ಯಶವಂತಪುರ : ಮರುಮತದಾನ ಪ್ರಾರಂಭ

ಬೆಳಗ್ಗೆ 7ಗಂಟೆಯಿಂದಲೇ ಜನರು ಉತ್ಸಾಹದಿಂದ ಮತದಾನದಲ್ಲಿ ತೊಡಗಿದ್ದಾರೆ. ಮೇ 5ರಂದು ನಡೆದ ಚುನಾವಣೆ ವೇಳೆ, ಮತಯಂತ್ರದಲ್ಲಿ ದೋಷ ಕಾಣಿಸಿಕೊಂಡಿತ್ತು. ಆದ್ದರಿಂದ ಚುನಾವಣಾ ವೀಕ್ಷಕರು ಮರು ಮತದಾನ ನಡೆಸಲು ಆದೇಶಿಸಿದ್ದರು.
ಆಗಿದ್ದೇನು : ಯಶವಂತಪುರ ವಿಧಾನಸಭಾ ಕ್ಷೇತ್ರದ ಹೇರೋಹಳ್ಳಿ ವಾರ್ಡ್ ನ ಮತಗಟ್ಟೆಯಲ್ಲಿನ ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರದಲ್ಲಿ ಕೇವಲ 10 ಮಂದಿ ಅಭ್ಯರ್ಥಿಗಳ ಹೆಸರು ಪ್ರಕಟವಾಗಿತ್ತು. ಆದರೆ, ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳಿದ್ದರು.
ಇದನ್ನು ಪತ್ತೆ ಹಚ್ಚಿದ ಚುನಾವಣಾ ವೀಕ್ಷಕರು ಮರುಮತದಾನ ನಡೆಸುವಂತೆ ಆದೇಶಿಸಿದ್ದರು. ಆದೇಶದ ಅನ್ವಯ ಮಂಗಳವಾರ ಬೆಳಗ್ಗೆಯಿಂದ ಮತದಾನ ಆರಂಭವಾಗಿದೆ. ಇಂದು ಸಂಜೆ ಮತದಾನ ಅಂತ್ಯಗೊಳ್ಳಲಿದ್ದು, ನಾಳೆ ಬೆಳಗ್ಗೆ ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.
ಯಶವಂತಪುರ ಕ್ಷೇತ್ರದ ಅಭ್ಯರ್ಥಿಗಳು
ಬಿಜೆಪಿ - ಎಚ್.ಎಲ್ .ಕೃಷ್ಣಪ್ಪ
ಕಾಂಗ್ರೆಸ್ ಎಸ್.ಟಿ.ಸೋಮಶೇಖರ್
ಜೆಡಿಎಸ್ - ಟಿ.ಎನ್. ಜವರಾಯಿಗೌಡ
ಬಿಎಸ್ಆರ್ - ಲೋಕೇಶ್ ಗೌಡ












Click it and Unblock the Notifications