ಸಮಾನ ಶಿಕ್ಷಣ ನೀಡುವ : ಬಿಎಸ್ಆರ್ ಕಾಂಗ್ರೆಸ್ ಪ್ರಣಾಳಿಕೆ

ಶನಿವಾರ ಬಳ್ಳಾರಿಯಲ್ಲಿ ಪಕ್ಷದ ಅಧ್ಯಕ್ಷ ಶ್ರೀರಾಮುಲು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಕೃಷಿ ಕಾರ್ಮಿಕರಿಗೆ ಉಚಿತ ರೈನ್ ಕೋಟ್, ಗಮ್ ಬೂಟ್ಸ್ ವಿತರಣೆ, ಬಡ ವಿದ್ಯಾರ್ಥಿನೀಯರಿಗೆ ಉಚಿತ ಲ್ಯಾಪ್ ಟಾಪ್, ಬಡ ಮಸ್ಲಿಂಮರಿಗೆ ಮನೆ ನಿರ್ಮಿಸಲು ಟಿಪ್ಪು ವಸತಿ ಯೋಜನೆ ಮುಂತಾದ ಕಾರ್ಯಕ್ರಮಗಳನ್ನು ಜನ ಕಲ್ಯಾಣಕ್ಕಾಗಿ ಜಾರಿಗೆ ತರಲಾಗುವುದು ಎಂದು ಶ್ರೀರಾಮುಲು ಹೇಳಿದರು.
ಪ್ರಣಾಳಿಕೆಯಲ್ಲಿನ ಮುಖ್ಯಾಂಶಗಳು
* ಕೃಷಿ ಕಾರ್ಮಿಕರಿಗೆ ಉಚಿತ ರೈನ್ ಕೋಟ್, ಗಮ್ ಬೂಟ್ಸ್ ವಿತರಣೆ
* ಬಡ ವಿದ್ಯಾರ್ಥಿನೀಯರಿಗೆ ಉಚಿತ ಲ್ಯಾಪ್ ಟಾಪ್
* ಬಡ ಮಸ್ಲಿಂಮರಿಗೆ ಮನೆ ನಿರ್ಮಿಸಲು ಟಿಪ್ಪು ವಸತಿ ಯೋಜನೆ
* ತಾಲೂಕು ಮತ್ತು ಹೋಬಳಿ ಕೇಂದ್ರ ಅಭಿವೃದ್ಧಿಗೆ ವಿಶೇಷ ಯೋಜನೆ
* ಕೊಳಗೇರಿ ನಿವಾಸಿಗಳಿಗೆ 3 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ
* ರೈತ ಮಹಿಳೆಯರಿಗೆ ಗೃಹ ಕೈಗಾರಿಕೆಗಾಗಿ ಸಾಲ ವಿತರಣೆ
* 104 ತುರ್ತು ಮೊಬೈಲ್ ಆಸ್ಪತ್ರೆ ಸೇವೆ
* ರಾಜ್ಯದಲ್ಲಿ ಪ್ರತ್ಯೇಕ ಕೃಷಿ ನೀತಿ ಜಾರಿ
* ನರೇಗಾ ಯೋಜನೆ ಹಣ ನೇರವಾಗಿ ಬ್ಯಾಂಕ್ ಖಾತೆಗೆ
* ವಿಶ್ವವಿದ್ಯಾಲಯಗಳಲ್ಲಿ ಜಾಗತಿಕ ಗುಣಮಟ್ಟದ ಬೋಧನೆಗೆ ಕ್ರಮ
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications