿದ್ದುಗೆ ಕರ್ನಾಟಕ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟ ಪಕ್ಷದ ಹಿರಿಯ ನಾಯಕ, ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರೈಲ್ವೆ ಸಚಿವ ಸ್ಥಾನ ನೀಡಲಾಗುವುದು ಎಂಬ ಮಾತುಗಳು ಬಲವಾಗಿ ಕೇಳಿಬಂದಿದ್ದವು. ಆದರೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಂತಹ ಯಾವುದೇ ಸಾಧ್ಯೆತಗಳಿಗೆ ಅವಕಾಶ ಕಲ್ಪಿಸದೆ ಸಾರಿಗೆ ಸಚಿವ ಸಿಪಿ ಜೋಷಿ ಅವರಿಗೆ ಹೆಚ್ಚುವರಿ ಖಾತೆಯಾಗಿ ರೈಲ್ವೆ ಖಾತೆಯನ್ನು ವಹಿಸಿದ್ದಾರೆ.

ಅದೇ ರೀತಿ ಟೆಲಿಕಾಂ ಸಚಿವ ಕಪಿಲ್ ಸಿಬಲ್ ಅವರಿಗೆ ಕಾನೂನು ಸಚಿವಾಲಯದ ಹೆಚ್ಚುವರಿ ಹೊಣೆಯನ್ನು ವರ್ಗಾಯಿಸಿದ್ದಾರೆ. ಈ ಸಂಬಂಧ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ. ಕಲ್ಲಿದ್ದಲು ಹಗರಣ ಮತ್ತು ರೈಲ್ವೆ ಹಗರಣದ ಬೆನ್ನಲ್ಲಿ ಬಲ್ಸಾಲ್ ಮತ್ತು ಅಶ್ವನಿ ಕುಮಾರ್ ಅವರು ರಾಜೀನಾಮೆ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಆದರೆ ಈ ಬದಲಾವಣೆಗಳ ಹೊರತಾಗಿಯೂ ಪ್ರಧಾನಿ ಸಿಂಗ್ ಮುಂದಿನ ವಾರ ತಮ್ಮ ಸಂಪುಟವನ್ನು ವಿಸ್ತರಿಸುವ ಸಾಧ್ಯತೆ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+