ಪ್ರೀತಿಗಾಗಿ ಜೈಲು ಸೇರಿದ ಇಸ್ರೋ ನಕಲಿ ವಿಜ್ಞಾನಿ

arrested
ಬೆಂಗಳೂರು, ಏ.4 : ನೆಚ್ಚಿನ ಹುಡುಗಿಯ ಪ್ರೀತಿ ಪಡೆಯಲು ಇಸ್ರೋದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಯುವಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಇಸ್ರೋದ ನಕಲಿ ಗುರುಚಿನ ಚೀಟಿ ಹೊಂದಿದ್ದ ಮರ್ಷಿದ್ ಅಕ್ಮಲ್ ಎಂಬ ಯುವಕನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಜಾರ್ಖಂಡ್ ರಾಜ್ಯದ ರಾಂಚಿಯವನಾದ ಮರ್ಷಿದ್ ಅಕ್ಮಲ್(23) ಬೆಂಗಳೂರಿನ ಇಂದಿರಾನಗರದ ತಿಪ್ಪಸಂದ್ರದ ನಿವಾಸಿಯಾಗಿದ್ದ. ರಾಂಚಿಯಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಆಧಾರ್ ಕಾರ್ಡ್ ನೋಂದಣಿ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ. ನಂತರ ಕೆಲಸ ಆರಸಿ ಬೆಂಗಳೂರು ಸೇರಿದ್ದ.

ಆಕ್ಮಲ್ ಗೆ ಫೇಸ್ ಬುಕ್ ಮುಖಾಂತರ ದೆಹಲಿ ಮೂಲದ ಯುವತಿಯ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿದೆ. ದೆಹಲಿಯ ಕಾಲೇಜಿನಲ್ಲಿ ತಾನು ಪದವಿ ವ್ಯಾಸಂಗ ಮಾಡುತ್ತಿರುವುದಾಗಿ ಯುವತಿ ತಿಳಿಸಿದ್ದಾಳೆ. ಅವಳ ಪ್ರೀತಿ ಸಂಪಾದಿಸಲು ಈತ ನಾನು ಬೆಂಗಳೂರಿನ ಇಸ್ರೋದಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ.

ಅಷ್ಟು ಮಾತಗ್ರವಲ್ಲದೇ ಬೆಂಗಳೂರಿನಲ್ಲಿ ಕಾರಿನಲ್ಲಿ ಓಡಾಡುತ್ತಿದ್ದ ಈತ ಕಾರಿನ ಮೇಲೆ ಭಾರತ ಸರ್ಕಾರ ಎಂದು ಕೆಂಪು ಸ್ಟಿಕ್ಕರ್ ಹಾಕಿಕೊಂಡಿದ್ದ. ಈತನ ಬಗ್ಗೆ ಅನುಮಾನಗೊಂಡ ಸಾರ್ವಜನಿಕರು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈತನ ಬಗ್ಗೆ ವಿವಿರ ಸಂಗ್ರಹಿಸಿದ ಪೊಲೀಸರು ಎಚ್ಎಎಲ್ ಬಳಿ ಕಾರಿನಲ್ಲಿ ತೆರಳುತ್ತಿದ್ದಾಗ ಬಂಧಿಸಿದ್ದಾರೆ.

ಪ್ರೇಮ ಪುರಾಣ : ಬಂಧಿತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಪ್ರೇಮ ಪುರಾಣಗಳೇ ಈತನ ಪುಂಡಾಟಿಕೆಗಳಿಗೆ ಕಾರಣ ಎಂದು ತಿಳಿದುಬಂದಿದೆ. ಬಂಧಿತನಿಂದ ಇಸ್ರೋದ ನಕಲಿ ಗುರುತಿನ ಚೀಟಿ, ಪ್ರಿಂಟರ್, ಮೊಬೈಲ್ ಸೇರಿದಂತೆ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜೀವನ್ ಭೀಮಾನಗರ ಪೊಲೀಸರು ಈತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.ಮನೆಯಲ್ಲೇ ನಕಲಿಯಾಗಿ ಇಸ್ರೋದ ಗುರುತಿನ ಕಾರ್ಡ್ ತಯಾರಿಸಿರುವುದಾಗಿ ಈತ ಒಪ್ಪಿಕೊಂಡಿದ್ದಾನೆ. ಕಾರಿನ ಮೇಲೂ ಕೇಂದ್ರ ಸರ್ಕಾರದ ನಕಲಿ ಗುರುತಿನ ಚೀಟಿ ಅಂಟಿಸಿಕೊಂಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ಬಾಡಿಗೆ ಕಾರು : ಬಂಧಿತ ಆರೋಪಿ ಮರ್ಷಿದ್ ಅಕ್ಮಲ್ ಬಳಿಯಲ್ಲಿ ಕಾರು ಇಲ್ಲದಿದ್ದರೂ ಬಾಡಿಗೆ ಕಾರು ಪಡೆದು ಅದರ ಮೇಲೆ ಸರ್ಕಾರದ ಬೋರ್ಡ್ ಹಾಕಿಕೊಂಡು ತಿರುಗಾಡುತ್ತಿದ್ದ. ತಿಂಗಳಿಗೆ 20 ಸಾವಿರ ರೂ. ಬಾಡಿಗೆ ನೀಡಿ ಕಾರನ್ನು ಪಡೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದ ಆರೋಪಿ ಕೈಯಲ್ಲಿ ಇಷ್ಟು ಹಣ ಹೇಗೆ ಬಂತು ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ಸ್ಟೇಕ್ ಬ್ಯಾಂಕ್ ಆಫ್ ಇಂಡಿಯಾದ ಪಾಸ್ ಬುಕ್ ಮತ್ತು ಎಟಿಎಂ ಕಾರ್ಡ್ ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಬ್ಯಾಂಕ್ ಖಾತೆಯ ವಿವಿರ ಸಂಗ್ರಹಿಸುತ್ತಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+