ಬಿಎಸ್ಆರ್ ಕಾಂಗ್ರೆಸ್ಸಿಗೆ ಚೋಟಾ ಬಜಾರ್ ಮುನ್ನಾ

Chota Bazar Munna joins BSR Congress
ಬಳ್ಳಾರಿ, ಏ.12 : ಕೌಲ್‌ಬಜಾರ್ ಪ್ರದೇಶದ ಕಾಂಗ್ರೆಸ್ ಪಕ್ಷದ ಪ್ರಮುಖ ಅಲ್ಪಸಂಖ್ಯಾತ ಮುಖಂಡನಾದ ಚೋಟಾ ಬಜಾರ್ ಮುನ್ನಾ ಅವರು ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಶುಕ್ರವಾರ ವಿಧ್ಯುಕ್ತವಾಗಿ ಸೇರ್ಪಡೆಯಾದರು.

ಮುನ್ನಾ ಅವರೊಂದಿಗೆ 25ನೇ ವಾರ್ಡಿನ ಮೆಹಬೂಬ್ ಮತ್ತು 24ನೇ ವಾರ್ಡಿನ ರಿಯಾಜ್ ಅವರೂ ಸಹ ಬಿಎಸ್‌ಆರ್ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು. ಕಳೆದ 10 ದಿನಗಳಿಂದ ಬಳ್ಳಾರಿ ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ 9 ವಾರ್ಡುಗಳಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮುಲು ಅವರು ಮತಪ್ರಚಾರ ಕೈಗೊಂಡಿದ್ದಾರೆ.

ಮೆಹಬೂಬ್ ಅವರು ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಗೆ ಫ್ಯಾನ್ ಚಿಹ್ನೆಯ ಮೂಲಕ ಪಕ್ಷೇತರ ಅಭ್ಯರ್ಥಿಯಾಗಿ ಮತ್ತು ರಿಯಾಜ್ ಅವರು ಶೀಟಿ ಚಿಹ್ನೆಯಡಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅವರನ್ನು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಬಿ.ಶ್ರೀರಾಮುಲು ಅವರು ಪಕ್ಷದ ಶಾಲು ಹೊದಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.

ಹಟ್ಟಿ ಮಖಾನ್ ಬೀದಿಯಲ್ಲಿ ಪ್ರಚಾರ : ಮೇ 5ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಬಿ.ಶ್ರೀರಾಮುಲು ಅವರು ಕೌಲ್‌ಬಜಾರ್ ಪ್ರದೇಶ ವ್ಯಾಪ್ತಿಯ ಹಟ್ಟಿ ಮಖಾನ್ ಬೀದಿಯಲ್ಲಿ ಮತ ಪ್ರಚಾರ ಕೈಗೊಂಡರು.

ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕೆ ನಿಂತಿರುವ ಅವರು, ಬಳ್ಳಾರಿ ಮಹಾನಗರ ಪಾಲಿಕೆಯ ಎಲ್ಲ 9 ವಾರ್ಡುಗಳು(ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ವಾರ್ಡುಗಳು) ಮತ್ತು ತಮ್ಮ ಕ್ಷೇತ್ರದ 65 ಗ್ರಾಮಗಳಲ್ಲಿ ಪ್ರಚಾರ ಕೈಗೊಳ್ಳಲು ಉದ್ದೇಶಿಸಿರುವ ಅವರು, ಚುನಾವಣಾ ನೀತಿ ಸಂಹಿತೆ ಪ್ರಕಾರ ಪ್ರಚಾರ ಕೈಗೊಂಡಿದ್ದಾರೆ.

ಅವರೊಂದಿಗೆ 24ನೇ ವಾರ್ಡಿನ ಪಾಲಿಕೆ ಸದಸ್ಯ ಎಂ.ಗೋವಿಂದರಾಜುಲು, ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಮುಖಂಡರಾದ ಇಲಿಯಾಜ್, ಮೊಯಿನ್, ಮುಜೀಬ್, ನಾಜು, ಅಯಾಜ್, ಸೋಮು, ಚಕ್ರಿ, ಶಿವ, ಬಂಡಿಹಟ್ಟಿ ಮಹೇಶ್, ಬಂಡಿಹಟ್ಟಿ ಉಮಾಪತಿ, ಚೌಧರಿ ಸೀನ, ಅಜಾದ್ ನಗರ ಚಂದ್ರ, ಖಲೀಲ್, ಅಬ್ದುಲ್, ಮೂಸಾ, ನೂರ್ ಬಾಷಾ ಇನ್ನಿತರರು ಜೊತೆಗಿದ್ದರು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+