ಮಧ್ಯಪ್ರದೇಶ: ಕಟ್ಟಿಗೆ ತುರುಕಿ ಹಸುಳೆಯ ರೇಪ್

ಅತ್ಯಾಚಾರಿ ಯುವಕನನ್ನು ವಿಷ್ಣು ಎಂದು ಗುರುತಿಸಲಾಗಿದ್ದು, ಪೊಲೀಸರು ಅವನನ್ನು ಬಂಧಿಸಿದ್ದಾರೆ. ಬಾಲಕಿಯ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆದ ನಂತರ ದುಷ್ಕೃತ್ಯ ಎಸಗಿರುವುದು ದೃಢಪಟ್ಟಿದೆ. ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಹಸುಳೆಯನ್ನು ಅಪಹರಿಸಿ ಕರೆದೊಯ್ದ ವಿಷ್ಣು, ಮಗುವಿನ ಮೇಲೆ ಪೈಶಾಚಿಕ ಕ್ರೌರ್ಯವೆಸಗಿದ್ದಾನೆ. ನಂತರ ತಾಮಿಯಾ ಎಂಬ ಊರಿನ ಬಳಿ ಬಿಟ್ಟು ಹೋಗಿದ್ದಾನೆ. ಬಾಲಕಿಯ ಗುಪ್ತಾಂಗಗಳಲ್ಲಿ ಕಟ್ಟಿಗೆಯ ವಸ್ತುಗಳನ್ನು ತೂರಿಸಿ ರಾಕ್ಷಸಿ ಕೃತ್ಯ ಎಸಗಿರುವುದು ಬಬರ್ಬರವಾಗಿದೆ. ಮಗು ತೀವ್ರವಾಗಿ ಗಾಯಗೊಂಡಿದ್ದಾಳೆ.
ರಕ್ತ ಸಿಕ್ತ ಮಗುವಿನೊಂದಿಗೆ ತಂದೆ ತಾಯಿಗಳು ದೂರು ನೀಡಲು ಠಾಣೆಗೆ ಹೋದಾಗ, ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ನಂತರ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರಿಂದ ಪೊಲೀಸರು ತಡವಾಗಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.












Click it and Unblock the Notifications