ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಲ್ಲಿ ರಾಷ್ಟ್ರಗಳಲ್ಲಿ ಬಿಕಿನಿ ಧರಿಸುವಂತಿಲ್ಲ

By Srinath
|
Google Oneindia Kannada News
uae-ras-al-khaimah-authorities-ban-bikini-miniskirts

ದುಬೈ, ಏ.23: ಅರಬ್ ಸಂಯುಕ್ತ ಸಂಸ್ಥಾನಗಳ ಕೆಲವು ಕರಾವಳಿ ತಟಗಳಲ್ಲಿ ಇನ್ನು ಮುಂದೆ ಬಿಕಿನಿ ಕಾಣಿಸಿಕೊಳ್ಳುವಂತಿಲ್ಲ. ಇದರಿಂದ ಬಿಕಿನಿ ತೊಟ್ಟ ಬೆಡಗಿಯರೂ ಕಾಣಸಿಗುವುದಿಲ್ಲ ಎಂದು ಇಲ್ಲಿ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಕೊಕ್ಕೆಗೆ ಬಿಕಿನಿ!: ಕೊಲ್ಲಿ ರಾಷ್ಟ್ರಗಳ ತುತ್ತತಿದಿಯಲ್ಲಿರುವ ದುಬೈನಿಂದ 60 ಕಿಮೀ ದೂರದಲ್ಲಿರುವ ರಾಸ್ ಅಲ್ ಖೈಮತ್ ಪ್ರದೇಶದ ಅಧಿಕಾರಿಗಳು ನಿಮ್ಮಲ್ಲಿರುವ ಬಿಕಿನಿಗಳನ್ನು ಇನ್ಮುಂದೆ ಕೊಕ್ಕೆಗೆ ಹಾಕಿ ಎಂದಿದ್ದಾರೆ. ಪುರುಷರೂ ಅಷ್ಟೇ ತಮ್ಮ ಚಡ್ಡಿಯನ್ನು ಗೂಟಕ್ಕೆ ನೇತು ಹಾಕಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ.

ಮಹಿಳೆಯರೇ ಈಜುಡುಗೆ, ಟೂ ಪೀಸ್ ಬಿಕಿನಿಗಳಲ್ಲಿ ಕಾಣಿಸಿಕೊಳ್ಳಬೇಡಿ. ಅಕಸ್ಮಾತ್ ಅದೇನಾದರೂ ನಮ್ಮ ಕಣ್ಣಿಗೆ ಬಿದ್ದರೆ ನಿಮ್ಮ ಕೈಗೆ ದಂ ಡದ ರಸೀತಿ ಕೊಡುವುದು ಗ್ಯಾರಂಟಿ ಎಂಬ ಒಕ್ಕಣೆಯ ಪೋಸ್ಟರುಗಳು ಕೊಲ್ಲಿ ಬೀಚುಗಳಲ್ಲಿ ಈಗ ಢಾಳಾಗಿ ಕಾಣಿಸುತ್ತಿವೆ.

ಇದು ಹೆಚ್ಚಾಗಿ, ವಿದೇಶಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಜಾರಿಗೆ ತರಲಾಗಿದೆ. ಈ ವಿದೇಶಿ ತುಂಡ್ ಹೈಕಳುಗಳು ನಮ್ಮ ತಟಗಳಲ್ಲಿ ಯದ್ವಾತದ್ವಾ ಕಾಣಿಸಿಕೊಳ್ಳುತ್ತಿವೆ. ಇದರಿಂದ ನಮಗೆ ಶಾನೆ ಪರೆಶಾನ್ ಆಗುತ್ತಿದೆ. ವಸಿ ಇವರ ಮೈಗೆ ಬಟ್ಟೆ ತೊಡಿಸಿ' ಎಂದು ಸ್ಥಳೀಯರು ಅಲವತ್ತುಕೊಂಡಿದ್ದೇ ತಡ ಅಧಿಕಾರಿಗಳು ಬಿಕಿನಿ ಬಂದ್ ಮಾಡಿದ್ದಾರೆ.

ಕುತೂಹಲದ ಸಂಗತಿಯೆಂದರೆ ರಾಸ್ ಅಲ್ ಖೈಮತ್ ನಿಂದ 60 ಕಿಮೀ ದೂರದಲ್ಲಿರುವ ದುಬೈನಲ್ಲಿ ಅಲ್ಲಿನ ಅಧಿಕಾರಿಗಳು ಗೌರವಯುತ ಬಟ್ಟೆ ಧರಿಸಿ ಎನ್ನುತ್ತದೇ ಹೊರತು, ಮೀನುಖಂಡಗಳನ್ನು ತೋರಿಸುವ ಮಿನಿ ಸ್ಕರ್ಟ್, ಬಿಕಿನಿಗಳನ್ನು ತೊಡಬೇಡಿ ಎಂದೇನೂ ಹೇಳುವುದಿಲ್ಲ!

English summary
UAE Ras al-Khaimah Authorities ban Bikini miniskirts. Authorities in Ras al-Khaimah, the northernmost emirate in the UAE, have posted signs on public beaches warning of possible fines for revealing swimwear such as two-piece bikinis for women and brief trunks for men.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X