ಬಾಂಬ್ ಸ್ಫೋಟ: ಮತ್ತಷ್ಟು ಸ್ಫೋಟಕ ಮಾಹಿತಿಗಳು
ಬೆಂಗಳೂರು, ಎ.24: ಬೆಂಗಳೂರು ಸ್ಫೋಟದ ಕುಕೃತ್ಯ ಯಾರದು ಎಂಬುದನ್ನು ಪತ್ತೆಹಚ್ಚುವಲ್ಲಿ ಬೆಂಗಳೂರು ಪೊಲೀಸರು ಯಶಸ್ವಿಯಾಗಿರುವ ಬೆನ್ನಿಗೇ ಮತ್ತಷ್ಟು ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ. ನಿಷೇಧಿತ ಅಲ್ ಉಮ್ಮಾ ಸಂಘಟನೆಯ ಕೈವಾಡ ರುಜುವಾತಾಗಿದೆ.
* ಸ್ಪೋಟಕ್ಕೆ ಬಳಸಲಾಗಿದ್ದ ಸುಜುಕಿ ಬೈಕ್ ಮೂಲ ಮಾಲೀಕ ಪ್ರಕಾಶ್ 3 ವರ್ಷದ ಹಿಂದೆ ಅನ್ವರ್ ಪಾಷಾ ಎಂಬುವವನಿಗೆ ಅದನ್ನು ಮಾರಾಟ ಮಾಡಿದ್ದರು. ಸದರಿ ಅನ್ವರನನ್ನು ಪತ್ತೆ ಹಚ್ಚಿ, ವಿಚಾರಣೆಗೊಳಪಡಿಸಿದಾಗ ಒಂದು ಮೊಬೈಲ್ ನಂಬರ್ ನೀಡಿದ್ದಾನೆ. ತಕ್ಷಣ, ಪೊಲೀಸರು ಘಟನೆಯ ನಂತರ ಆ ಸ್ಥಳದಲ್ಲಿ ಚಾಲ್ತಿಯಲ್ಲಿದ್ದ ಅನುಮಾನಾಸ್ಪದ ಸಂಖ್ಯೆಯಗಳೊಂದಿಗೆ ತಾಳೆ ಹಾಕಿದಾಗ ... ಉಗ್ರರ ಜಾಡು ಗೋಚರವಾಗಿದೆ.

* ನಗರದ ಮಲ್ಲೇಶ್ವರಂನ ಬಿಜೆಪಿ ಕಚೇರಿ ಸಮೀಪ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಶಂಕಿತ ಆರೋಪಿಗಳನ್ನು ನಗರದ ಪೊಲೀಸರು ವಶಕ್ಕೆ ತೆಗೆದುಕೊಂಡಿರುವುದನ್ನು ನಗರ ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ ಕರ್ ಖಚಿತಪಡಿಸಿದ್ದಾರೆ.
* ತಮಿಳುನಾಡಿನ ಚೆನ್ನೈ ಹಾಗೂ ಬೆಂಗಳೂರು ನಗರದಲ್ಲಿ ಶಂಕಿತರನ್ನು ವಶಕ್ಕೆ ಪಡೆದಿರುವ ಪೊಲೀಸರು ಅಜ್ಞಾತ ಸ್ಥಳವೊಂದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಶಂಕಿತರೆಲ್ಲ ತಮಿಳುನಾಡಿನ ಮೂಲದ ನಿಷೇಧಿತ ಉಗ್ರ ಸಂಘಟನೆಯೊಂದರ ಸದಸ್ಯರು ಎಂದು ಹೇಳಲಾಗಿದೆ.
* ಬಾಂಬ್ ತಯಾರಿಕೆ ಬಗ್ಗೆ ಮತ್ತು ಉಗ್ರವಾದಿ ಸಂಘಟನೆಗಳ ಜತೆ ನಂಟು ಹೊಂದಿರುವ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
* ಬಾಂಬ್ ಸ್ಫೋಟಕ್ಕೆ ಬಳಸಿದ್ದ ದ್ವಿಚಕ್ರ ವಾಹನದ ಸುಳಿವನ್ನಾಧರಿಸಿ ತಮಿಳುನಾಡಿಗೆ ತೆರಳಿದ ನಗರದ ಜಂಟಿ ಪೊಲೀಸ್ ಆಯುಕ್ತ ಎಸ್. ಮುರುಗನ್ ನೇತೃತ್ವದ ತಂಡ ಆರು ಮಂದಿಯನ್ನು ಬಂಧಿಸಿ, ನಗರಕ್ಕೆ ಕರೆತಂದಿದೆ. ಅವರನ್ನು ತೀವ್ರ ವಿಚಾರಣೆಗ ಒಳಪಡಿಸಲಾಗಿದೆ.












Click it and Unblock the Notifications