ಮೂರು ಗಂಟೆ ತಡವಾಗಿ ಬಂದ ರಾಹುಲ್ ಗಾಂಧಿ

ಸಿಂಧನೂರಿನಲ್ಲಿ ಬೆಳಗ್ಗೆ 11 ಗಂಟೆಗೆ ಬೃಹತ್ ಸಮಾವೇಶ ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಬೇಕಾಗಿತ್ತು. ಆದರೆ, ಸುಮಾರು ಮೂರು ಗಂಟೆಗಳು ತಡವಾಗಿ ಕಾರ್ಯಕ್ರಮ ಪ್ರಾರಂಭವಾಗಲಿದೆ. ಹುಬ್ಬಳ್ಳಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ ರಾಹುಲ್ ನಂತರ ರಾಯಚೂರಿನ ಸಿಂಧನೂರಿಗೆ ತಲುಪಿದರು. ರಾಹುಲ್ ಗಾಂಧಿಗಾಗಿ ಕಾದು ಸುಸ್ತಾದ ಜನರು ಬಿರುಬಿಸಿಲನ್ನು ಲೆಕ್ಕಿಸದೇ ರಾಹುಲ್ ಗಾಂಧಿಗೆ ಜೈಕಾರ ಹಾಕುತ್ತಿದ್ದಾರೆ.
ರಾಹುಲ್ ಗಾಂಧಿ ದೆಹಲಿಯಿಂದ ಹೊರಟಿಲ್ಲವೋ? ಅಥವ ಇಂದು ರಾಜ್ಯಕ್ಕೆ ಆಗಮಿಸುವುದಿಲ್ಲವೋ? ಎಂಬ ಬಗ್ಗೆ ಯಾವುದೇ ಮಾಹಿತಿ ತಿಳಿದಿರದ ನಾಯಕರು ರಾಹುಲ್ ಆಗಮದಿಂದ ಸಂತಸಗೊಂಡಿದ್ದಾರೆ.
ಮೂರು ಕಾರ್ಯಕ್ರಮ ಮುಗಿಯ ಬೇಕಾಗಿತ್ತು : ಅಧಿಕೃತ ಕಾರ್ಯಕ್ರಮದಂತೆ ಮಧ್ಯಾಹ್ನ 11 ಗಂಟೆಗೆ ಸಿಂಧನೂರಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ 12 ಗಂಟೆಗೆ ರಾಹುಲ್ ಬಾಗಲಕೋಟೆ ಜಿಲ್ಲೆಗೆ ತೆರಳವಬೇಕಾಗಿತ್ತು. ಮಧ್ಯಾಹ್ನ 1.30ಕ್ಕೆ ಬಿಜಾಪುರದಲ್ಲಿ ಬಹಿರಂಗ ಸಮಾವೇಶ ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿ ಮತಯಾಚನೆ ಮಾಡಬೇಕಾಗಿತ್ತು.
ಆದರೆ ಮಧ್ಯಾಹ್ನ 1.30ಕ್ಕೆ ರಾಹುಲ್ ಸಿಂಧನೂರಿಗೆ ಆಗಮಿಸಿದ್ದು, ಉಳಿದ ಕಾರ್ಯಕ್ರಮಗಳು ವಿಳಂಬವಾಗಿ ಪ್ರಾರಂಭವಾಗಲಿದೆ. ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಮುಂತಾದ ನಾಯಕರು ರಾಹುಲ್ ಗಾಂಧಿ ಜೊತೆಗಿದ್ದಾರೆ.
ದೆಹಲಿ ಸಭೆ ಮುಕ್ತಾಯ : ನವದೆಹಲಿಯಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಕೋರ್ ಕಮಿಟಿ ಸಭೆಯಲ್ಲಿ ರಾಹುಲ್ ಗಾಂಧಿ ಭಾಗವಹಿಸಿ ಬರುವುದರಿಂದ ವಿಳಂಬವಾಗಿದೆ ಎಂದು ಕಾಂಗ್ರೆಸ್ ನಾಯಕರು ಜನರಿಗೆ ಸಮಾಧಾನ ಹೇಳಿದ್ದಾರೆ. ಸಮಾವೇಶ ಉದ್ದೇಶಿಸಿ ರಾಹುಲ್ ಗಾಂಧಿ ಮಾತನಾಡಿ ಅಧಿಕೃತವಾಗಿ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications