ಚಿತ್ರ ಸುದ್ದಿ: ಕೃಷ್ಣ, ಕಾರ್ಮಿಕ, ಸಿಖ್, ಚೀನಾ
ಬೆಂಗಳೂರು, ಮೇ.1: ಕಾರ್ಮಿಕರ ದಿನಾಚರಣೆ ದಿನ ಕಂಡ ಕಾರ್ಮಿಕರ ಚಿತ್ರ, ಅಲ್ಲಲ್ಲಿ ಪ್ರತಿಭಟನೆಯ ಕೂಗು, ಕರ್ನಾಟಕದ ಎಲೆಕ್ಷನ್ ಕಾವು ಸರಬ್ಜಿತ್ ಸಿಂಗ್ ಕುಟುಂಬದ ನೋವು, ಸಿಖ್ ಹತ್ಯಾಕಾಂಡ ಆರೋಪಿ ಸಜ್ಜನ್ ಕುಮಾರ್ ದೋಷಮುಕ್ತ ಎಂದಿದ್ದಕ್ಕೆ ಸಿಟ್ಟಿಗೆದ್ದ ಸಿಖ್ ಸಮುದಾಯ ಎಲ್ಲದರ ಚಿತ್ರಣ ಇಲ್ಲಿದೆ. ಮಾಜಿ ಕೇಂದ್ರ ವಿದೇಶಾಂಗ ಸಚಿವ ಕರ್ನಾಟಕದ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರ ಹುಟ್ಟುಹಬ್ಬದ ಸಂಭ್ರಮ ಕೂಡ ನೋಡಿ...
ಪಾಕಿಸ್ತಾನ ಜೈಲಿನಲ್ಲಿ ಹಲ್ಲೆಗೊಳಗಾದ ಭಾರತೀಯ ಖೈದಿ ಸರಬ್ಜಿತ್ ಸಿಂಗ್ ಅವರ ಆರೋಗ್ಯ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದ್ದು, ಹೊರ ಬರಲಾಗದ ಕೋಮಾಗೆ ಸರಬ್ಜಿತ್ ಜಾರಿದ್ದಾರೆ. ಸರಬ್ಜಿತ್ ಅವರ ಪತ್ನಿ ಪುತ್ರಿಯರು ಸೇರಿದಂತೆ ಸರಬ್ಜಿತ್ ಅವರ ಸಹೋದರಿ ಕೂಡ ಭಾರತಕ್ಕೆ ವಾಪಸಾಗಿದ್ದಾರೆ. ಸರಬ್ಜಿತ್‌ರನ್ನು ಭಾರತಕ್ಕೆ ಕರೆಸಿಕೊಂಡು ಚಿಕಿತ್ಸೆ ನೀಡುವಂತೆ ದಲಬೀರ್ ಖೌರ್ ಅವರು, ಸೋನಿಯಾ ಗಾಂಧಿ ಅವರನ್ನು ಕೋರಿದ್ದಾರೆ.
1984ರಲ್ಲಿ ನಡೆದಿದ್ದ ಸಿಖ್ ನರಮೇಧ ಪ್ರಕರಣದಲ್ಲಿ ಸುಮಾರು 3000 ಸಿಖ್ಖರು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಸಜ್ಜನ್ ಕುಮಾರ್ ಸಹ ಆರೋಪಿಯಾಗಿದ್ದರು. ಮಂಗಳವಾರ ಪ್ರಕರಣದ ವಿಚಾರಣೆ ನಡೆಸಿದ ಕಾರ್ಕರ್ ಡುಮಾ ಜಿಲ್ಲಾ ನ್ಯಾಯಾಲಯ ಸಜ್ಜನ್ ಕುಮಾರ್ ಅವರನ್ನು ಖುಲಾಸೆಗೊಳಿಸಿತ್ತು.
ಸಜ್ಜನ್ ಕುಮಾರ್ ದೋಷಮುಕ್ತ ಎಂದು ತೀರ್ಪು ನೀಡಿದ ಹಿನ್ನಲೆಯಲ್ಲಿ ಸಿಖ್ ಧರ್ಮೀಯರು ದೆಹಲಿಯ ಸುಭಾಷ್ ನಗರ ಮೆಟ್ರೋ ನಿಲ್ದಾಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.. ಇನ್ನಷ್ಟು ಸುದ್ದಿಗಳು ಮುಂದಿನ ಚಿತ್ರಾವಳಿಯಲ್ಲಿ ನೋಡಿ...

