ಜನ್ಮದಿನದಂದು ಬಿಜೆಪಿ ಮಡಿಲಿಗೆ ಹಿರಿಯ ನಟಿ

2010ರಲ್ಲಿಯೇ ಅಮರ್ ಸಿಂಗ್ ಜತೆಯಲ್ಲಿಯೇ ಜಯಪ್ರದಾ ಅವರನ್ನು ಎಸ್‌ಪಿ ಉಚ್ಛಾಟಿಸಿತ್ತು. ಅದಾದನಂತರ, ರಾಷ್ಟ್ರೀಯ ಲೋಕ ಮಂಚ್‌ನ ಉಪಾಧ್ಯಕ್ಷೆಯಾಗಿದ್ದ ಬಹುಮುಖ ನಟಿ ಜಯಪ್ರದಾ ಅವರು ಇತ್ತೀಚೆಗೆ ಕನ್ನಡ ಚಿತ್ರರಂಗಕ್ಕೆ ಮರಳಿ ಸಂಗೊಳ್ಳಿ ರಾಯಣ್ಣ ಚಿತ್ರದಲ್ಲಿ ಅಭಿನಯಿಸಿದ್ದರು.
ತಿರುಮಲದಲ್ಲಿ ಶ್ರೀವಾರಿ ದೇವಸ್ಥಾನಕ್ಕೆ ತೆರಳಿ, ವಿಶೇಷ ದರ್ಶನ ಪಡೆದ ಜಯಪ್ರದಾ ಅವರು, ಈ ಮಾಸಾಂತ್ಯ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಸೇರುವ ಬಗ್ಗೆ ಅಧಿಕೃತವಾಗಿ ಘೋಷಿಸುವುದಾಗಿ ತಿಳಿಸಿದ್ದಾರೆ.
ನಟಿ ಜಯಪ್ರದಾ ಅವರು ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಇತ್ತೀಚೆಗೆ ಸುದ್ದಿ ಹಬ್ಬಿತ್ತು. ಆದರೆ ತಮ್ಮ ನಿಲುವು ಬದಲಿಸಿದ ನಟಿ ಜಯಪ್ರದಾ, ಬಿಜೆಪಿ ಸೇರ್ಪಡೆಯಾಗಿ ತಮ್ಮ ಹುಟ್ಟೂರಾದ ರಾಜಮಂಡ್ರಿಯಿಂದ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಅಭಿಲಾಷೆ ಹೊಂದಿದ್ದಾರೆ.
ಈ ಸಂಬಂಧ ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಅವರ ಸಲಹೆಯ ಮೇರೆಗೆ ಜಯಪ್ರದಾ ಅವರು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಕುತೂಹಲಕಾರಿ ಸಂಗತಿಯೆಂದರೆ ಮುಂಧಿನ ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್, ತೆಲುಗುದೇಶಂ ಮತ್ತು ವೈಎಸ್ಆರ್ ಕಾಂಗ್ರೆಸ್ ಪಕ್ಷಗಳು ರಾಜಮಂಡ್ರಿ ಕ್ಷೇತ್ರಕ್ಕೆ ತಮ್ಮ ತಮ್ಮ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ. ಆದರೆ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ಹಾಗಾಗಿ ಜಯಪ್ರದಾ ಅವರು ಬಬಿಜೆಪಿ ಸೇರುವ ಆಲೋಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಅಂದಹಾಗೆ, ವೈಎಸ್ಆರ್ ಕಾಂಗ್ರೆಸ್ ಟಿಕೆಟ್ ಕಮ್ಮ ಜನಾಂಗದವರಿಗೆ ಮೀಸಲಾಗಿದ್ದರೆ, ಕಾಂಗ್ರೆಸ್ ವತಿಯಿಂದ ಹಾಲಿ ಸಂಸದ ಯು ಅರುಣ್ ಕುಮಾರ್, ತೆಲುಗು ದೇಶಂ ವತಿಯಿಂದ ಹಿರಿಯ ನಟ ಮುರಳಿ ಮೋಹನ್ ಸ್ಪರ್ಧಿಸಲಿದ್ದಾರೆ. ರಾಜಮಂಡ್ರಿ ಸಮೀಪದ ಊರಿನವರಾದ ಜಯಪ್ರದಾ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ.












Click it and Unblock the Notifications