ಪಿರಿಯಾಪಟ್ಟಣ: ಮೇ 25 ಚುನಾವಣೆ, 28ಕ್ಕೆ ರಿಸಲ್ಟ್

piriyapatna-candidate-death-election-postponed-may-25
ಮೈಸೂರು, ಮೇ 1: ಪಿರಿಯಾಪಟ್ಟಣ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಣ್ಣಮೊಗೇ ಗೌಡ ಅವರು ಸೋಮವಾರ ಹೃದಯಾಘಾತದಿಂದ ಮೃತಪಟ್ಟಿರುವ ಹಿನ್ನೆಲೆಯಲ್ಲಿ ತಕ್ಷಣಕ್ಕೆ ಕ್ಷೇತ್ರದಲ್ಲಿನ ಚುನಾವಣೆಯನ್ನು ಮುಂದೂಡಲಾಗಿತ್ತು.

ಆದರೆ ತಕ್ಷಣವೇ ಈ ಒಂದು ಕ್ಷೇತ್ರಕ್ಕಾಗಿ ಮಾತ್ರವೇ ಹೊಸ ವೇಳಾಪಟ್ಟಿ ತಯಾರಿಸಿರುವ ಆಯೋಗವು ಇದೇ ತಿಂಗಳ 25 ರಂದು (ಶನಿವಾರ) ಕ್ಷೇತ್ರದಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಿದೆ. ಬಿಜೆಪಿ ಮಾತ್ರ ಹೊಸದಾಗಿ ನಾಮಪತ್ರ ಸಲ್ಲಿಸಬಹುದಾಗಿದ್ದು, ಕಣದಲ್ಲಿರುವ ಇತರೆ ಪಕ್ಷಗಳ ಅಭ್ಯರ್ಥಿಗಳ ಸಿಂಧುತ್ವ ಹಾಗೆಯೇ ಮುಂದುವರಿಯಲಿದೆ.

ಕಾಂಗ್ರೆಸ್ಸಿನಿಂದ ಕೆ ವೆಂಕಟೇಶ್, ಜೆಡಿಎಸ್ಸಿನಿಂದ ಮಹದೇವ ಮತ್ತು ಕೆಜೆಪಿ ವತಿಯಿಂದ ಎಚ್ ಸಿ ಬಸವರಾಜ್ ಅವರು ಕಣದಲ್ಲಿರುವ ಇತರೆ ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು. ಈ ಹಿಂದೆ, ಕ್ಷೇತ್ರದಲ್ಲಿ ಮುಖ್ಯವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿಯಿತ್ತು.

ಆದರೆ ಈಗ ಬದಲಾದ ಸನ್ನಿವೇಶದಲ್ಲಿ ಬಿಜೆಪಿ ಪಕ್ಷವು ಯಾರನ್ನು ಅಭ್ಯರ್ಥಿಯನ್ನಾಗಿಸುತ್ತದೆ ಎಂಬುದು ಕುತೂಹಲಕಾರಿಯಾಗಿದ್ದು, ಆ ಅಭ್ಯರ್ಥಿಯತ್ತ ಅನುಕಂಪದ ಅಲೆ ಬೀಸುವುದು ಖಚಿತ ಎನ್ನಲಾಗಿದೆ.

ಒಂದು ವೇಳೆ ಅತಂತ್ರ ವಿಧಾನಸಭೆ ರಚನೆಯಾದರೆ ಅಥವಾ ಯಾವುದೇ ಪಕ್ಷ ಸರಳ ಬಹುಮತದ ಹೊಸ್ತಿಲಲ್ಲಿ ಎಡವುವ ಹಾಗಿದ್ದರೆ ಈ ಕ್ಷೇತ್ರದ ಫಲಿತಾಂಶ ಮಹತ್ವದ್ದಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+