ಖಿನ್ನತೆ: ಬೆಂಗಳೂರಿನಲ್ಲಿ ಟೆಕ್ಕಿ ಆತ್ಮಹತ್ಯೆ

ಮಾನಸಿಕ ಖಿನ್ನತೆಗೊಳಗಾಗಿದ್ದ ಟೆಕ್ಕಿ ಬಸವರಾಜ್ ಆತ್ಮಹತ್ಯೆ ಮಾಡಿಕೊಂಡವರು. ಅವರಿಗೆ 36 ವರ್ಷ ವಯಸ್ಸಾಗಿತ್ತು. ಇಲ್ಲಿನ ಕಿರ್ಲೋಸ್ಕರ್ ಕಾಲನಿಯಲ್ಲಿ ವಾಸವಾಗಿದ್ದ ಬಸವರಾಜ್, ನಿನ್ನೆ ಬೆಳಗ್ಗೆ ಮನೆಯವರ ಜತೆಗೂಡಿ ತಿಂಡಿ ಶಾಸ್ತ್ರ ಮುಗಿಸಿದ್ದಾರೆ. ಬಳಿಕ ಅದೇನನ್ನಿಸಿತೋ ಸೀದಾ ತಮ್ಮ ಮಲಗುವ ಕೋಣೆಗೆ ತೆರಳಿ ನೇಣು ಬಿಗಿದುಕೊಂಡು ಸತ್ತಿದ್ದಾರೆ.
ಟೆಕ್ಕಿ ಬಸವರಾಜ್ 3 ತಿಂಗಳಿಂದ ತೀವ್ರ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನಿಡಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಬಸವರಾಜ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಆತನ ಸೋದರಿ ಚೆನ್ನಮ್ಮ ಪೊಲೀಸರಿಗೆ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಬಸವೇಶ್ವರನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications