Get Updates
Get notified of breaking news, exclusive insights, and must-see stories!

ಮುಂಬೈ ಮೇಲೆ ಮಹಿಳಾ ಉಗ್ರರ ದಾಳಿಗೆ ಸಂಚು

terror-women-suicide-squads-may-target-mumbai
ಮುಂಬೈ, ಏ.16: ಅತ್ತ ಲಾಡೆನ್ ಸಂತತಿ ಅಮೆರಿಕದಲ್ಲಿ ಮತ್ತೆ ಭಯೋತ್ಪಾದಕ ದಾಳಿ ನಡೆಸಿರುವ ಬೆನ್ನಿಗೇ ಇತ್ತ ವಾಣಿಜ್ಯ ರಾಜಧಾನಿ ಮುಂಬೈಗೂ ಮತ್ತೆ ಉಗ್ರ ಭೀತಿ ಆವರಿಸಿದೆ. ಈ ಬಾರಿ ಮಹಿಳಾ ರೂಪಿ ಅಜ್ಮಲ್ ಕಸಬ್ ಗಳುದಾಳಿಗೆ ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.

ಆತ್ಮಾಹುತಿ ಭಯೋತ್ಪಾದಕಿಯರನ್ನು ಇದಕ್ಕಾಗಿ ತರಬೇತಿಗೊಳಿಸಲಾಗಿದೆ. ಮಹಾರಾಷ್ಟ್ರದ ಮುಂಬೈ, ಪುಣೆ ಮತ್ತಿತರ ನಗರಗಳನ್ನು ಗುರಿಯಾಗಿಸಿಕೊಂಡು ಇವರು ದಾಳಿಗೆ ನಡೆಸಲು ಹೊಂಚುಹಾಕುತ್ತಿದ್ದಾರೆ. ಈ ಬಗ್ಗೆ ಕೇಂದ್ರ ಗುಪ್ತಚರ ಮೂಲಗಳು ರಾಜ್ಯವನ್ನು ಎಚ್ಚರಿಸಿದೆ ಎಂದು ಗೃಹಸಚಿವ ಆರ್ ಆರ್ ಪಾಟೀಲ್ ರಾಜ್ಯ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಆತ್ಮಾಹುತಿ ಭಯೋತ್ಪಾದಕಿಯರಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿದೆ. ಮುಂಬೈ ಮತ್ತು ಪುಣೆ ಪ್ರಧಾನವಾಗಿ ಹಿಟ್ ಲಿಸ್ಟ್ ನಲ್ಲಿ ಗೋಚರಿಸಿಕೊಂಡಿದೆ ಎಂದು ಲಿಖಿತ ರೂಪದಲ್ಲಿ ಸದನದಲ್ಲಿ ಅವರು ತಿಳಿಸಿದ್ದಾರೆ. ಮುಸುಕುಧಾರಿಗಳು ಮತ್ತು ಸ್ಕಾರ್ಫ್ ತೊಟ್ಟ ಮಹಿಳೆಯರ ಬಗ್ಗೆ ವಿಶೇಷ ನಿಗಾವಹಿಸುವಂತೆ ಸೂಚಿಸಲಾಗಿದೆ.

ಕೇಂದ್ರ ಗುಪ್ತಚರ ಮಾಹಿತಿಯನ್ನಾಧರಿಸಿ ರಾಜ್ಯ ಸರಕಾರವು ಮುಂಬೈ ಪೊಲೀಸ್, ರೈಲ್ವೆ ಪೊಲೀಸ್, ಜಿಲ್ಲಾ ಪೊಲೀಸ್ ಮತ್ತಿತರ ಭದ್ರತಾ ಸಂಸ್ಥೆಗಳಿಗೆ ಸೂಕ್ತ ಮಾಹಿತಿ ರವಾನಿಸಲಾಗಿದ್ದು, ಸಂಭಾವ್ಯ ದಾಳಿ ಬಗ್ಗೆ ಮೆನ್ನೆಚ್ಚರಿಕೆ ವಹಿಸಿ, high alertನಲ್ಲಿರುವಂತೆ ಸೂಚಿಸಲಾಗಿದೆ. ಇಂತಹ ದುರ್ಭರ ಪರಿಸ್ಥಿತಿಗಳನ್ನು ಎದುರಿಸಲು ವ್ಯವಸ್ಥಿತ ಕ್ರಮಗಳನ್ನು ಅಳವಡಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಸರಕಾರವೂ ಸದಾ ಕಟ್ಟೆಚ್ಚರದಲ್ಲಿದೆ ಎಂದು ಪಾಟೀಲರು ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+