ಪ್ರಧಾನಿಗೆ ಇರಾಕ್ ನೆನಪಿದೆ, ಬೆಂಗಳೂರು ನೆನಪಿಲ್ವ?

ಬೆಂಗಳೂರು, ಏ.17: ಇಡೀ ದೇಶವೇ ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ನಡೆದ ಸ್ಪೋಟದ ಬಗ್ಗೆ ಸ್ಪಂದಿಸುತ್ತಿರುವಾಗ ದೇಶದ ಪ್ರಥಮ ಪ್ರಜೆಗಳು ಕರ್ನಾಟಕದ ಕಡೆ ಮುಖ ಮಾಡದೆ ಮೌನವಾಗಿರುವುದು ಬೆಂಗಳೂರಿಗರನ್ನು ಕೆರಳಿಸಿದೆ. ಬಾಂಬ್ ಸ್ಫೋಟವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲು ಕಾಂಗ್ರೆಸ್ ಹಾಗೂ ಬಿಜೆಪಿ ಪರಸ್ಪರ ಯತ್ನಿಸುತ್ತಿರುವುದು ದುರಂತವೇ ಸರಿ.

ಶಕೀಲ್ ಅಹಮದ್ ಅವರ ಟ್ವೀಟ್ ಹೇಳಿಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಕಾಂಗ್ರೆಸ್ ವಕ್ತಾರರು ಅದು ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ಯಾವುದೇ ಕೆಟ್ಟ ಉದ್ದೇಶವಿಲ್ಲ ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

ಇದಕ್ಕೆ ಪ್ರತಿಯಾಗಿ ಶಕೀಲ್ ಟ್ವೀಟ್ ತೀವ್ರವಾಗಿ ಖಂಡಿಸಿರುವ ಬಿಜೆಪಿ, ಭಯೋತ್ಪದನೆ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ ಎಂದಿದೆ. ಬಿಜೆಪಿ ವಕ್ತಾರ ಶಹನವಾಜ್ ಹುಸೇನ್ ಮಾತನಾಡಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಪ್ರಧಾನಿ ಮನಮೋಹನ್ ಸಿಂಗ್ ಅವರು ಸ್ಪಷ್ಟಿಕರಣ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಟ್ವೀಟ್ ಪೂರ್ಣ ಪಾಠ ಇಲ್ಲಿ ಓದಿದೆ

PMO and President Snub Bangalore

ಆದರೆ, ಕಳೆದೆರಡು ದಿನಗಳಲ್ಲಿ ಇರಾಕ್ ಕಾರು ಬಾಂಬ್ ಸ್ಪೋಟ ಭೂಕಂಪದಿಂದಾಗಿ ನೂರಾರು ಮಂದಿ ಸಾವನ್ನಪ್ಪಿದ್ದಕ್ಕೆ ಕಣ್ಣೀರು ಸುರಿಸಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರು ಬೆಂಗಳೂರು ಸ್ಫೋಟದ ಸಂತ್ರಸ್ತರಿಗೆ ಕನಿಷ್ಠ ಸಾಂತ್ವನ ನುಡಿಗಳನ್ನು ಹೇಳಲು ಮರೆತ್ತಿದ್ದಾರೆ. ಬೋಸ್ಟನ್ ದುರಂತದ ನಂತರ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಎಂದಿನಂತೆ ಜನತೆಯ ಮುಂದೆ ಕಾಣಿಸಿಕೊಂಡು ಧೈರ್ಯ ತುಂಬಿದ್ದಾರೆ.

ಆದರೆ, ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಎನಿಸಿಕೊಂಡಿರುವ ಭಾರತದಲ್ಲಿ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ನಡೆ ನುಡಿ ಕಂಡು ಬರುತ್ತಿರುವುದು ವಿಷಾದನೀಯ. @pmoindia ಬೇರೆಲ್ಲ ವಿಷಯಕ್ಕೆ ಟ್ವೀಟ್ ಮಾಡಿರುವುದನ್ನು ನೋಡಬಹುದು ಆದರೆ, ಬೆಂಗಳೂರಿನ ಬಾಂಬ್ ಸ್ಫೋಟ ಸಂಭವಿಸಿದ್ದರ ಬಗ್ಗೆ ಯಾವುದೇ ಟ್ವೀಟ್ ಮಾಡಿಲ್ಲ.

