ಹೊಸ ಸರ್ಕಾರ ಬರುವ ಮೊದಲೇ ಕರೆಂಟ್ ಶಾಕ್

ವಿದ್ಯುತ್ ದರ ಏರಿಕೆ ಬಗ್ಗೆ ಮಾರ್ಚ್ ತಿಂಗಳಲ್ಲೇ ಪ್ರಸ್ತಾವನೆ ಇತ್ತು. ಆದರೆ, ವಿಧಾನಸಭೆ ಚುನಾವಣೆಯ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಈ ಪ್ರಸ್ತಾವನೆ ಮುಂದಾಡಲಾಗಿತ್ತು ಎಂದು ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ಮೇ 1ರಿಂದಲೇ ಜಾರಿಗೆ ಬರುವಂತೆ ದರ ಹೆಚ್ಚಿಸಲಾಗಿದೆ. ಏಪ್ರಿಲ್ ತಿಂಗಳ ಬಿಲ್ ಮೇ 10ರೊಳಗೆ ಕೈಗೆ ಬರುವುದರಿಂದ ಗ್ರಾಹಕರು ಈ ಬಾರಿಯ ಬಿಲ್ ಗಳಿಗೆ ನೂತನ ದರ ಪಾವತಿಸಬೇಕಾಗಿದೆ.
ಗೃಹ ಬಳಕೆ ಮಾತ್ರವಲ್ಲದೇ, ನೀರು ಸರಬರಾಜು ಸಂಬಂಧಿತ ಗ್ರಾಮೀಣ ವಿದ್ಯುತ್ ಸ್ಥಾವರ, ಎಲ್‌ಟಿ ಪ್ರವರ್ಗಕ್ಕೆ ಸೇರಿದ ಖಾಸಗಿ ವಿದ್ಯಾಸಂಸ್ಥೆ ಹೊರತುಪಡಿಸಿ ಇನ್ನುಳಿದ ಎಲ್ಲಾ ವರ್ಗದ ವಿದ್ಯುತ್ ಬಳಕೆದಾರರಿಗೂ ದರ ಏರಿಕೆಯ ಬಿಸಿ ತಟ್ಟಲಿದೆ.
ಎಷ್ಟು ಹೆಚ್ಚು : ಗೃಹಬಳಕೆ ಗ್ರಾಹಕರಿಗೆ ಮೊದಲ 100 ಯೂನಿಟ್‌ವರೆಗೆ ಪ್ರತಿ ಯೂನಿಟ್‌ಗೆ 20 ಪೈಸೆ ಹಾಗೂ ಅದಕ್ಕಿಂತ ಹೆಚ್ಚು ವಿದ್ಯುತ್ ಬಳಸಿದರೆ ಪ್ರತಿ ಯೂನಿಟ್‌ಗೆ 25 ಪೈಸೆಯಷ್ಟು ದರ ಹೆಚ್ಚಳ ಮಾಡಲಾಗಿದೆ.
ಅದೇ ರೀತಿ ಹೈಟೆನ್ಷನ್ (ಎಚ್‌ಟಿ) ಪ್ರವರ್ಗಕ್ಕೆ ಬರುವ ವಸತಿ ಸಂಕೀರ್ಣಗಳಿಗೆ (ರೆಸಿಡೆನ್ಷಿಯಲ್ ಅಪಾರ್ಟ್‌ಮೆಂಟ್ಸ್) ಸೇರಿದ ಬಳಕೆದಾರರಿಗೆ ಪ್ರತಿ ಯೂನಿಟ್‌ಗೆ ದರವನ್ನು 4.70 ರಿಂದ 4.90ಕ್ಕೆ (20 ಪೈಸೆ) ಹೆಚ್ಚಿಸಲಾಗಿದೆ.
ಭಾಗ್ಯಜ್ಯೋತಿ, ಕುಟೀರ ಜ್ಯೋತಿ ಯೋಜನೆ ಹಾಗೂ 10 ಅಶ್ವಶಕ್ತಿಗಿಂತ ಕಡಿಮೆ ಸಾಮರ್ಥ್ಯದ ಕೃಷಿ ಪಂಪ್‌ಸೆಟ್‌ಗಳಿಗೆ ಬಳಸುವ ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ 25 ಪೈಸೆ ಹೆಚ್ಚಿಸಲಾಗಿದೆ. ಕೈಗಾರಿಕೆಗಳು ಮತ್ತು ವಾಣಿಜ್ಯ ಉದ್ದೇಶಗಳಿಗೆ ಪ್ರತಿ ಯೂನಿಟ್‌ಗೆ 25 ಪೈಸೆ ದರ ಹೆಚ್ಚಳ ಮಾಡಲಾಗಿದೆ.
ಬೆಂಗಳೂರು ನಗರ : ನಗರ ಪ್ರದೇಶದ ಲೋ ಟೆನ್ಷನ್ (ಎಲ್‌ಟಿ) ಕೈಗಾರಿಕಾ ವಿದ್ಯುತ್ ಬಳಕೆದಾರರು ಮೊದಲ 500 ಯೂನಿಟ್ ಬಳಕೆಗೆ ಪ್ರತಿ ಯೂನಿಟ್‌ಗೆ 4.45 ರೂ, 500ಕ್ಕಿಂತ ಹೆಚ್ಚು ಯೂನಿಟ್ ಬಳಸುವವರು ಪ್ರತಿ ಯೂನಿಟ್‌ಗೆ 5.45 ರೂ ಪಾವತಿಸಬೇಕು.
ದರ ಏರಿಕೆಗಳು
* ಸರಾಸರಿ ದರ ಏರಿಕೆ 23 ಪೈಸೆ
* ಗೃಹಬಳಕೆ ವಿದ್ಯುತ್ 20-25 ಪೈಸೆ
* ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ 25 ಪೈಸೆ
* ಬೀದಿದೀಪ ಸ್ಥಾವರಗಳಿಗೆ 25 ಪೈಸೆ












Click it and Unblock the Notifications