ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಪೆಟ್ರೋಲ್ ಬೆಲೆ ಇಳೀತು: ಬೆಂಗಳೂರಿನಲ್ಲೆಷ್ಟು?

By Srinath
|
Google Oneindia Kannada News

petrol-prices-reduced-by-rs-3-in-india-69-in-bangalore
ಬೆಂಗಳೂರು, ಮೇ 1: 'ಪೆಟ್ರೋಲ್ ಬೆಲೆಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಅನುಗುಣವಾಗಿ ನಿಮ್ಮ ಲೆಕ್ಕಾಚಾರದಂತೆ ಬೆಲೆಗಳನ್ನು ನಿಗದಿಪಡಿಸಿಕೊಳ್ಳಿ' ಎಂದು ಕೇಂದ್ರ ಸರಕಾರವು ದೇಶೀಯ ಪೆಟ್ರೋಲ್ ಕಂಪನಿಗಳಿಗೆ ಹೇಳಿದ್ದೇ ತಡ ಅವು 15 ದಿನಕ್ಕೊಮ್ಮೆ ಪೆಟ್ರೋಲ್ ಬೆಲೆಗಳನ್ನು ಗಣನೀಯವಾಗಿ ಇಳಿಸುತ್ತಿವೆ!

ಆದರೆ ತಿಳಿದುಕೊಳ್ಳಿ ಇದು ಆರಂಭ ಮಾತ್ರ. ಮುಂದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೆ ತಲುಪಿತೆಂದು ಇಲ್ಲೂ ಬೆಲೆಗಳನ್ನು ಏರಿಸಿದರೆ ಅದಕ್ಕೆ ಗ್ರಾಹಕರು ಈಗಿನಿಂದಲೇ ಸಿದ್ಧರಾಗಿರಬೇಕು.

ಆದರೂ ಸದ್ಯಕ್ಕೆ ಸಮಾಧಾನದ ನಿಟ್ಟುಸಿರೆಳೆಯುವಂತೆ ಮಂಗಳವಾರ ರಾತ್ರಿಯಿಂದ ಪೆಟ್ರೋಲ್ ದರದಲ್ಲಿ ಲೀಟರ್‌ಗೆ 3 ರೂ. ಕಡಿಮೆ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ತೀವ್ರ ಕುಸಿತವುಂಟಾಗಿರುವ ಹಿನ್ನೆಲೆಯಲ್ಲಿ ಪೆಟ್ರೋಲ್ ದರದಲ್ಲಿ ಇಳಿಕೆ ಮಾಡಲಾಗಿದೆ.

ಹಾಗಾದರೆ ಬೆಂಗಳೂರಿನಲ್ಲೆಷ್ಟು?: ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆ ಲೀಟರ್ ಪೆಟ್ರೋಲ್ ದರ ಮುಂಬೈ ದರಕ್ಕಿಂತ ಕಡಿಮೆ ಅಂದರೆ 69.39 ಪೈಸೆಯಷ್ಟಾಗಿದೆ. ಮುಂದೆ ಮೇ 15 ರಂದು ಬೆಲೆ ಇಳಿಯುತ್ತಾ/ಏರುತ್ತಾ? ಎಂಬ ಕುತೂಹಲ ಮೂಡಿದೆ. ಈ ಹಿಂದೆ ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲಿಗೆ 72.94 ರೂ ಇತ್ತು.

ಒಂದೇ ತಿಂಗಳಲ್ಲಿ 7 ರೂ. ಇಳಿಕೆ: ಬೆಲೆ ಕುಸಿತದ ಬಳಿಕ ದೇಶದ ನಾಲ್ಕು ಮಹಾನಗರಗಳಲ್ಲಿ ಪರಿಷ್ಕೃತ ಪೆಟ್ರೋಲ್ ದರಗಳು ಹೀಗಿವೆ. ದಿಲ್ಲಿಯಲ್ಲಿ ಲೀಟರಿಗೆ 63.09 ರೂ, ಕೋಲ್ಕತಾ 70.35 ರೂ, ಮುಂಬೈ 69.73 ರೂ, ಚೆನ್ನೈ 65 ರೂ.

ಕಳೆದ ಎರಡು ತಿಂಗಳುಗಳಲ್ಲಿ ಪೆಟ್ರೋಲ್ ದರದಲ್ಲಿ ಕುಸಿತವುಂಟಾಗಿರುವುದು ಇದು ನಾಲ್ಕನೆ ಬಾರಿ. ಇದಕ್ಕೂ ಮುನ್ನ ಎಪ್ರಿಲ್ 15ರಂದು ಪೆಟ್ರೋಲ್ ದರದಲ್ಲಿ 2 ರೂ. ಕಡಿತವಾಗಿತ್ತು. ಇದು ಕಳೆದೈದು ವರ್ಷಗಳಲ್ಲೇ ಅತ್ಯಂತ ಗರಿಷ್ಠ ಇಳಿಕೆಯಾಗಿದೆ.

English summary
Petrol prices reduced by Rs 3 in India - As on May 1 petrol rate in Bangalore is Rs 69 for a leter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X