ಖಜಾನೆಗೆ ದೇಣಿಗೆ: ಒಬಾಮಾಗೆ ಸ್ವಯಂ ಸ್ಯಾಲರಿ ಕಟ್

ಹಾಗೆ ನೋಡಿದರೆ ಒಬಾಮಾ ಈಗಾಗಲೇ ಸಾಕಷ್ಟು ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದಾರೆ. ಜತೆಗಿರಲಿ ಅಂತ ತಮ್ಮ ವೇತನದಲ್ಲಿ ಶೇ. 5ರಷ್ಟನ್ನು ಅಂದರೆ ಸುಮಾರು 20,000 ಡಾಲರ್ ಮೊತ್ತವನ್ನು ದೇಶದ ಖಜಾನೆಗೆ ದೇಣಿಗೆಯಾಗಿ ನೀಡಿದ್ದಾರೆ!
ಬರ ಸಂಕಷ್ಟದಲ್ಲಿ ವಿದೇಶ ಪ್ರವಾಸದ ಮೋಜು ಮಸ್ತಿಗೆ ಹಾತೊರೆಯುವ ನಮ್ಮ ಜನನಾಯಕರ ಗಮನಕ್ಕೆ ಇದು ಬಂದಿದೆಯೇ? ಒಬಾಮಾ ಅವರ ಈ ನೀತಿ ಇತರರಿಗೂ ಪಾಠವಾಗಬಲ್ಲದೇ?
ಪ್ರಸ್ತುತ, ಒಬಾಮಾ ಅವರ ವಾರ್ಷಿಕ ವೇತನ 4,00,000 ಅಮೆರಿಕನ್ ಡಾಲರ್, ಅಂದರೆ ಸುಮಾರು 2 ಕೋಟಿ ರೂ. ಗೂ ಅಧಿಕ. ಇದರಲ್ಲಿ ಸುಮಾರು 10 ಲಕ್ಷ ರೂ. ಗಳನ್ನು ಅವರು ಬೊಕ್ಕಸಕ್ಕೆ ಮರಳಿಸಲಿದ್ದಾರೆ.
ಈ ಸಂಬಂಧ ಅವರು ತಮ್ಮ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದು, ತಮ್ಮ ವೇತನದಲ್ಲಿ ಶೇ. 5ರಷ್ಟನ್ನು ಖಜಾನೆಗೇ ಭರಿಸುವಂತೆ ತಿಳಿಸಿದ್ದಾರೆ. ಒಬಾಮಾ, ಮಾರ್ಚ್‌ನಿಂದಲೇ ಈ ದೇಣಿಗೆ ಆರಂಭಿಸುವ ತೀರ್ಮಾನ ಕೈಗೊಂಡಿದ್ದರಾದರೂ ಎಪ್ರಿಲ್ ತಿಂಗಳಿನಿಂದ ಆರಂಭಗೊಳ್ಳಲಿದೆ. ಡಿಸೆಂಬರ್ ವರೆಗೂ ಮುಂದುವರಿಯಲಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ತಿಳಿಸಿದ್ದಾರೆ.
ದೇಶದಾದ್ಯಂತ ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿಗಳು ತಮ್ಮ ವೇತನದಲ್ಲಿ ಒಂದಂಶವನ್ನು ಸರಕಾರಕ್ಕೆ ದೇಣಿಗೆಯಾಗಿ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಅಧ್ಯಕ್ಷರು ದೇಶದ ಖಜಾನೆಗೆ ತಾವೂ ದೇಣಿಗೆ ನೀಡಲು ಮುಂದಾಗಿದ್ದಾರೆ. ಪ್ರತಿ ತಿಂಗಳು ಖಜಾನೆಗೆ ಚೆಕ್ ಮೂಲಕ ದೇಣಿಗೆ ನೀಡಲು ಒಬಾಮಾ ನಿರ್ಧರಿಸಿದ್ದಾರೆ.
ಗಮನಾರ್ಹವೆಂದರೆ ಅಮೆರಿಕದ ಸರಕಾರಿ ಉದ್ಯೋಗಿಗಳು ವೇತನ ರಹಿತ ರಜೆ ತೆಗೆದುಕೊಳ್ಳುತ್ತಿದ್ದಾರೆ. 7 ಲಕ್ಷ ಮಂದಿ ಪ್ರತಿ ವಾರಕ್ಕೆ ಒಂದು ದಿನ ವೇತನ ರಹಿತ ರಜೆ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಇದು 14 ವಾರ ಕಾಲ ನಡೆಯಲಿದೆ.
ಈ ಹಿಂದೆಯೂ ಹಬರ್ಟ್ ಹೂವರ್, ಜಾಣ್ ಎಫ್ ಕೆನಡಿ, ಅಮೆರಿಕದ ಮೊದಲಾಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಸಹ ಹೀಗೆ salary ಕಡಿತಕ್ಕೆ ಆಸ್ಪದಕೊಟ್ಟಿದ್ದರು. ಆದರೆ ಅದು ಪ್ರತ್ಯೇಕ ಖಾತೆಯಲ್ಲಿ ಜಮೆಯಾಗಿತ್ತು. ನೇರವಾಗಿ ಸರಕಾರಿ ಖಜಾನೆಗೆ ತುಂಬಿರಲಿಲ್ಲ.
-
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ












Click it and Unblock the Notifications