ಬಹುಶಃ ಸ್ಫೋಟದಲ್ಲಿ ಯಾರು ಸತ್ತಿಲ್ಲ, ಅದರಲ್ಲೂ ಬಿಜೆಪಿ ಕಚೇರಿ ಬಳಿ ನಡೆದಿದೆ ಎಂದು ಪ್ರಧಾನಿ ಸಚಿವಾಲಯ ಅಸಡ್ಡೆ ತೋರಿಸಿರಬಹುದು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಸಚಿವಾಲಯದಿಂದಲೂ ಯಾವುದೇ ಸಂದೇಶ ಹೊರಬಿದ್ದಿಲ್ಲ.

ಬೆಂಗಳೂರು ಸಾಮಾಜಿಕ ಜಾಲ ತಾಣಗಳಲ್ಲಿ ಒಕ್ಕೊರಲಿನಿಂದ ಕೂಗುತ್ತಿದ್ದ್ದಾರೆ. ಯಾರು ನಮ್ಮ ನಾಯಕರು ಪ್ರಧಾನಿಯೇ? ರಾಷ್ಟ್ರಪತಿಯೇ? ರಾಜ್ಯಪಾಲರೇ? ಒಕ್ಕೂಟ ವ್ಯವಸ್ಥೆಯಲ್ಲಿ ಪಕ್ಷ ಬೇಧ ಮರೆತು ಸ್ಪಂದಿಸಲು ಸಾಧ್ಯವಿಲ್ಲವೇ? ಭಯೋತ್ಪಾದನೆಗೂ ಪಕ್ಷಗಳಿಗೂ ಸಂಬಂಧವಿದೆಯೇ? ಮುಂತಾದ ಟ್ವೀಟ್ ಗಳು ಟ್ವೀಟರ್ ಲೋಕದಲ್ಲಿ ತುಂಬಿದೆ

ಇರಾಕ್ ಭೂಕಂಪ, ಬಾಂಬ್ ಸ್ಪೋಟ ಹಾಗೂ ಬೋಸ್ಟನ್ ಮ್ಯಾರಥಾನ್ ದುರಂತದ ಬಗ್ಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಈ ಕೆಳಗಿನಂತೆ ಟ್ವೀಟಿಸಿದ್ದರು. ಆದರೆ, ಬೆಂಗಳೂರು ಮರೆತರು ಏಕೆ?
PM: We stand in solidarity and sympathy with the bereaved families, the injured and the people of the United States.

Prime Minister condemns Boston bombings. Expresses his solidarity with the American people in the struggle against terrorism.

PM conveys deepest condolences for the loss of life, injury and destruction of property in the earthquake that hit Iran and Pakistan.

ಇದರ ಜೊತೆ ಶಕೀರ್ ಅಹ್ಮದ್ ಸೇರಿದಂತೆ ಗುಪ್ತಚರ ಇಲಾಖೆಯ ವೈಫಲ್ಯವೇ ಘಟನೆಗೆ ಕಾರಣ ಎಂದು ಹೇಳಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆಕ್ರೋಶ ವ್ಯಕ್ತವಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ರಾಜಕೀಯ ಲಾಭಕ್ಕಾಗಿ ಸ್ಫೋಟ ಪ್ರಕರಣವನ್ನು ಬಳಸಿಕೊಂಡು ಅಸಹ್ಯ ಹುಟ್ಟಿಸುತ್ತಿರುವ ನಾಯಕರ ವಿರುದ್ಧ ಚುನಾವಣಾ ಆಯೋಗ ಏಕೆ ಇನ್ನೂ ಕ್ರಮ ಕೈಗೊಂಡಿಲ್ಲ. ಎಚ್ಚರಿಕೆ ಮಾತುಗಳನ್ನು ಆಡಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+