ಚಿತ್ರಗಳಲ್ಲಿ : ಮಹಾವೀರ, ಜಾತ್ರೆ, ಪ್ರತಿಭಟನೆ, ಗೌಡ್ರು
ಬೆಂಗಳೂರು, ಏ.23: ವ್ಯಕ್ತಿ ತನ್ನನ್ನು ತಾನು ಅರಿಯದ ಹೊರತು ಅನ್ಯರನ್ನು ಅರಿಯಲಾರನು ತನ್ನ ಅರಿವಿಂದಲೇ ಮುಕ್ತಿ ತಾನು ಸರಿಹೋದರೆ ಲೋಕ ಕಲ್ಯಾಣ ಎಂದ ಜೈನ ತೀರ್ಥಂಕರ ಮಹಾವೀರ ಅವರ ಹುಟ್ಟಿದ ದಿನ ಭಾರತದೆಲ್ಲೆಡೆ ಆಚರಿಸಲಾಗುತ್ತಿದೆ.
ಲೋಕಕಲ್ಯಾಣಕ್ಕಾಗಿ ಸರ್ವಸಂಗ ಪರಿತ್ಯಾಗ ಮಾಡಿದ ದಿಗಂಬರ ಮಹಾಮುನಿ ಮಹಾವೀರನ ಜಯಂತಿಯಂದು ಜೈನ ಬಸದಿಗಳನ್ನು ಬಾವುಟಗಳಿಂದ ಅಲಂಕರಿಸಲಾಗುತ್ತದೆ. ಬೆಳಗಿನ ಸಮಯ ಮಹಾವೀರನ ಪ್ರತಿಮೆಗೆ ಅಭಿಷೇಕ ಮಾಡಲಾಗುತ್ತದೆ.
ನಂತರ ಇದನ್ನು ತೊಟ್ಟಿಲಿನಲ್ಲಿಟ್ಟು ಮೆರವಣಿಗೆ ಕರೆದೊಯ್ಯಲಾಗುತ್ತದೆ. ಭಕ್ತಾದಿಗಳು ಅಕ್ಕಿ, ಹಣ್ಣು, ಹಾಲು, ನೀರು ಮೊದಲಾದುವನ್ನು ನೈವೇದ್ಯ ಮಾಡುತ್ತಾರೆ. ಪ್ರವಚನಗಳು, ಪ್ರಾರ್ಥನೆಗಳು ನಡೆಯುತ್ತವೆ. ಗೋರಕ್ಷಣೆಗಾಗಿ ಚಂದಾ ಎತ್ತುತ್ತಾರೆ.
ಇಂದಿನ ಚಿತ್ರಮಾಲಿಕೆಯಲ್ಲಿ ಕರ್ನಾಟಕದ ಇತಿಹಾಸ ಪ್ರಸಿದ್ಧ ಬೇಲೂರು ಜಾತ್ರೆ ಚಿತ್ರ ಕೂಡಾ ಇದೆ. ಉಳಿದಂತೆ ದೇವೇಗೌಡರ ಸುದ್ದಿಗೋಷ್ಠಿ, ಐಪಿಎಲ್ ನಲ್ಲಿ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ಆರ್ಭಟ, ಸಿಲಿಗುರಿಯಲ್ಲಿ ಭಾರಿ ಪ್ರಮಾಣದ ವಂಚನೆಯಿಂದ ಕಂಗಲಾದ ಸಾರ್ವಜನಿಕರು, ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ತಮಿಳುನಾಡು ಮುಖ್ಯಮಂತ್ರಿ ಭೇಟಿ ಮುಂತಾದ ಚಿತ್ರಗಳಿದೆ....

ಚಿತ್ರಗಳಲ್ಲಿ ಇಂದಿನ ಸುದ್ದಿ ವಿಶೇಷ
ಮಿರ್ಜಾಪುರ: ಜೈನ ಭಕ್ತಾದಿಗಳು ಮಹಾವೀರ ಜಯಂತಿ ಅಂಗವಾಗಿ ಜೈನ ತೀರ್ಥಂಕರ ಮಹಾವೀರ ವಿಗ್ರಹಕ್ಕೆ ಶುದ್ಧ ನೀರಿನಲ್ಲಿ ಅಭಿಷೇಕ ಮಾಡುತ್ತಿದ್ದಾರೆ.

ಚಿತ್ರಗಳಲ್ಲಿ ಇಂದಿನ ಸುದ್ದಿ ವಿಶೇಷ
ಕೊಲಂಬೋ: ಶ್ರೀಲಂಕಾದಲ್ಲಿ ವಿದ್ಯುತ್ ಬೆಲೆ ದಿಢೀರ್ ಏರಿಕೆ ಮಾಡಿರುವುದನ್ನು ಖಂಡಿಸಿ ಮಾರ್ಕ್ಸ್ ವಾದಿ ಪಕ್ಷ, ಲಿಬಿರೇಷನ್ ಫ್ರಂಟ್ ಕಾರ್ಯಕರ್ತರು ಪ್ರತ್ರಿಭಟನಾ ಮೆರವಣಿಗೆ ನಡೆಸಿದರು.

ಚಿತ್ರಗಳಲ್ಲಿ ಇಂದಿನ ಸುದ್ದಿ ವಿಶೇಷ
ಚೆನ್ನೈ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಭೇಟಿಯಾದ ಸಂದರ್ಭದಲ್ಲಿ ನಮಸ್ಕಾರ ವಿನಿಮಯ

ಚಿತ್ರಗಳಲ್ಲಿ ಇಂದಿನ ಸುದ್ದಿ ವಿಶೇಷ
ಬೇಲೂರು: ಹಾಸನ ಜಿಲ್ಲೆ ಬೇಲೂರಿನ ಚನ್ನಕೇಶವ ಸ್ವಾಮಿ ದೇಗುಲದ ರಥೋತ್ಸವ ಅಂಗವಾನಿ ನೆರೆದಿರುವ ಜನಸಮೂಹ ಹಾಗೂ ರಥದ ಚಿತ್ರ

ಚಿತ್ರಗಳಲ್ಲಿ ಇಂದಿನ ಸುದ್ದಿ ವಿಶೇಷ
ಸಿಲಿಗುರಿ: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಶಾರದಾ ಸಮೂಹ ಸಂಸ್ಥೆ ಎಂಬ ನಕಲಿ ಚಿಟ್ ಫಂಡ್ ನಲ್ಲಿ ಹಣ ತೊಡಗಿಸಿದ್ದ ಜನತೆ ಕಂಗಾಲಾಗಿದ್ದಾರೆ. ಚಿಟ್ ಫಂಡ್ ಮುಚ್ಚಿದ್ದು, ಹಣ ಕಳೆದುಕೊಂಡವರು ಬೀದಿಗಿಳಿದು ಪ್ರತಿಭಟಿಸಿದ್ದಾರೆ

ಚಿತ್ರಗಳಲ್ಲಿ ಇಂದಿನ ಸುದ್ದಿ ವಿಶೇಷ
ಸಿಲಿಗುರಿ: ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿ ಶಾರದಾ ಸಮೂಹ ಸಂಸ್ಥೆ ಎಂಬ ನಕಲಿ ಚಿಟ್ ಫಂಡ್ ನಲ್ಲಿ ಹಣ ತೊಡಗಿಸಿದ್ದ ಜನತೆ ಕಂಗಾಲಾಗಿದ್ದಾರೆ. ಚಿಟ್ ಫಂಡ್ ಮುಚ್ಚಿದ್ದು, ಹಣ ಕಳೆದುಕೊಂಡವರು ಬೀದಿಗಿಳಿದು ಪ್ರತಿಭಟಿಸಿದ್ದಾರೆ

ಚಿತ್ರಗಳಲ್ಲಿ ಇಂದಿನ ಸುದ್ದಿ ವಿಶೇಷ
ಚೆನ್ನೈ : ತಮಿಳುನಾಡು ಪ್ರವಾಸದಲ್ಲಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಗೆ ಪಿಎಂಕೆ ಪಕ್ಷದ ವತಿಯಿಂದ ಕಿರೀಟ ತೊಡಿಸಿ ಸನ್ಮಾನ

ಚಿತ್ರಗಳಲ್ಲಿ ಇಂದಿನ ಸುದ್ದಿ ವಿಶೇಷ
ಬೆಂಗಳೂರು : ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾಣಿಸಿದ್ದು ಹೀಗೆ PTI Photo by Shailendra Bhojak

ಚಿತ್ರಗಳಲ್ಲಿ ಇಂದಿನ ಸುದ್ದಿ ವಿಶೇಷ
ಜೆಡ್ ಚರ್ಲ ಗ್ರಾಮ: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಕಿರಣ್ ಕುಮಾರ್ ರೆಡ್ಡಿ ಅವರು ಜೆಡಚರ್ಲ ಗ್ರಾಮದ ಫಲಾನುಭವಿಗಳಿಗೆ ಅಕ್ಕಿ ಚೀಲಗಳನ್ನು ವಿತರಿಸುತ್ತಿದ್ದಾರೆ.

ಚಿತ್ರಗಳಲ್ಲಿ ಇಂದಿನ ಸುದ್ದಿ ವಿಶೇಷ
ಐಪಿಎಲ್: ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನಿಂದ ನಗೆ ಚೆಲ್ಲಿದ ನಾಯಕ ಎಂಎಸ್ ಧೋನಿ ಪತ್ನಿ ಸಾಕ್ಷಿ

ಚಿತ್ರಗಳಲ್ಲಿ ಇಂದಿನ ಸುದ್ದಿ ವಿಶೇಷ
ಅಗರ್ತಲ: ಮುಂಗಾರಿಗಾಗಿ ಕಾದಿರುವ ರೈತರು ಒಣ ಭೂಮಿಯಲ್ಲಿ ನಡೆಯುತ್ತಿರುವ ದೃಶ್ಯ

ಚಿತ್ರಗಳಲ್ಲಿ ಇಂದಿನ ಸುದ್ದಿ ವಿಶೇಷ
ರಾಜಸ್ಥಾನ್ ರಾಯಲ್ಸ್ ವಿರುದ್ಧ ಭರ್ಜರಿ ಜಯ ದಾಖಲಿಸಿದ ಚೆನ್ನೈ ಸೂಪರ್ ಕಿಂಗ್ಸ್. ಸಿಎಸ್ ಕೆ ಆಲ್ ರೌಂಡರ್ ಬ್ರಾವೋ ಖುಷಿ

ಚಿತ್ರಗಳಲ್ಲಿ ಇಂದಿನ ಸುದ್ದಿ ವಿಶೇಷ
ರಾಯಗಢ: ಬಾಲಿವುಡ್ ನಟಿ ಕಂಗನಾ ರಾನೌತ್ ಮುಂಬರುವ ಚಿತ್ರ ರಜ್ಜೋ ಚಿತ್ರೀಕರಣ ಸಂದರ್ಭದಲ್ಲಿ ಕಾಣಿಸಿದ್ದು ಹೀಗೆ

ಚಿತ್ರಗಳಲ್ಲಿ ಇಂದಿನ ಸುದ್ದಿ ವಿಶೇಷ
ನವದೆಹಲಿ: ಅಹಿಂಸ ವಿಶ್ವಭಾರತಿ ಸ್ಥಾಪಕ ಆಚಾರ್ಯ ಲೋಕೇಸ್ ಮುನಿ ಅವರು ನೀಡಿದ ಮಹಾವೀರನ ಚಿತ್ರಕ್ಕೆ ನಮಿಸುತ್ತಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿ












Click it and Unblock the Notifications