ಚಿತ್ರ ಸುದ್ದಿ: ಕೃಷ್ಣ, ಕಾರ್ಮಿಕ, ಸಿಖ್, ಚೀನಾ
ಐಡಿಎಲ್ ಸಂಸ್ಥೆಯ ವತಿಯಿಂದ ಅಂಧರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅವರ ಜೊತೆಗೆ ಕೇಂದ್ರ ಸಚಿವ ಮುನಿಯಪ್ಪ

ಚಿತ್ರ ಸುದ್ದಿ: ಕೃಷ್ಣ, ಕಾರ್ಮಿಕ, ಸಿಖ್, ಚೀನಾ
ಮ್ಯಾಡ್ರಿಡ್: ಸ್ಪೇನಿನಲ್ಲಿ ನಡೆದ ಚಾಂಪಿಯನ್ಸ್ ಲೀಗ್ ಸೆಮಿಫೈನಲ್ ಪಂದ್ಯದಲ್ಲಿ ರಿಯಲ್ ಮ್ಯಾಡ್ರೀಡ್ ಪರ ಆಡುತ್ತಿರುವ ಪೋರ್ಚುಗಲ್ ನ ಕ್ರಿಸ್ಟಿಯಾನೋ ರೊನಾಲ್ಡೊ ಅವರು ಡಾರ್ಟ್ ಮುಂಡ್ ವಿರುದ್ಧ ಕಾಣಿಸಿಕೊಂಡಿದ್ದು ಹೀಗೆ

ಚಿತ್ರ ಸುದ್ದಿ: ಕೃಷ್ಣ, ಕಾರ್ಮಿಕ, ಸಿಖ್, ಚೀನಾ
ಯೂಥ್ ಕನೆಕ್ಟ್ ಕಾರ್ಯಕ್ರಮದಲ್ಲಿ ಪ್ರೊ.ರಾಜೀವ್ ಗೌಡ ಜೊತೆಯಲ್ಲಿ ನಿರ್ದೇಶಕ ಚೈತನ್ಯ, ಹಕಿಮುಲ್ಲಾ ಹಾಗೂ ವಾಸಂತಿ

ಚಿತ್ರ ಸುದ್ದಿ: ಕೃಷ್ಣ, ಕಾರ್ಮಿಕ, ಸಿಖ್, ಚೀನಾ
ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಗೆಲುವು ತಂದುಕೊಟ್ಟ ಸುರೇಶ್ ರೈನಾ

ಚಿತ್ರ ಸುದ್ದಿ: ಕೃಷ್ಣ, ಕಾರ್ಮಿಕ, ಸಿಖ್, ಚೀನಾ
ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ದಿನ ವಾರಣಸಿಯಲ್ಲಿ ಕಂಡ ದೃಶ್ಯ

ಚಿತ್ರ ಸುದ್ದಿ: ಕೃಷ್ಣ, ಕಾರ್ಮಿಕ, ಸಿಖ್, ಚೀನಾ
ಬೆಂಗಳೂರಿನಲ್ಲಿ ಫಿಟ್ ನೆಸ್ ಕೇಂದ್ರ ಆರಂಭಿಸಿದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಪೋಸ್ ಕೊಟ್ಟಿದ್ದು ಹೀಗೆ

ಚಿತ್ರ ಸುದ್ದಿ: ಕೃಷ್ಣ, ಕಾರ್ಮಿಕ, ಸಿಖ್, ಚೀನಾ
ಸಜ್ಜನ್ ಕುಮಾರ್ ದೋಷಮುಕ್ತನಾಗಲು ಸಾಧ್ಯವಿಲ್ಲ ಎಂದು ಸಿಖ್ ಸಮುದಾಯ ಪ್ರತಿಭಟನೆ

ಚಿತ್ರ ಸುದ್ದಿ: ಕೃಷ್ಣ, ಕಾರ್ಮಿಕ, ಸಿಖ್, ಚೀನಾ
ಇಸ್ಲಾಮಾಬಾದಿನಲ್ಲಿ ಸರಬ್ಜಿತ್ ನೋಡಿಕೊಂಡು ಬಂದ ಮೇಲೆ ಪ್ರತಿಕಾಗೋಷ್ಠಿಯಲ್ಲಿ ಕಣ್ಣೀರಿಡುತ್ತಿರುವ ಆತನ ಕುಟುಂಬ ವರ್ಗ

ಚಿತ್ರ ಸುದ್ದಿ: ಕೃಷ್ಣ, ಕಾರ್ಮಿಕ, ಸಿಖ್, ಚೀನಾ
ಭಾರತದ ನೆಲ ಆಕ್ರಮಣಿಸಲು ಹೊಂಚು ಹಾಕಿರುವ ಚೀನಾ ವಿರುದ್ಧ ಸಿಡಿದೆದ್ದ ಟಿಬೆಟಿಯನ್ನರು












Click it and Unblock the Notifications