ಬಿಎಸ್ಪಿ ದೀಪಕ್ ಹತ್ಯೆಗೆ ಸುಪಾರಿ ಕೊಟ್ಟ ಮಗ ಸೆರೆ

Deepak Bhardwaj murder: Delhi Police arrest his son Nitesh
ನವದೆಹಲಿ, ಏ.9: ಬಹುಜನ ಸಮಾಜವಾದಿ ಪಕ್ಷದ ಮುಖಂಡ, ಉದ್ಯಮಿ ದೀಪಕ್ ಭಾರದ್ವಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರಿಯ ಮಗ ನಿತೀಶ್ ಸೇರಿ ಮೂವರನ್ನು ದೆಹಲಿ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ತಂದೆಯನ್ನು ಕೊಲ್ಲಲ್ಲು ಮಗ ನಿತೀಶ್ 6 ಕೋಟಿ ಸುಪಾರಿ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ದೀಪಕ್ ಅವರ ಹತ್ಯೆಗೆ ಸುಮಾರು 2 ಕೋಟಿ ರುಪಾಯಿ ಸುಪಾರಿ ನೀಡಲಾಗಿತ್ತು. ದೇವಮಾನ ಯೋಗ ಗುರು ಅವಿನಾಶ್ ಶಾಸ್ತ್ರಿ ಹಾಗೂ ಇಬ್ನೊಬ್ಬ ಗುರೂಜಿ ಕೈವಾಡ ಇದೆ ಎನ್ನಲಾಗಿತ್ತು.ಯೋಗ ಗುರುವನ್ನು ಪೊಲೀಸರು ಬಂಧಿಸಿದ್ದರು. ಇನ್ನೊಬ್ಬ ಸ್ವಾಮೀಜಿ ತಪ್ಪಿಸಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

40 ವರ್ಷದ ಯೋಗಗುರು ಅವಿನಾಶ್ ಶಾಸ್ತ್ರಿ ಹಾಗೂ ನಾಪತ್ತೆಯಾಗಿರುವ ಸ್ವಾಮೀಜಿ ಪ್ರತಿಭಾನಂದ್ ಅವರು ಬಾಡಿಗೆ ಹಂತಕರನ್ನು ಬಳಸಿ ದೀಪಕ್ ಭಾರದ್ವಾಜ್ ಅವರನ್ನು ಕೊಲೆ ಮಾಡಿಸಿದ್ದಾರೆ ಎಂಬ ಆರೋಪವಿದೆ. ದೀಪಕ್ ಕೊಲೆಗೆ ರಿಯಲ್ ಎಸ್ಟೇಟ್ ವ್ಯವಹಾರವೇ ಮುಖ್ಯ ಕಾರಣ ಎಂಬುದು ಈಗ ಸ್ಪಷ್ಟವಾಗುತ್ತಿದೆ.

ಶೂಟರ್ ಪುರುಷೋತ್ತಮ್ ರಾಣಾ ಹಾಗೂ ಸುನಿಲ್ ಮನ್ ಇಬ್ಬರನ್ನು ಈ ಗುರೂಜಿಗಳಿಗೆ ದೀಪಕ್ ಅವರ ಪೈಲಟ್ ಪರಿಚಯಮಾಡಿಕೊಟ್ಟಿದ್ದ ಎನ್ನಲಾಗಿದೆ. ದೀಪಕ್ ಭಾರದ್ವಾಜ್ ಅವರ ಕಿರಿಯ ಪುತ್ರ ನಿತೀಶ್ ಅವರು ನಟ ಶಾರುಖ್ ಖಾನ್ ಅವರ ಸೋದರ ಸಂಬಂಧಿಯನ್ನು ಮದುವೆಯಾಗಿದ್ದಾರೆ. 600 ಕೋಟಿ ಆಸ್ತಿ ಎಲ್ಲರನ್ನು ಆರೋಪಿಗಳಾಗಿ ನೋಡುವಂತೆ ಮಾಡಿದೆ.

ದೀಪಕ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಇಬ್ಬರು ಪ್ರಮುಖ ಆರೋಪಿಗಳಾದ ಪುರುಷೋತ್ತಮ್ ರಾಣಾ ಹಾಗೂ ಸುನಿಲ್ ಮನ್ ಎರಡು ಕೋಟಿ ರುಪಾಯಿ ಸುಪಾರಿ ಪಡೆದಿದ್ದಾರೆ ಎನ್ನಲಾಗಿದೆ. ಆದರೆ, ಸುಪಾರಿ ನೀಡಿದವರ ವಿವರ ಸ್ಪಷ್ಟವಾಗಿ ಹೊರ ಬಿದ್ದಿಲ್ಲವಾದರೂ ದೀಪಕ್ ಅವರ ಕುಟುಂಬ ವರ್ಗದ ಸದಸ್ಯರದ್ದೇ ಈ ಕೃತ್ಯ ಎನ್ನಲಾಗಿದೆ.

ಈ ಮಧ್ಯೆ, ಪ್ರಕರಣದ ನಾಲ್ಕು ಆರೋಪಿಗಳ ಪೈಕಿ ಮೂವರನ್ನು ಪೊಲೀಸರು ಬಂಧಿಸಿದ್ದು, ಈ ಮೂವರನ್ನು ಇಂದು ಪಟಿಯಾಲ ಕೋರ್ಟಿಗೆ ಹಾಜರುಪಡಿಸಲಾಗಿದೆ. 30 ವರ್ಷದ ಪುರುಷೋತ್ತಮ್ ರಾಣಾ, 26 ವರ್ಷದ ಸುನಿಲ್ ಮನ್ ಅವರನ್ನು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರಶಾಂತ್ ಶರ್ಮ ಎದುರು ಹಾಜರುಪಡಿಸಲಾಯಿತು. ಆರೋಪಿಗಳು test identification parade (TIP) ಗೆ ಒಳಪಡಲು ನಿರಾಕರಿಸಿದರು. ಹತ್ಯೆಗೆ ಬಳಸಲಾದ ಸ್ಕೋಡಾ ಕಾರ್ ಚಾಲಕ ಅಮಿತ್ ನನ್ನು ವಶಕ್ಕೆ ತೆಗೆದುಕೊಳ್ಳಲು ಪೊಲೀಸರು ಯತ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+